Author: editor.udayarashmi@gmail.com

ತಾಳಿಕೋಟಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಹೌಸಿಂಗ್ ಫಾರ್ ಆಲ್ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳ ಸಹ ಯೋಜನೆಯೊಂದಿಗೆ ನಿರ್ಮಿಸುತ್ತಿರುವ 600 ( ಜಿ+3) ಗುಂಪು ಮನೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಸಿ. ಎಸ್. ನಾಡಗೌಡ ಅವರು ಭೂಮಿ ಪೂಜೆ ನೆರವೇರಿಸಿದರು.ಬುಧವಾರ ಪಟ್ಟಣದ ಹರನಾಳ ರಸ್ತೆಯ ಪಕ್ಕದಲ್ಲಿ ನಿರ್ಮಾಣಗೊಳ್ಳಲಿರುವ ನಿವೇಶನದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ತಾಳಿಕೋಟಿ ಪುರಸಭೆ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಈ ಬಡಾವಣೆ ಆಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಗೊಳ್ಳಲಿದ್ದು ಸಕಲ ಸೋಲತ್ತುಗಳನ್ನು ಹೊಂದಿರುವ ಒಂದು ಸುಂದರವಾದ ಬಡಾವಣೆ ಆಗಲಿದೆ ಇದು ತಾಳಿಕೋಟಿ ಪಟ್ಟಣದ ಉಪನಗರದಂತೆ ಆಗುವುದು ಈ ಕಾಮಗಾರಿಯು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯವಾಗಬೇಕಾದರೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಸಣ್ಣಪುಟ್ಟ ಏನಾದರೂ ತೊಂದರೆ ಹಾಗೂ ಸಮಸ್ಯೆಗಳು ಇದ್ದರೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಗೆಹರಿಸಿಕೊಳ್ಳಿ ಈ ಮನೆಗಳು ನಿರ್ಮಾಣವಾದಾಗ ತಾವು ತಮ್ಮ ನೂತನ ಮನೆಯಲ್ಲಿ ನೆಮ್ಮದಿ ಯ ಬದುಕು ನೆಡಸಿ ಎಂದು…

Read More

ಇಂಡಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮತ್ತು ಕಡಣಿಯ ಬೆರಗು ಪ್ರಕಾಶನದ ಸಹಯೋಗದಲ್ಲಿ ಡಾ. ಪ್ರಕಾಶ ಗ.ಖಾಡೆ ಅವರ ಬಾಳುಕುನ ಪುರಾಣ ಕಥಾ ಓದು ಮತ್ತು ಸಂವಾದ ಕಾರ್ಯಕ್ರಮವನ್ನು ಕಾಲೇಜು ಸಭಾಭವನದಲ್ಲಿ ಡಿಸೆಂಬರ್ ೨ ರಂದು ಹಮ್ಮಿಕೊಂಡಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ ಎಸ್. ಕತ್ತಿ ತಿಳಿಸಿದ್ದಾರೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಆರ್.ಎಚ್.ರಮೇಶ ವಹಿಸಲಿದ್ದಾರೆ. ಬಾಳುಕುನ ಪುರಾಣ ಕತಾವಲೋಕನವನ್ನು ಸವದತ್ತಿಯ ಸರಕಾರಿ ಪದವಿಪೂರ್ವ ಕಾಲೇಜಿ ಪ್ರಾಚಾರ್ಯ ಡಾ. ವೈ.ಎಂ.ಯಾಕೊಳ್ಳಿ ಅವರು ಮಾಡಲಿದ್ದು, ಕತೆಗಾರರ ಕುರಿತು ಹಿರಿಯ ಸಾಹಿತಿ ವಿಜಯಪುರದ ಶಂಕರ ಬೈಚಬಾಳ ಅವರು ಮಾತನಾಡಲಿದ್ದಾರೆ. ಕತೆಗಾರ ಡಾ. ಪ್ರಕಾಶ ಗ.ಖಾಡೆ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಐಕ್ಯೂಐಸಿ ಸಂಯೋಜಕಿ ಡಾ. ಶೀರುನುಸಲ್ತಾನ ಇನಾಂದಾರ, ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷಿö್ಮ ಆರ್. ಕತ್ತಿ ಭಾಗವಹಿಸಲಿದ್ದಾರೆ.ಬೆರಗು ಪ್ರಕಾಶನವು ಆಯ್ದ ೫೦ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಉಚಿತವಾಗಿ ನೀಡಿ, ಅವರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು ಮತ್ತು ಕತೆಗಾರರೊಂದಿಗೆ…

