Author: editor.udayarashmi@gmail.com

ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಸಚಿವ ಡಾ. ಎಂ.ಬಿ.ಪಾಟೀಲ ಕರೆ ವಿಜಯಪುರ: ವಿಶೇಷ ಚೇತನರು ತಮ್ಮಲ್ಲಿರುವ ಕೀಳರಿಮೆ ಭಾವನೆ ತೊರೆದು ಸಕಾರಾತ್ಮಕ ಯೋಚನೆಯೊಂದಿಗೆ ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಬಿಗಳಾಗಿ ಜೀವನ ನಡೆಸುವಂತೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಸೋಮವಾರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಣದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ವಿಶೇಷಚೇತನರಿಗೆ ಕೇವಲ ಸಹಾನುಭೂತಿ ಒದಗಿಸದೇ, ಅವರಿಗೂ ಅವಕಾಶ ಕಲ್ಪಿಸಿಕೊಟ್ಟು ಸ್ವಾವಲಂಬಿಗಳನ್ನಾಗಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಮನೋಭಾವ ಬೆಳೆಸಿಕೊಳ್ಳಬೇಕು. ಸರ್ಕಾರವು ಸಹ ವಿಶೇಷಚೇತನರು ಆರ್ಥಿಕವಾಗಿ ಸದೃಢರಾಗಿ ಸ್ವಾವಲಂಬಿ ಬದುಕಿ ಸುಂದರ ಬದುಕು ರೂಪಿಸಿಕೊಳ್ಳಲು ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ…

Read More

ವಿಜಯಪುರ: ಪಿಂಚಣಿದಾರರ ಅಹವಾಲು ಆಲಿಸಲು ಹಾಗೂ ಅರ್ಹರಿಗೆ ಪಿಂಚಣಿ ಮಂಜೂರು ಮಾಡುವ ಕುರಿತು ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ ೧೩ ಗ್ರಾಮಗಳಲ್ಲಿ ಡಿ.೨ ರಂದು ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ ೧೧ ಗಂಟೆಗೆ ವಿಜಯಪುರ ಉಪ ವಿಭಾಗಾಧಿಕಾರಿಗಳು ಮನಗೂಳಿ ತಾಂಡಾ-೨ರ ಸೇವಾಲಾಲ ದೇವಸ್ಥಾನದಲ್ಲಿ, ಇಂಡಿ ಉಪವಿಭಾಗಾಧಿಕಾರಿಗಳು ಮುಳಸಾವಳಗಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ವಿಜಯಪುರ ಗ್ರೇಡ್-೨ ತಹಶೀಲ್ದಾರ ಅವರು ಅಂಕಲಗಿ ಶ್ರೀ ದುಸ್ಸಂಗರಾಯನ ದೇವಸ್ಥಾನದ ಆವರಣದಲ್ಲಿ, ಬಬಲೇಶ್ವರ ಗ್ರೇಡ್-೨ ತಹಶೀಲ್ದಾರ ಅವರು ಕಾತ್ರಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ತಿಕೋಟಾ ಗ್ರೇಡ್-೨ ತಹಶೀಲ್ದಾರ ಅವರು ಕೋಟ್ಯಾಳ ಗ್ರಾಮದ ಶ್ರೀ ಹನುಮಾನ ದೇವಸ್ಥಾನದಲ್ಲಿ, ನಿಡಗುಂದಿ ಗ್ರೇಡ್-೨ ತಹಶೀಲ್ದಾರ ಅವರು ಕಾಶಿನಕುಂಟೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಹಾಗೂ ಮುದ್ದೇಬಿಹಾಳ ಗ್ರೇಡ್-೨ ತಹಶೀಲ್ದಾರ ಅವರು ಆನಂದಮಠ ಗುಡಿಹಾಳನಲ್ಲಿ ಪಿಂಚಣಿ ಅದಾಲತ್ ನಡೆಸಲಿದ್ದಾರೆ.ತಾಳಿಕೋಟೆ ತಹಶೀಲ್ದಾರ ಅವರು ಕೂಚಬಾಳ ಶ್ರೀ ಭೀಮಾಶಂಕರ ಮಠದ ಆವರಣದಲ್ಲಿ, ಇಂಡಿ ಗ್ರೇಡ್-೨ ತಹಶೀಲ್ದಾರ ಅವರು ಮಾವಿನಹಳ್ಳಿ ಶ್ರೀ ಹನುಮಾನ…

