ಬಸವನಬಾಗೇವಾಡಿ: ಶ್ರೇಷ್ಠ ಭಕ್ತ ಕನಕದಾಸರು ನೀಡಿರುವ ಸಂದೇಶಗಳು ಇಡೀ ಮನುಕುಲಕ್ಕೆ ಹರುಷ ತರುವ ಜೊತೆಗೆ ಮನ ಪರಿವರ್ತನೆಗೆ ನಾಂದಿಯಾಗಿವೆ ಎಂದು ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಹೇಳಿದರು.
ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತಿ ಹಾಗೂ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಲೌಕಿಕ ತೊರೆದವರು ಸಂತರಾಗಿರುವುದನ್ನು ನೋಡುತ್ತೇವೆ. ಸಂತರು ಸ್ವಾರ್ಥಿಗಳಾಗದೇ ಇಡೀ ಸಮಾಜಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿರುತ್ತಾರೆ. ಇಂತಹ ಸಾಲಿನಲ್ಲಿ ಭಕ್ತ ಕನಕದಾಸರು ನಿಲ್ಲುತ್ತಾರೆ. ನಮ್ಮ ದೇಶ ಭವ್ಯ ಪರಂಪರೆ, ಸಂಸ್ಕ್ರತಿ, ಆಧ್ಯಾತ್ಮ, ಭಾವೈಕ್ಯತೆ ಹೊಂದಿದೆ ಎಂದರು.
ನನ್ನ ತಂದೆ ಸಚಿವ ಶಿವಾನಂದ ಪಾಟೀಲರು ೩೦ ವರ್ಷಗಳ ಕಾಲ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮೊದಲು ಜಿಲ್ಲೆಯಲ್ಲಿ ಪ್ರತಿನಿತ್ಯ ೨೫ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ ಡಿಸಿಸಿ ಬ್ಯಾಂಕಿನ ಸಹಕಾರದಿಂದಾಗಿ ದಿನಕ್ಕೆ ೫೭ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕೆಟ್ಟ ವಿಚಾರಗಳು ಕೇಳಿಬಂದವು. ಚುನಾವಣೆ ಫಲಿತಾಂಶ ನಮ್ಮ ತಂದೆಯವರು ಒಳ್ಳೆಯದು ಮಾಡಿದ್ದಾರೆ ಎಂಬುವದನ್ನು ತೋರಿಸಿದೆ ಎಂದು ಹೇಳಿದರು.
ಮುದ್ದೇಬಿಹಾಳ ಎಂಜಿಎಂಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ. ಹರನಾಳ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಮಾತನಾಡಿದರು.
ಸಾನಿಧ್ಯವನ್ನು ಅರಳಿಚಂಡಿಯ ಪರಮಾನಂದ ಮಹಾರಾಜರು. ಬಸವನಬಾಗೇವಾಡಿಯ ಶಿವಾನಂದ ಈರಕಾರ ಮುತ್ಯಾ, ಇಂಗಳೇಶ್ವರದ ಜಾನಪ್ಪ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪಿಐ ಶರಣಗೌಡ ನ್ಯಾಮಣ್ಣನವರ, ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್.ಅವಟಿ,ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಪುರಸಭೆ ಸದಸ್ಯೆ ಜಗದೇವಿ ಗುಂಡಳ್ಳಿ, ತಾಲೂಕು ಕುರುಬರ ಸಂಘದ ಅಧ್ಯಕ್ಷ ರಾಜಶೇಖರ ಆಸಂಗಿ, ಮುಖಂಡರಾದ ಭೀರಪ್ಪ ಸಾಸನೂರ, ರಾಜೇಶ್ವರಿ ಯರನಾಳ, ಪ್ರಕಾಶ ಜಂಬಲದಿನ್ನಿ, ಡಿ.ಬಿ.ಹಿರೇಕುರಬರ, ಎಸ್.ಎಸ್.ಕುದರಕಾರ, ಶರಣು ಬಳ್ಳಾವೂರ ಇತರರು ಇದ್ದರು. ವೈ.ಡಿ.ಅನವಾಲ ಪ್ರಾರ್ಥಿಸಿದರು. ಜಕ್ಕಣ್ಣ ಮೀಸಿ ಸ್ವಾಗತಿಸಿದರು. ವಿಕಾಸ ಜೋಗಿ ನಿರೂಪಿಸಿದರು. ಶಿವಾನಂದ ಮಂಗಾನವರ ವಂದಿಸಿದರು.
ಮೆರವಣಿಗೆಃ ಕಾರ್ಯಕ್ರಮಕ್ಕೂ ಮುನ್ನ ಭಕ್ತ ಕನಕದಾಸ ವೃತ್ತದಿಂದ ಆರಂಭಗೊಂಡ ಸಾರೋಟಿನಲ್ಲಿ ಭಕ್ತ ಕನಕದಾಸರ ಭಾವಚಿತ್ರದ ಮೆರವಣಿಗೆಯು ಬಸವೇಶ್ವರ ವೃತ್ತ, ಗಣಪತಿ ವೃತ್ತ, ಶಿವಾಜಿ ಗಲ್ಲಿ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ವೇದಿಕೆ ಕಾರ್ಯಕ್ರಮ ಜರುಗುವ ಬಸವ ಭವನದವರೆಗೂ ಜರುಗಿತು. ಮೆರವಣಿಗೆಯಲ್ಲಿ ತಾಲೂಕಿನ ೩೯ ಗ್ರಾಮಗಳಿಂದ ಆಗಮಿಸಿದ್ದ ಡೊಳ್ಳಿನ ಮೇಳ ಭಾಗವಹಿಸುವ ಮೂಲಕ ಡೊಳ್ಳಿನ ಶಬ್ದವು ಮೆರವಣಿಗೆ ಕಳೆಕಟ್ಟಿತ್ತು. ಭಕ್ತ ಕನಕದಾಸ ಸೇರಿದಂತೆ ವಿವಿಧ ಮಹಾತ್ಮರ ಸ್ತಬ್ಧ ಚಿತ್ರಗಳು ಕಂಡುಬಂದವು.
Subscribe to Updates
Get the latest creative news from FooBar about art, design and business.
Related Posts
Add A Comment