Read More

ವಿಜಯಪುರ: ನಗರದ ಹೊರವಲಯದ ಬುರಾಣಪುರ ಹತ್ತಿರ ನಿರ್ಮಿಸಲಾಗುತ್ತಿರುವ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರ ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು.ವಿಜಯಪುರ ವಿಮಾನ ನಿಲ್ದಾಣ ರನ್‌ವೇ ಕಾಮಗಾರಿ ಸಂಪೂರ್ಣ ಪೂರ್ಣಗೊಂಡಿದ್ದು, ಬಾಕಿ ಇರುವ ರನವೇ ಮಾರ್ಕಿಂಗ್ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಬೇಕು. ಟರ್ಮಿನಲ್ ಕಟ್ಟಡದಲ್ಲಿ ಅಳವಡಿಸಲಾದ ಇಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಟರ್ಮಿನಲ್ ಕಟ್ಟಡ ಬಣ್ಣ ಹಚ್ಚುವ ಕಾಮಗಾರಿಯನ್ನು ವೀಕ್ಷಿಸಿದ ಅವರು, ರಾಷ್ಟ್ರೀಯ ಹೆದ್ದಾರಿಯಿಂದ ವಿಮಾನ ನಿಲ್ದಾಣಕ್ಕೆ ಕೂಡುವ ರಸ್ತೆ ನಿರ್ಮಾಣಕ್ಕೆ ಜಾಗ ಗುರುತಿಸುವಂತೆ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಬಸವಣೆಪ್ಪ ಕಲಶೆಟ್ಟಿ, ತಹಶೀಲ್ದಾರ ಶ್ರೀಮತಿ ಕವಿತಾ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಂ.ಪಾಟೀಲ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಸ್.ಎಸ್.ಆಲೂರ ಹಾಗೂ ಶರವಣನ್ ಉಪಸ್ಥಿತರಿದ್ದರು.

Read More

ಬಸವನಬಾಗೇವಾಡಿ: ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಹಾಗೂ ಸ್ಥಳೀಯ ಬಸವೇಶ್ವರ ನಗೆಯೋಗ ಕೂಟದ ಸಹಯೋಗದಲ್ಲಿ ಡಿ.೨ ಮತ್ತು ೩ ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.ಡಿ.೨ ರಂದು ಮಧ್ಯಾನ್ಹ ೨.೩೦ ಗಂಟೆಗೆ ಸಮ್ಮೇಳನವನ್ನು ಸಚಿವ ಶಿವಾನಂದ ಪಾಟೀಲರು ಉದ್ಘಾಟಿಸುವರು. ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ರಾಜ್ಯ ನಗೆಯೋಗ ಕೂಟದ ಅಧ್ಯಕ್ಷ ಲಯನ ಪ್ರೊ.ಪಿ.ಸದಾಶಿವ ವಹಿಸುವರು. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ನಗೆಯೋಗ ಕೂಟಗಳ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಮದನ ಕಠಾರಿಯಾ, ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ರಾಜ್ಯ ನಗೆಯೊಗ ಕೂಟಗಳ ಒಕ್ಕೂಟದ ಕಾರ್ಯದರ್ಶಿಗಳಾದ ಬಿ.ಎಸ್.ರಾಜೇಶ್ವರ, ಪಾರ್ವತಿ ಶೆಟ್ಟಿ, ಒಕ್ಕೂಟದ ಖಜಾಂಚಿ ಡಾ.ದೇವತಾ ಶ್ರೀನಿವಾಸ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ…

Read More

ಬಸವನಬಾಗೇವಾಡಿ: ಪಟ್ಟಣದ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯದಿಂದ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು.ಕನ್ನಡಪ್ರಭವಾರ್ತೆ, ಬಸವನಬಾಗೇವಾಡಿ, ನ. 30ವಿಶ್ವಮಾನವ ಕಲ್ಪನೆ ಹೊಂದಿದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ ಸಮಾನತೆಯ ಸಂದೇಶವನ್ನು ಭಕ್ತ ಕನಕದಾಸರು ಸಾರಿದ್ದಾರೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.ಪಟ್ಟಣದ ಕಿತ್ತೂರಾಣಿ ಚೆನ್ನಮ್ಮ ವೃತ್ತದಲ್ಲಿ ಗುರುವಾರ ದಾಸ ಶ್ರೇಷ್ಠ ಕನಕದಾಸರ 536 ನೆಯ ಜಯಂತೋತ್ಸವದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನಕದಾಸರು ರಚಿಸಿರುವ ರಾಮಧಾನ್ಯ ಚರಿತ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವುಗಳ ಮೂಲಕ ಸಮಾಜದಲ್ಲಿ ಶಾಂತಿ, ಸಮಾನತೆ ಪ್ರಗತಿ ಸಾಧಿಸಲು ಸಾಧ್ಯವಿದೆ. ತಮ್ಮ ಸಮಾಜಸತ್ವವನ್ನು ಬಿಟ್ಟು ಅವರು ದಾಸ ಶ್ರೇಷ್ಠರಾಗಿದ್ದಾರೆ ಎಂದು ಹೇಳಿದರು.ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ. ದಾಸ ಪದ ಹಾಡಿ ಜೀವನದ ಸಾರವನ್ನು ತಿಳಿಸಿದರು .ಕುಲ ಕುಲ ಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನಾದರೂ ಬಲ್ಲಿರಾ…