Read More

ವಿಜಯಪುರ: ಜಿಲ್ಲೆಯಲ್ಲಿ ಹಿಂಗಾರು/ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಣಿ ಪ್ರಗತಿಯಲ್ಲಿದ್ದು, ಇನ್ನೂ ಹೆಚ್ಚಿನ ರೈತರು ತಮ್ಮ ಬೆಳೆ ವಿಮೆ ಮಾಡಿಸಿರುವುದಿಲ್ಲ. ಹಿಂಗಾರು/ಬೇಸಿಗೆ ಹಂಗಾಮಿನ ಪ್ರಮುಖ ಬೆಳೆಗಳಿಗೆ ಕೊನೆಯ ದಿನಾಂಕ ನಿಗದಿಪಡಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ಜಿಲ್ಲೆಯ ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.ವಿಮೆ ವಿಮೆಗೆ ನೊಂದಾಯಿಸಲು ಹಿಂಗಾರು ಹಂಗಾಮಿನ ಕಡಲೆ (ಮಳೆ ಆಶ್ರಿತ ಹಾಗೂ ನೀರಾವರಿ) ಬೆಳೆಗೆ ೨೦೨೩ರ ಡಿಸೆಂಬರ್ ೩೦, ಗೋಧಿ (ನೀ) ಬೆಳೆಗೆ ೨೦೨೩ರ ಡಿಸೆಂಬರ್ ೧೫ ಹಾಗೂ ಮುಸುಕಿನ ಜೋಳ (ನೀ) ಬೆಳೆಗೆ ೨೦೨೩ರ ಡಿಸೆಂಬರ್ ೦೧ ಕೊನೆಯ ದಿನಾಂಕವಾಗಿದೆ. ಬೇಸಿಗೆ ಹಂಗಾಮಿನ ಸೂರ್ಯಕಾಂತಿ (ನೀ) ಹಾಗೂ ಶೇಂಗಾ (ನೀ) ಬೆಳೆಗೆ ೨೦೨೪ರ ಫೆಬ್ರುವರಿ ೨೮ ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಬೆಳೆ ನಷ್ಟವಾಗಿರುವ ರೈತರು ಪರಿಹಾರ ಪಡೆಯಲು ತಮ್ಮ ಭೂಮಿ ವಿವರ ಹೊಂದಿರುವ ಎಫ್‌ಐಡಿ ಗುರುತಿನ ಸಂಖ್ಯೆ ಹೊಂದುವುದು ಅವಶ್ಯಕವಾಗಿರುವುದರಿಂದ ಕೂಡಲೇ ರೈತರು ಸಮೀಪದ ರೈತ ಸಂಪರ್ಕ ಕೇಂದ್ರ, ಕಂದಾಯ, ತೊಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆ ಕಚೇರಿಗಳಲ್ಲಿ ಎಫ್‌ಐಡಿ ಮಾಡಿಸಿಕೊಳ್ಳುವಂತೆ ಹಾಗೂ ಎಲ್ಲ ಜಮೀನುಗಳನ್ನು ಎಫ್‌ಐಡಿಗೆ ಜೋಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.ಸರ್ಕಾರ ಜಿಲ್ಲೆಯ ೧೩ ತಾಲುಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬರ ಪರಿಹಾರ ಹಣ ಮಾತ್ರವಲ್ಲದೇ ಬೆಳೆ ವಿಮೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನ ಮಾರಾಟ ಮಾಡಲು ಮತ್ತು ಸರ್ಕಾರದ ಯಾವುದೇ ಯೋಜನೆಯ ಸವಲತ್ತು ಹಾಗೂ ಬ್ಯಾಂಕ್ ಸಾಲ ಪಡೆಯಲು ಎಫ್‌ಐಡಿ ಅಗತ್ಯವಿದ್ದು, ಎಫ್‌ಐಡಿಯನ್ನು ಹೊಂದಿರದ ರೈತರು ಆಧಾರ ಕಾರ್ಡ ಪ್ರತಿ, ಬ್ಯಾಂಕ್ ಖಾತೆ ಪುಸ್ತಕದ ಪ್ರತಿ ತಮ್ಮ ಹೆಸರಿನಲ್ಲಿರುವ ಎಲ್ಲ ಜಮೀನುಗಳ ಪಹಣಿ, ಮೊಬೈಲ್ ಸಂಖ್ಯೆ, ಜಾತಿ ಪ್ರಮಾಣ ಪತ್ರದ ಪ್ರತಿ (ಎಸ್ಸಿ-ಎಸ್ಟಿ ರೈತರು), ಪಾಸ್ ಪೋರ್ಟ ಅಳತೆಯ ಫೋಟೋ ದಾಖಲೆಗಳನ್ನು…

