ಇಂಡಿ: ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಮತ್ತು ಕಡಣಿಯ ಬೆರಗು ಪ್ರಕಾಶನದ ಸಹಯೋಗದಲ್ಲಿ ಡಾ. ಪ್ರಕಾಶ ಗ.ಖಾಡೆ ಅವರ ಬಾಳುಕುನ ಪುರಾಣ ಕಥಾ ಓದು ಮತ್ತು ಸಂವಾದ ಕಾರ್ಯಕ್ರಮವನ್ನು ಕಾಲೇಜು ಸಭಾಭವನದಲ್ಲಿ ಡಿಸೆಂಬರ್ ೨ ರಂದು ಹಮ್ಮಿಕೊಂಡಿದೆ ಎಂದು ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರಮೇಶ ಎಸ್. ಕತ್ತಿ ತಿಳಿಸಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಆರ್.ಎಚ್.ರಮೇಶ ವಹಿಸಲಿದ್ದಾರೆ. ಬಾಳುಕುನ ಪುರಾಣ ಕತಾವಲೋಕನವನ್ನು ಸವದತ್ತಿಯ ಸರಕಾರಿ ಪದವಿಪೂರ್ವ ಕಾಲೇಜಿ ಪ್ರಾಚಾರ್ಯ ಡಾ. ವೈ.ಎಂ.ಯಾಕೊಳ್ಳಿ ಅವರು ಮಾಡಲಿದ್ದು, ಕತೆಗಾರರ ಕುರಿತು ಹಿರಿಯ ಸಾಹಿತಿ ವಿಜಯಪುರದ ಶಂಕರ ಬೈಚಬಾಳ ಅವರು ಮಾತನಾಡಲಿದ್ದಾರೆ. ಕತೆಗಾರ ಡಾ. ಪ್ರಕಾಶ ಗ.ಖಾಡೆ ಅವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಐಕ್ಯೂಐಸಿ ಸಂಯೋಜಕಿ ಡಾ. ಶೀರುನುಸಲ್ತಾನ ಇನಾಂದಾರ, ಬೆರಗು ಪ್ರಕಾಶನ ಸಂಸ್ಥೆಯ ಅಧ್ಯಕ್ಷೆ ವಿಜಯಲಕ್ಷಿö್ಮ ಆರ್. ಕತ್ತಿ ಭಾಗವಹಿಸಲಿದ್ದಾರೆ.
ಬೆರಗು ಪ್ರಕಾಶನವು ಆಯ್ದ ೫೦ ವಿದ್ಯಾರ್ಥಿಗಳಿಗೆ ಪುಸ್ತಕವನ್ನು ಉಚಿತವಾಗಿ ನೀಡಿ, ಅವರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವುದು ಮತ್ತು ಕತೆಗಾರರೊಂದಿಗೆ ಸಂವಾದಕ್ಕೆ ಅವಕಾಶಕಲ್ಪಿಸುವ ವಿನೂತನ ಕಾರ್ಯಕ್ರಮ ಬೆರಗು ಪ್ರಕಾಶನ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ನಿಮಿತ್ತ ಪ್ರತಿ ತಿಂಗಳು ಇಂತಹ ಕಾರ್ಯಕ್ರಮ ಆಯೋಜಿಸುತ್ತದೆ ಎಂದು ಅವರು ಮಾಹಿತಿ ನೀಡಿದರು.
Subscribe to Updates
Get the latest creative news from FooBar about art, design and business.
Related Posts
Add A Comment