Read More

ಬಸವನಬಾಗೇವಾಡಿ: ಶ್ರೇಷ್ಠ ಭಕ್ತ ಕನಕದಾಸರು ನೀಡಿರುವ ಸಂದೇಶಗಳು ಇಡೀ ಮನುಕುಲಕ್ಕೆ ಹರುಷ ತರುವ ಜೊತೆಗೆ ಮನ ಪರಿವರ್ತನೆಗೆ ನಾಂದಿಯಾಗಿವೆ ಎಂದು ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತಿ ಹಾಗೂ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಲೌಕಿಕ ತೊರೆದವರು ಸಂತರಾಗಿರುವುದನ್ನು ನೋಡುತ್ತೇವೆ. ಸಂತರು ಸ್ವಾರ್ಥಿಗಳಾಗದೇ ಇಡೀ ಸಮಾಜಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿರುತ್ತಾರೆ. ಇಂತಹ ಸಾಲಿನಲ್ಲಿ ಭಕ್ತ ಕನಕದಾಸರು ನಿಲ್ಲುತ್ತಾರೆ. ನಮ್ಮ ದೇಶ ಭವ್ಯ ಪರಂಪರೆ, ಸಂಸ್ಕ್ರತಿ, ಆಧ್ಯಾತ್ಮ, ಭಾವೈಕ್ಯತೆ ಹೊಂದಿದೆ ಎಂದರು.ನನ್ನ ತಂದೆ ಸಚಿವ ಶಿವಾನಂದ ಪಾಟೀಲರು ೩೦ ವರ್ಷಗಳ ಕಾಲ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮೊದಲು ಜಿಲ್ಲೆಯಲ್ಲಿ ಪ್ರತಿನಿತ್ಯ ೨೫ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ ಡಿಸಿಸಿ ಬ್ಯಾಂಕಿನ ಸಹಕಾರದಿಂದಾಗಿ ದಿನಕ್ಕೆ ೫೭ ಸಾವಿರ ಲೀಟರ್…

Read More

ಸಿಂದಗಿ: ಕನಕದಾಸರ ಕೀರ್ತನೆಗಳು ಮತ್ತು ಸಂದೇಶಗಳು ನಮಗೆ ದಾರಿದೀಪವಾಗಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ತಾಲೂಕಾಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ೫೩೬ನೆಯ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವಾಸನೆಯನ್ನೂ ಬಿಟ್ಟು ಮನುಷ್ಯರಂತೆ ಬದುಕಿ ಎಂದು ಮನುಕುಲಕ್ಕೆ ಉಪದೇಶ ಮಾಡಿದ ಮಹಾನ್ ಸಂತನನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕನಕದಾಸರ ಕೊಡುಗೆ ಅನನ್ಯವಾಗಿದೆ. ಕನಕದಾಸರ ಕೀರ್ತನೆಗಳು ಎಂದಗೂ ನಮಗೆ ದಾರಿದೀಪ. ಇತ್ತಿಚಿನ ದಿನಮಾನಗಳಲ್ಲಿ ಮೋಬೈಲ್‌ದಿಂದಾಗಿ ಹಲವಾರು ತಾರತಮ್ಯಗಳನ್ನು ಗಮನಿಸುತ್ತಿದ್ದೇವೆ. ಈ ಓಂದು ದೆಸೆಯಲ್ಲಿ ಅಂದಿನ ಶರಣರು, ಶಂತರು, ದಾರ್ಶನಿಕರು ಸೇರಿದಂತೆ ದಾಸ ಶ್ರೇಷ್ಠ ಕನಕದಾಸರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದ್ದು ಶ್ಲಾಘನೀಯ. ದಾಸ ಸಾಹಿತ್ಯಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿದ ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ. ಕನಕದಾಸರ ತತ್ವಾದರ್ಶ,…