Read More

ಇಂಡಿ: ಹಾಸ್ಯವು ಬುದ್ಧಿವಾದದ ಮೂಲತತ್ವವಾಗಿದೆ. ಸಾಂಕ್ರಾಮಿಕ ಪರಹಿತಚಿಂತನೆಯ ನಗುವು ಆತ್ಮವಾಗಿದೆ. ನಗುವಿನಿಂದ ಆಯುಷ್ಯ ಹೆಚ್ಚಾಗುತ್ತದೆ ಎಂದು ಗಂಗಾವತಿ ಪ್ರಾಣೇಶ ಹೇಳಿದರು.ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ನೂತನ ದೇವಾಲಯದ ಲೋಕಾರ್ಪಣೆ ನಿಮಿತ್ತವಾಗಿ ನಡೆದ ಖ್ಯಾತ ಹಾಸ್ಯಗಾರ ಶ್ರೀ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ,ನರಸಿಂಹ ಜೋಶಿ ತಂಡದಿಂದ ನಡೆದ ನಗೆ ಸಂಭ್ರಮ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ನರಸಿಂಹ ಜೋಶಿ ಮಾತನಾಡಿ, ಹಾಸ್ಯವು ಹೃದಯಗಳನ್ನು ಅವರ ಬೆತ್ತಲೆ ವಾಸ್ತವಿಕತೆಯಲ್ಲಿ ಸೆರೆಹಿಡಿಯುತ್ತದೆ. ಅದು ಮೀರಿದ ಅತಿವಾಸ್ತವಿಕತೆಯ ಕುರುಹುಗಳನ್ನು ಸಹ ನೀಡುತ್ತದೆ. ನಗುವಿಗೆ ವಯೋವೃದ್ಧಿಗೆ, ಮಿತಿಯಿಲ್ಲ. ಹಾಸ್ಯವು ರಂಗದ ಹಂತಗಳ ಜೀವವೈವಿಧ್ಯವನ್ನು ಸೆರೆಹಿಡಿಯುತ್ತದೆ ಎಂದರು.ಬಿಜೆಪಿ ಮುಖಂಡರು ಹಾಗೂ ಸ್ವದೇಶಿ ಜಾಗರಣ ಮಂಚ ಸಂಚಾಲಕ ಶಂಕರಗೌಡ ಪಾಟೀಲ ( ಡೋಮನಾಳ) ಹಾಗೂ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠಿ ಸಂಚಾಲಕ ಬಾಬುರಾಜೇಂದ್ರ ನಾಯಕ ಅ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತಡವಲಗಾ ಗ್ರಾಮದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು…

Read More

ವಿಜಯಪುರ: ಸೃಜನಾತ್ಮಕತೆ ಹೋರಹಾಕುವುದೇ ಸಹಪಠ್ಯ ಚಟುವಟಿಕೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಲೋಲಮಟ್ಟಿ ಹೇಳಿದರು.ತಾಲ್ಲೂಕಿನ ಐನಾಪೂರ ಎಲ್.ಟಿ. ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ಹಾಗೂ ಬಾಲಾಜಿ ಬಂಜಾರಾ ವಿಧ್ಯಾವರ್ಧಕ ಸಂಘದ ಸಹಯೋಗದಲ್ಲಿ ಸೊಮವಾರ ನಡೆದ 2023-24 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಮಾತನಾಡಿ ಶಿಕ್ಷಕರು ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ ಸಂಸ್ಕೃತಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲೂ ಸಹ ಭಾಗಿಯಾಗಬೇಕು ಆಗ ಮಾತ್ರ ಬೋಧನೆಯಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಕೊಳ್ಳಬಹುದಾಗಿದೆ ಎಂದು ಹೇಳಿದರು.ಶಿಕ್ಷಣ ಸಂಯೋಜಕರು ಪ್ರಭು ಬಿರಾದಾರ ಮಾತನಾಡಿ ಪ್ರತಿ ವರ್ಷವೂ ಕೂಡ ಸಹಪಠ್ಯ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಮ್ಮ ತಾಲ್ಲೂಕಿನಲ್ಲಿ ನಿರ್ವಹಣೆ ಮಾಡುತ್ತಾ ಬಹುಮಾನ ಪಡೆಯುವ ಶಿಕ್ಷಕರಿಗೆ ಪ್ರಥಮ, ದ್ವಿತೀಯ ಹಾಗುಯ ತೃತೀಯ…

