ವಿಜಯಪುರ: ನಗರದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ ಅವರ ನೇತೃತ್ವದಲ್ಲಿ ಸಾಮೂಹಿಕ ಬನ್ನಿ-ವಿನಿಮಯ ಕಾರ್ಯಕ್ರಮ ಮಂಗಳವಾರ ಸಂಜೆ ನಡೆಯಿತು.
ಕೆಎಸ್‌ಆರ್‌ಟಿಸಿ ಡಿಪೋ ಬಳಿ ಇರುವ ಅವರ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ವಿಜಯಪುರ, ಜಿಲ್ಲೆಯ ಎಲ್ಲ ತಾಲೂಕಿನ ಜನರು ಬನ್ನಿ ವಿನಿಮಯ ಮಾಡಿ “ನಾವು ನೀವು ಬಂಗಾರದ ಹಾಗೆ ಇರೋಣ” ಎಂದು ಹಬ್ಬದ ಶುಭ ಕೋರಿದರು.
ಈ ಸಂದರ್ಭ ಉಮೇಶ ಕಾರಜೋಳ ಮಾತನಾಡಿ, ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳು ಸಹೋದರತೆ, ಭಾವೈಕ್ಯತೆ ಹಾಗೂ ಆಧ್ಯಾತ್ಮಿಕತೆಯನ್ನು ಹೆಚ್ಚಿಸಲು ತಮ್ಮದೇ ಆದ ಪಾತ್ರ ವಹಿಸುತ್ತವೆ. ಅದರಲ್ಲೂ ನವರಾತ್ರಿ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಪವಿತ್ರವಾದ ಶಮಿ ವೃಕ್ಷದ ಎಲೆಗಳನ್ನು ಬಂಗಾರ ರೂಪದಲ್ಲಿ ವಿನಿಮಯ ಮಾಡಿಕೊಳ್ಳುವುದರ ಹಿಂದೆ ಅನೇಕ ಅರ್ಥವಿದೆ, ಎಲ್ಲರೂ ಸುಖವಾಗಿರಲಿ, ಎಲ್ಲರೂ ಇರಲಿ ಎನ್ನುವ ಭಾವಾರ್ಥವಿದೆ, ಹಬ್ಬಗಳ ಹಿಂದಿನ ಭಾವವನ್ನು ನಾವು ಅರಿತುಕೊಂಡು ಮುನ್ನಡೆಯಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಾಹೇಬಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ಶರಣು ಸಬರದ, ಸತೀಶ ಬಾಗಿ, ವಿರೇಶ ಗೊಬ್ಬೂರ, ರಾಹುಲ ಕಾರಜೋಳ , ಸಂತೋಷ ಝಳಕಿ, ಕಲ್ಮೇಶ ಅಮರಾವತಿ, ಚಾಂದಸಾಬ ಮುಲ್ಲಾ, ಸುರೇಶ ಗುಣಕಿ, ಸಾಗರ ಗಾಯಕವಾಡ ಸೇರಿದಂತೆ ಅನೇಕರು ಭಾಗವಹಿಸಿದ್ದರು
Related Posts
Add A Comment