ಮುದ್ದೇಬಿಹಾಳ: ನಮ್ಮ ದೇಶದ ಸಂವಿಧಾನವು ಸಮಬಾಳು ಸಮಪಾಲು ತತ್ವದ ಮೇಲೆ ರೂಪಿತವಾಗಿದ್ದು ದೇಶದ ಪ್ರತಿಯೊಬ್ಬ ಬಡವ ಬಲ್ಲಿದನ ಅಭಿವೃದ್ದಿಗೆ ಪೂರಕವಾಗಿದೆಯೆಂದು ಹಾರ್ವರ್ಡ್ ಪಿಯು ಸೈನ್ಸ ಕಾಲೇಜಿನ ಅಧ್ಯಕ್ಷ ಎಸ್.ಎಂ.ನೆರಬೆಂಚಿ ಹೇಳಿದರು.
ಪಟ್ಟಣದ ಹಾರ್ವರ್ಡ್ ಪಿಯು ಸೈನ್ಸ ಕಾಲೇಜಿನಲ್ಲಿ ಜರುಗಿದ ಸಂವಿಧಾನ ಸಮರ್ಪಣಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಮ್ಮ ಸಂವಿಧಾನ ಗ್ರಂಥವು ತುಂಬಾ ದೊಡ್ಡದಿದ್ದರೂ ಕಠಿಣತೆಯನ್ನು ಹೊಂದಿಲ್ಲ. ಹಾಗಾಗಿ ಈಗಾಗಲೇ ೧೦೪ ಬಾರಿ ತಿದ್ದುಪಡಿಯಾಗಿದೆ. ಕರಡು ಸಮಿತಿಗೆ ಗಾಂಧೀಜಿ ರವರು ಕಾನೂನು, ರಾಜನೀತಿ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದ ಶೈಕ್ಷಣಿಕ ದಿಗ್ಗಜ ಅಂಬೇಡ್ಕರ್ ರವರ ಹೆಸರನ್ನು ಕರಡು ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲು ಸೂಚಿಸಿದ್ದರಿಂದಲೇ ಇಂಥ ಅಧ್ಬುತವಾದ ಸಂವಿಧಾನ ರಚನೆಯಾಗಲು ಸಾಧ್ಯವಾಯಿತು ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ್ದ ಸಂತ ಕನಕದಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಬಿ.ಎಸ್.ಮೇಟಿ ಮಾತನಾಡಿ ನಮ್ಮ ದೇಶದ ಸಂವಿಧಾನವು ದೇಶದ ಎಲ್ಲ ಜಾತಿ, ಧರ್ಮಗಳ ಜನರನ್ನು ಒಂದುಗೂಡಿಸುವ ಶಾಂತಿಯ ತೋಟವೆಂದು ಬಣ್ಣಿಸಿದರು.
ಕಾರ್ಯಕ್ರಮಕ್ಕೂ ಮೊದಲು ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು. ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಪ್ರಾಧ್ಯಾಪಕಿ ರಾಜೇಶ್ವರಿ ಪಾತ್ರೋಟ, ಪ್ರಾಂಶುಪಾಲೆ ಆರ್.ಬಿ.ರೂಡಗಿ ಸೇರಿದಂತೆ ಸಿಬ್ಬಂದಿವರ್ಗ, ವಿದ್ಯಾರ್ಥಿ, ವಿದ್ಯಾರ್ಥಿಯರು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳಾದ ಅದಿತಿ ಪವಾರ ಮತ್ತು ಸಂಗಮ್ಮ ಮನಗೂಳಿ ಕಾರ್ಯಕ್ರಮ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