Read More

ಮುದ್ದೇಬಿಹಾಳ: ನಮ್ಮ ದೇಶದ ಸಂವಿಧಾನವು ಸಮಬಾಳು ಸಮಪಾಲು ತತ್ವದ ಮೇಲೆ ರೂಪಿತವಾಗಿದ್ದು ದೇಶದ ಪ್ರತಿಯೊಬ್ಬ ಬಡವ ಬಲ್ಲಿದನ ಅಭಿವೃದ್ದಿಗೆ ಪೂರಕವಾಗಿದೆಯೆಂದು ಹಾರ್ವರ್ಡ್ ಪಿಯು ಸೈನ್ಸ ಕಾಲೇಜಿನ ಅಧ್ಯಕ್ಷ ಎಸ್.ಎಂ.ನೆರಬೆಂಚಿ ಹೇಳಿದರು.ಪಟ್ಟಣದ ಹಾರ್ವರ್ಡ್ ಪಿಯು ಸೈನ್ಸ ಕಾಲೇಜಿನಲ್ಲಿ ಜರುಗಿದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಮ್ಮ ಸಂವಿಧಾನ ಗ್ರಂಥವು ತುಂಬಾ ದೊಡ್ಡದಿದ್ದರೂ ಕಠಿಣತೆಯನ್ನು ಹೊಂದಿಲ್ಲ. ಹಾಗಾಗಿ ಈಗಾಗಲೇ ೧೦೪ ಬಾರಿ ತಿದ್ದುಪಡಿಯಾಗಿದೆ. ಕರಡು ಸಮಿತಿಗೆ ಗಾಂಧೀಜಿ ರವರು ಕಾನೂನು, ರಾಜನೀತಿ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದ ಶೈಕ್ಷಣಿಕ ದಿಗ್ಗಜ ಅಂಬೇಡ್ಕರ್ ರವರ ಹೆಸರನ್ನು ಕರಡು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಸೂಚಿಸಿದ್ದರಿಂದಲೇ ಇಂಥ ಅಧ್ಬುತವಾದ ಸಂವಿಧಾನ ರಚನೆಯಾಗಲು ಸಾಧ್ಯವಾಯಿತು ಎಂದು ಹೇಳಿದರು.ಅತಿಥಿಯಾಗಿ ಆಗಮಿಸಿದ್ದ ಸಂತ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಎಸ್.ಮೇಟಿ ಮಾತನಾಡಿ ನಮ್ಮ ದೇಶದ ಸಂವಿಧಾನವು ದೇಶದ ಎಲ್ಲ ಜಾತಿ, ಧರ್ಮಗಳ ಜನರನ್ನು ಒಂದುಗೂಡಿಸುವ ಶಾಂತಿಯ ತೋಟವೆಂದು ಬಣ್ಣಿಸಿದರು.ಕಾರ್ಯಕ್ರಮಕ್ಕೂ ಮೊದಲು ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಪಟ್ಟಣದ ಸರ್ಕಾರಿ ಪದವಿ…

Read More

ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಕಾಯಚಿಕಿತ್ಸಾ ವಿಭಾಗದ ವತಿಯಿಂದ ನಾನಾ ಚರ್ಮರೋಗ ಕಾಯಿಲೆಗಳಿಗಾಗಿ ನವೆಂಬರ್ 29 ರಿಂದ ಡಿಸೆಂಬರ್ 2ರ ವರೆಗೆ ಉಚಿತ ತಪಾಸಣೆ ಶಿಬಿರ ಆಯೋಜಿಸಲಾಗಿದೆ.ನಾಲ್ಕು ದಿನ ನಡೆಯಲಿರುವ ಈ ಶಿಬಿರದಲ್ಲಿ ನಾನಾ ರೀತಿಯ ಚರ್ಮರೋಗಗಳಾದ ಭಂಗು, ಮೊಡವೆ, ಚಿಬ್ಬು, ಗಜಕರ್ಣ, ಇಸುಬು, ಅಲರ್ಜಿಯಿಂದ ಅಗುವ ತುರಿಕೆ ಮುಂತಾದ ದೀರ್ಘಕಾಲಿನ ಚರ್ಮರೋಗಳಿಗೆ ಉಚಿತವಾಗಿ ತಪಾಸಣೆ ನಡೆಸಲಾಗುವುದು. ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಮಟ್ಟಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊ. ಸಂ: 9513397413, 7483278348 ಸಂಪರ್ಕಿಸಬಹುದಾಗಿದೆ.