Read More

ಸಿಂದಗಿ: ಕನಕದಾಸರ ಕೀರ್ತನೆಗಳ ಪ್ರತಿ ಸಾಲಿನಲ್ಲಿಯೂ ಸಾವಿರಾರು ನಿಘುಡಾರ್ಥ ಹಾಗೂ ಅಧ್ಬುತ ಸಂದೇಶ ಅಡಗಿದೆ ಎಂದು ಬಿಜೆಪಿಯ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ ಹೇಳಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡ ೩೫೬ನೆಯ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟು ಸಾವಿನ ಚಕ್ರದಿಂದ ಪಾರಾಗಬೇಕಾದರೇ ಏನು ಮಾಡಬೇಕು ಎಂದು ಗುರುಗಳು ಕೇಳಿದ ಪ್ರಶ್ನೆಗೆ ಅವರೇ ಕಾಯಬೇಕು ಎಂದು ಉತ್ತರಿಸಿದ ಕನಕದಾಸರ ಮಾತನ್ನು ಕೇಳಿದ ಸಬಿಕರು ಅವರೇ ಕಾಯಿ ತಂದುಕೊಟ್ಟರAತೆ. ಆದರೆ ಅವರೇ ಕಾಯಬೇಕು ಎನ್ನುವ ಮಾತು ದೇವರೇ ಕಾಯಬೇಕು ಎಂದರ್ಥ. ನಾನು ಎಂಬ ಅಹಂಕಾರ ಅಳಿದು ಹೋದರೆ ಸ್ವರ್ಗಕ್ಕೆ ಹೋಗಬಹುದು ಎಂದರು.ಈ ವೇಳೆ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಅಬು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ.ಖತೀಬ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಸಾಪ ನೂತನ ಅಧ್ಯಕ್ಷ ಶಿವಾನಂದ…

Read More

ಮುದ್ದೇಬಿಹಾಳ: ಡಿ೧ ರಂದು ಪಟ್ಟಣದಲ್ಲಿ ಹೊಸ ೧೧೦ಕೆವಿ ಮಾರ್ಗ ನಿರ್ಮಾಣದ ಬಾಕಿ ಉಳಿದಿರುವ ಕಾಮಗಾರಿ ಕೈಗೊಳ್ಳುವದರಿಂದ ವಿದ್ಯಾನಗರ, ಮಾರುತಿ ನಗರ, ಆಲಮಟ್ಟಿ ರಸ್ತೆ, ಸಂಗಮೇಶ್ವರ ನಗರ ಹಾಗೂ ಹುಡಕೋ ಬಡಾವಣೆಗಳಲ್ಲಿ ಬೆಳಿಗ್ಗೆ ೯ರಿಂದ ಸಂಜೆ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ಪಟ್ಟಣದ ಕೆರೆ ಹತ್ತಿರದ ತರಕಾರಿ ಮಾರುಕಟ್ಟೆಯ ಪಕ್ಕದ ನಾಗೂರ ಅವರ ಹೊಲದಲ್ಲಿರುವ ಹಳ್ಳದ ನೀರಿನಲ್ಲಿ ಮೃತ ದೇಹವೊಂದು ಗುರುವಾರ ಪತ್ತೆಯಾಗಿದೆ.ಮೃತರನ್ನು ಅಬ್ದುಲ್‌ಹಮೀದ ತಂದೆ ಅಬ್ದುಲ್‌ಹಜೀಜ್ ಮೋಮಿನ(೬೩) ಎಂದು ಗುರುತಿಸಲಾಗಿದೆ.ಮೃತನು ಸುಮಾರು ವರ್ಷಗಳಿಂದ ವಿಪರೀತ ಸೆರೆ ಕುಡಿಯುತ್ತಿದ್ದು ಪಟ್ಟಣದ ತುಂಬೆಲ್ಲ ಸುತ್ತಾಡಿ ಪ್ಲಾಸ್ಟಿಕ್ ಆರಿಸುವ ಕೆಲಸ ಮಾಡುತ್ತಿದ್ದು ಮೃತನ ಮರಣದಲ್ಲಿ ಸಮಶಯವಿರುತ್ತದೆ ಅಂತಾ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೃತನ ತಾಯಿ ದೂರು ದಾಖಲಿಸಿದ್ದಾಳೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗ ಇದೆ.

Read More