ವಿಜಯಪುರ: ಜಿಲ್ಲೆಯಲ್ಲಿ ಹಿಂಗಾರು/ಬೇಸಿಗೆ ಹಂಗಾಮಿನ ಬೆಳೆ ವಿಮೆ ನೊಂದಣಿ ಪ್ರಗತಿಯಲ್ಲಿದ್ದು, ಇನ್ನೂ ಹೆಚ್ಚಿನ ರೈತರು ತಮ್ಮ ಬೆಳೆ ವಿಮೆ ಮಾಡಿಸಿರುವುದಿಲ್ಲ. ಹಿಂಗಾರು/ಬೇಸಿಗೆ ಹಂಗಾಮಿನ ಪ್ರಮುಖ ಬೆಳೆಗಳಿಗೆ ಕೊನೆಯ ದಿನಾಂಕ ನಿಗದಿಪಡಿಸಲಾಗಿದ್ದು, ನಿಗದಿತ ದಿನಾಂಕದೊಳಗೆ ಜಿಲ್ಲೆಯ ರೈತರು ಬೆಳೆ ವಿಮೆ ಮಾಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮನವಿ ಮಾಡಿಕೊಂಡಿದ್ದಾರೆ.
ವಿಮೆ ವಿಮೆಗೆ ನೊಂದಾಯಿಸಲು ಹಿಂಗಾರು ಹಂಗಾಮಿನ ಕಡಲೆ (ಮಳೆ ಆಶ್ರಿತ ಹಾಗೂ ನೀರಾವರಿ) ಬೆಳೆಗೆ ೨೦೨೩ರ ಡಿಸೆಂಬರ್ ೩೦, ಗೋಧಿ (ನೀ) ಬೆಳೆಗೆ ೨೦೨೩ರ ಡಿಸೆಂಬರ್ ೧೫ ಹಾಗೂ ಮುಸುಕಿನ ಜೋಳ (ನೀ) ಬೆಳೆಗೆ ೨೦೨೩ರ ಡಿಸೆಂಬರ್ ೦೧ ಕೊನೆಯ ದಿನಾಂಕವಾಗಿದೆ. ಬೇಸಿಗೆ ಹಂಗಾಮಿನ ಸೂರ್ಯಕಾಂತಿ (ನೀ) ಹಾಗೂ ಶೇಂಗಾ (ನೀ) ಬೆಳೆಗೆ ೨೦೨೪ರ ಫೆಬ್ರುವರಿ ೨೮ ಕೊನೆಯ ದಿನಾಂಕವಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
