ಬಸವನಬಾಗೇವಾಡಿ: ಪಾಲಕರು ತಮ್ಮ ಮಕ್ಕಳನ್ನು ಸರಿಯಾಗಿ ಶಾಲೆಗೆ ಕಳುಹಿಸಬೇಕು. ಅವರ ವಿದ್ಯಾಭ್ಯಾಸಕ್ಕೆ ಸದಾ ಪ್ರೋತ್ಸಾಹ ನೀಡಬೇಕೆಂದು ನೇಗಿನಾಳದ ಕೆಬಿಎಲ್ಪಿಎಸ್ ಮುಖ್ಯಗುರು, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.
ತಾಲೂಕಿನ ನೇಗಿನಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಶನಿವಾರ ಜರುಗಿದ ಬಾಲ ವಿಕಾಸ ಸಮಿತಿ ಹಾಗೂ ಪಾಲಕರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಾಲಕರು ತಮ್ಮ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಕಡೆಗೆ ಆದ್ಯತೆ ಕೊಡುವ ಮೂಲಕ ಅವರ ಆರೋಗ್ಯದ ರಕ್ಷಣೆ ಮಾಡಬೇಕು. ಸರ್ಕಾರದ ಯೋಜನೆಗಳನ್ನು ನೇರವಾಗಿ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಬಹುಮುಖ್ಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತಿ ಸಜ್ಜನ ಮಾತನಾಡಿ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಡೆಗೆ ಅಂಗನವಾಡಿ ಕಾರ್ಯಕರ್ತೆಯರು ಗಮನಹರಿಸಬೇಕೆಂದರು.
ಅಧ್ಯಕ್ಷತೆಯನ್ನು ಡೋಣೂರ ಗ್ರಾಮ ಪಂಚಾಯಿತಿ ಸದಸ್ಯೆ -ತೀಮಾ ಬಿಜಾಪುರ ವಹಿಸಿದ್ದರು. ಸಭೆಯಲ್ಲಿ ಮಹಿಬೂಬ ದುಂಡಸಿ, ಶಮಶುದ್ಧೀನ ಕುಡಚಿ, ಮಹಿಬೂಬ ಮುಲ್ಲಾ, ಅದಮ ಪರೂತಾಬಾದ, ಶೋಭ ಚವ್ಹಾಣ, ರಾಜಾಮಾ ಪರೂತಾಬಾದ, ನೀಲಮ್ಮ ಮಠ ಇತರರು ಇದ್ದರು.
ರಜಿಯಾ ಡೋಣೂರ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

