ಇಂಡಿ: ಹಾಸ್ಯವು ಬುದ್ಧಿವಾದದ ಮೂಲತತ್ವವಾಗಿದೆ. ಸಾಂಕ್ರಾಮಿಕ ಪರಹಿತಚಿಂತನೆಯ ನಗುವು ಆತ್ಮವಾಗಿದೆ. ನಗುವಿನಿಂದ ಆಯುಷ್ಯ ಹೆಚ್ಚಾಗುತ್ತದೆ ಎಂದು ಗಂಗಾವತಿ ಪ್ರಾಣೇಶ ಹೇಳಿದರು.
ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ನೂತನ ದೇವಾಲಯದ ಲೋಕಾರ್ಪಣೆ ನಿಮಿತ್ತವಾಗಿ ನಡೆದ ಖ್ಯಾತ ಹಾಸ್ಯಗಾರ ಶ್ರೀ ಗಂಗಾವತಿ ಪ್ರಾಣೇಶ, ಬಸವರಾಜ ಮಾಮನಿ,ನರಸಿಂಹ ಜೋಶಿ ತಂಡದಿಂದ ನಡೆದ ನಗೆ ಸಂಭ್ರಮ ಹಾಗೂ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.
ನರಸಿಂಹ ಜೋಶಿ ಮಾತನಾಡಿ, ಹಾಸ್ಯವು ಹೃದಯಗಳನ್ನು ಅವರ ಬೆತ್ತಲೆ ವಾಸ್ತವಿಕತೆಯಲ್ಲಿ ಸೆರೆಹಿಡಿಯುತ್ತದೆ. ಅದು ಮೀರಿದ ಅತಿವಾಸ್ತವಿಕತೆಯ ಕುರುಹುಗಳನ್ನು ಸಹ ನೀಡುತ್ತದೆ. ನಗುವಿಗೆ ವಯೋವೃದ್ಧಿಗೆ, ಮಿತಿಯಿಲ್ಲ. ಹಾಸ್ಯವು ರಂಗದ ಹಂತಗಳ ಜೀವವೈವಿಧ್ಯವನ್ನು ಸೆರೆಹಿಡಿಯುತ್ತದೆ ಎಂದರು.
ಬಿಜೆಪಿ ಮುಖಂಡರು ಹಾಗೂ ಸ್ವದೇಶಿ ಜಾಗರಣ ಮಂಚ ಸಂಚಾಲಕ ಶಂಕರಗೌಡ ಪಾಟೀಲ ( ಡೋಮನಾಳ) ಹಾಗೂ ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠಿ ಸಂಚಾಲಕ ಬಾಬುರಾಜೇಂದ್ರ ನಾಯಕ ಅ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ತಡವಲಗಾ ಗ್ರಾಮದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯರು ವಹಿಸಿದ್ದರು, ಸಾನಿಧ್ಯವನ್ನು ವಹಿಸಿದ್ದ ಕೊಟ್ಟೂರು ಶ್ರೀ ಸಿದ್ದಲಿಂಗ ಶಿವಾಚಾರ್ಯರು, ರೋಡಗಿ ಶ್ರೀಗಳು, ಅಭಿನವ ಪುಂಡಲಿಂಗ ಮಾಹಾರಾಜರು , ಹಾಗೂ ಖ್ಯಾತ ಪುರಾಣಿಕರಾದ ಶಿವಾನಂದ ಶಾಸ್ತ್ರಿಗಳು ಉಪಸ್ಥಿತರಿದ್ದರು. ಜಿ.ಪಂ ಮಾಜಿ ಉಪಾಧ್ಯಕ್ಷ ಬಾಬು ಸಾವಕಾರ ಮೇತ್ರಿ, ಬಸವರಾಜ ಇಂಡಿ, ಚಂದ್ರಶೇಖರ ರೂಗಿ, ಮಳಸಿದ್ದಪ್ಪ ಬ್ಯಾಳಿ, ಕಾಂತು ಇಂಡಿ ,ಮಲ್ಲನಗೌಡ ಪಾಟೀಲ, ಗುರುನಾಥ ಬಗಲಿ, ಅಪ್ಪು ಕಲ್ಲೂರ, ಜಟ್ಟಪ್ಪ ಮರಡಿ,ಗುಂಡು ರೂಗಿ,ಮಲ್ಲಪ್ಪ ತಡಗಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

