ವಿಜಯಪುರ: ಸೃಜನಾತ್ಮಕತೆ ಹೋರಹಾಕುವುದೇ ಸಹಪಠ್ಯ ಚಟುವಟಿಕೆ ಎಂದು ವಿಜಯಪುರ ಗ್ರಾಮೀಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಲೋಲಮಟ್ಟಿ ಹೇಳಿದರು.
ತಾಲ್ಲೂಕಿನ ಐನಾಪೂರ ಎಲ್.ಟಿ. ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ಹಾಗೂ ಬಾಲಾಜಿ ಬಂಜಾರಾ ವಿಧ್ಯಾವರ್ಧಕ ಸಂಘದ ಸಹಯೋಗದಲ್ಲಿ ಸೊಮವಾರ ನಡೆದ 2023-24 ನೇ ಸಾಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ ಮಾತನಾಡಿ ಶಿಕ್ಷಕರು ಕೇವಲ ಬೋಧನೆಗೆ ಮಾತ್ರ ಸೀಮಿತವಾಗದೆ ಸಂಸ್ಕೃತಿಕ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲೂ ಸಹ ಭಾಗಿಯಾಗಬೇಕು ಆಗ ಮಾತ್ರ ಬೋಧನೆಯಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಕೊಳ್ಳಬಹುದಾಗಿದೆ ಎಂದು ಹೇಳಿದರು.
ಶಿಕ್ಷಣ ಸಂಯೋಜಕರು ಪ್ರಭು ಬಿರಾದಾರ ಮಾತನಾಡಿ ಪ್ರತಿ ವರ್ಷವೂ ಕೂಡ ಸಹಪಠ್ಯ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಮ್ಮ ತಾಲ್ಲೂಕಿನಲ್ಲಿ ನಿರ್ವಹಣೆ ಮಾಡುತ್ತಾ ಬಹುಮಾನ ಪಡೆಯುವ ಶಿಕ್ಷಕರಿಗೆ ಪ್ರಥಮ, ದ್ವಿತೀಯ ಹಾಗುಯ ತೃತೀಯ ಸ್ಥಾನದ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಎಚ್.ಎಂ. ಚೌಹಾನ, ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಎ. ಬಿ. ದಡಕೆ, ಬಿ. ಎಸ್. ಮಠ, ಸಂದೀಪ್ ದೇಶಪಾಂಡೆ, ಹನುಮಂತ್ ಕುಡಚಿ, ಬಿ.ಎ. ರೆಬಿನಾಳ, ಜಿಓಸಿಸಿ ಬ್ಯಾಂಕಿನ ನಿರ್ದೇಶಕ, ಸಿ.ಟಿ. ಜತ್ತಿ, ನೀಲಾ ಇಂಗಳೆ, ನಿಜು ಮೇಲಿನಕೇರಿ, ಉದಯಕುಮಾರ ಕೋಟ್ಯಾಳ, ಮಲ್ಲಿಕಾರ್ಜುನ್ ಟಕ್ಕಳಕಿ, ರವೀಂದ್ರ ಉಗಾರ, ಚೆನ್ನಯ್ಯ ಮಠಪತಿ, ಸಾಬು ಗಗನಮಾಲಿ, ಎಚ್.ಎಸ್. ಇಂಡಿ, ವಾಸಿಂ ಚಟ್ಟರಕಿ, ಸಂಜು ಚವಾನ, ವಿಶ್ವನಾಥ ಮೇತ್ರಿ, ಶಂಕರ್ ತಳವಾರ, ಜಿ.ಟಿ. ಕಾಗವಾಡ, ರವಿ ಪವಾರ್, ಸುಭಾಷ ರಾಥೋಡ ಇದ್ದರು.
ನಿರೂಪಣೆಯನ್ನ ಆರ್. ಕೆ. ಕುಲಕರ್ಣಿ, ಸ್ವಾಗತವನ್ನು ಶರಣು ರೂಗಿ, ವಂದನಾರ್ಪಣೆಯನ್ನು ರವೀಂದ್ರ ಚಿಕ್ಕಮಠ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