Read More

ಸಾರವಾಡದ ದ್ಯಾಮವ್ವದೇವಿ ದೇವಸ್ಥಾನ ಉದ್ಘಾಟನೆ ಮತ್ತು ಜಾತ್ರೆಯಲ್ಲಿ ಪಾಲ್ಗೊಂಡ ಸಚಿವ ಎಂ.ಬಿ.ಪಾಟೀಲ ಸ್ಪಷ್ಠನೆ ವಿಜಯಪುರ: ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರು ಇಂದು ಸೋಮವಾರ ಬಬಲೇಶ್ವರ ತಾಲೂಕಿನ ಸಾರವಾಡ ದ್ಯಾಮವ್ವದೇವಿ ಮತ್ತು ವಿಜಯಪುರ ನಗರದ ಬುರಣಾಪುರ ರಸ್ತೆಯಲ್ಲಿರುವ ಘತ್ತರಗಿ ಭಾಗಮ್ಮ ದೇವಿಯ ಜಾತ್ರೆಯಲ್ಲಿ ಪಾಲ್ಗೋಂಡು ದೇವಿಯ ಆಶೀರ್ವಾದ ಪಡೆದರು.ಬಬಲೇಶ್ವರ ತಾಲೂಕಿನ ಸಾರವಾಡ ಗ್ರಾಮದಲ್ಲಿ ನಡೆಯುತ್ತಿರುವ ದ್ಯಾಮವ್ವದೇವಿ ದೇವಸ್ಥಾನದ ಉದ್ಘಾಟನೆ ಮತ್ತು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡ ಸಚಿವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಾರವಾಡ ಗ್ರಾಮಸ್ಥರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ ಅವರು, ದೇಶದಲ್ಲಿ ಈಗ ಐದಾರು ರಾಜ್ಯಗಳು ಭೀಕರ ಬರದಿಂದ ತತ್ತರಿಸಿವೆ. ನಮ್ಮ ರಾಜ್ಯದಲ್ಲಿಯೂ ಬರಗಾಲ ಉಂಟಾಗಿದ್ದು, ವಿಜಯಪುರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ರಾಜ್ಯ ಸರಕಾರ ಬರವನ್ನು ಸಮರ್ಥವಾಗಿ…

Read More

ಬಸವನಬಾಗೇವಾಡಿ: ಪಾಲಕರು ತಮ್ಮ ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸಬೇಕು. ಅವರ ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹ ನೀಡಬೇಕೆಂದು ನೇಗಿನಾಳದ ಕೆಬಿಎಲ್ಪಿಎಸ್ ಮುಖ್ಯಗುರು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.ತಾಲೂಕಿನ ನೇಗಿನಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಜರುಗಿದ ಬಾಲ ವಿಕಾಸ ಸಮಿತಿ ಹಾಗೂ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕಡೆಗೆ ಆದ್ಯತೆ ಕೊಡುವ ಮೂಲಕ ಅವರ ಆರೋಗ್ಯದ ರಕ್ಷಣೆ ಮಾಡಬೇಕು. ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತಿ ಸಜ್ಜನ ಮಾತನಾಡಿ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಅಂಗನವಾಡಿ ಕಾರ್ಯಕರ್ತೆಯರು ಗಮನಹರಿಸಬೇಕೆಂದರು.ಅಧ್ಯಕ್ಷತೆಯನ್ನು ಡೋಣೂರ ಗ್ರಾಮ ಪಂಚಾಯಿತಿ ಸದಸ್ಯೆ -ತೀಮಾ ಬಿಜಾಪುರ ವಹಿಸಿದ್ದರು. ಸಭೆಯಲ್ಲಿ ಮಹಿಬೂಬ ದುಂಡಸಿ, ಶಮಶುದ್ಧೀನ ಕುಡಚಿ, ಮಹಿಬೂಬ ಮುಲ್ಲಾ, ಅದಮ ಪರೂತಾಬಾದ, ಶೋಭ ಚವ್ಹಾಣ, ರಾಜಾಮಾ ಪರೂತಾಬಾದ, ನೀಲಮ್ಮ ಮಠ ಇತರರು ಇದ್ದರು.ರಜಿಯಾ…

Read More