Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 22, 2026

ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು

ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಡಿ.೨-೩ ರಂದು ರಾಜ್ಯಮಟ್ಟದ ನಗೆ ಸಮ್ಮೇಳನ
(ರಾಜ್ಯ ) ಜಿಲ್ಲೆ

ಡಿ.೨-೩ ರಂದು ರಾಜ್ಯಮಟ್ಟದ ನಗೆ ಸಮ್ಮೇಳನ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಸವನಬಾಗೇವಾಡಿ: ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಹಾಗೂ ಸ್ಥಳೀಯ ಬಸವೇಶ್ವರ ನಗೆಯೋಗ ಕೂಟದ ಸಹಯೋಗದಲ್ಲಿ ಡಿ.೨ ಮತ್ತು ೩ ರಂದು ಎರಡು ದಿನಗಳ ಕಾಲ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ.
ಡಿ.೨ ರಂದು ಮಧ್ಯಾನ್ಹ ೨.೩೦ ಗಂಟೆಗೆ ಸಮ್ಮೇಳನವನ್ನು ಸಚಿವ ಶಿವಾನಂದ ಪಾಟೀಲರು ಉದ್ಘಾಟಿಸುವರು. ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸುವರು. ಅಧ್ಯಕ್ಷತೆಯನ್ನು ರಾಜ್ಯ ನಗೆಯೋಗ ಕೂಟದ ಅಧ್ಯಕ್ಷ ಲಯನ ಪ್ರೊ.ಪಿ.ಸದಾಶಿವ ವಹಿಸುವರು. ಮುಖ್ಯ ಅತಿಥಿಗಳಾಗಿ ಅಂತರಾಷ್ಟ್ರೀಯ ನಗೆಯೋಗ ಕೂಟಗಳ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ಮದನ ಕಠಾರಿಯಾ, ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ, ರಾಜ್ಯ ನಗೆಯೊಗ ಕೂಟಗಳ ಒಕ್ಕೂಟದ ಕಾರ್ಯದರ್ಶಿಗಳಾದ ಬಿ.ಎಸ್.ರಾಜೇಶ್ವರ, ಪಾರ್ವತಿ ಶೆಟ್ಟಿ, ಒಕ್ಕೂಟದ ಖಜಾಂಚಿ ಡಾ.ದೇವತಾ ಶ್ರೀನಿವಾಸ, ಎಪಿಎಂಸಿ ಮಾಜಿ ಅಧ್ಯಕ್ಷ ಶೇಖರ ಗೊಳಸಂಗಿ, ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಯ ಮೇಲುಉಸ್ತುವಾರಿ ಸಮಿತಿ ಅಧ್ಯಕ್ಷ ಭರತ ಅಗರವಾಲ, ಮುಖಂಡ ಬಸವರಾಜ ಕೋಟಿ, ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ವರ್ತಕ ವಿಠ್ಠಲ ಪತ್ತಾರ ಆಗಮಿಸುವರು. ಕೋಗಳಿ ಕೊಟ್ರೇಶ್, ಅಶೋಕ ಹಂಚಲಿ ಅವರಿಂದ ಹಾಸ್ಯ ರಸಾಯನ ನಡೆಯಲಿದೆ. ಇದೇ ಸಂದರ್ಭದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕ್ರತ ಪ.ಗು.ಸಿದ್ದಾಪೂರ, ರವಿಗೌಡ ಚಿಕ್ಕೊಂಡ, ಗಂಗಾಧರ ಕುಂಟೋಜಿ, ಶಿವಾನಂದ ಮಂಗಾನವರ, ಸಿದ್ದು ಉಕ್ಕಲಿ, ಬಂದೇನವಾಜ ವಾಲೀಕಾರ, ಸೇರಿದಂತೆ ಅನೇಕರನ್ನು ಸನ್ಮಾನಿಸಲಾಗುವುದು. ನಂತರ ವಿಶೇಷ ಮನರಂಜನಾ ಕಾರ್ಯಕ್ರಮಗಳು ಜರುಗುತ್ತವೆ.
ಡಿ.೩ ರಂದು ಬೆಳಗ್ಗೆ ೮ ಗಂಟೆಗೆ ನಗು ಮಹಾ ಮೆರವಣಿಗೆ ಸಮ್ಮೇಳನಾಧ್ಯಕ್ಷ ಶಿವಯ್ಯ ಹಿರೇಮಠ ಅವರೊಂದಿಗೆ ಬಸವೇಶ್ವರ ದೇವಾಲಯದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತೆರಳಿ ಬಸವ ಭವನಕ್ಕೆ ತಲುಪುವುದು. ಮೆರವಣಿಗೆಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಚಾಲನೆ ನೀಡುವರು.
ನಂತರ ೧೦ ಗಂಟೆಗೆ ನಡೆಯುವ ಸಮಾರಂಭದ ಸಾನಿಧ್ಯವನ್ನು ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ವಹಿಸುವರು. ಎರಡನೇ ದಿನದ ಸಮಾರಂಭವನ್ನು ಶಾಸಕ ಭೀಮನಗೌಡ(ರಾಜುಗೌಡ) ಪಾಟೀಲ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ರಾಜ್ಯ ನಗೆಯೋಗ ಕೂಟಗಳ ಒಕ್ಕೂಟದ ಅಧ್ಯಕ್ಷ ಪನ್ನಗ ಶಯನಂ ವಹಿಸುವರು. ವಿಶೇಷ ಅತಿಥಿಗಳಾಗಿ ಜಾನಪದ ಸಾಹಿತಿ, ಸಿಪಿಐ ಜ್ಯೋತಿರ್ಲಿಂಗ ಹೊನ್ನಾಕಟ್ಟಿ, ಕೆಎಎಸ್ ಅಧಿಕಾರಿ, ಧಾರವಾಹಿ ನಟ ಸಂಗಮೇಶ ಉಪಾಸೆ ಆಗಮಿಸುವರು. ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ನಿರ್ದೇಶಕ ಬಿ.ನಾಗರಾಜ, ಬಸವೇಶ್ವರ ಅರ್ಬನ್ ಬ್ಯಾಂಕಿನ ಅಧ್ಯಕ್ಷ ಲೋಕನಾಥ ಅಗರವಾಲ, ನ್ಯಾಯವಾದಿ ಬಿ.ಕೆ.ಕಲ್ಲೂರ, ಪಿಕೆಪಿಎಸ್ ಬ್ಯಾಂಕಿನ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ, ಮುಖಂಡ ಸಂಗಮೇಶ ಓಲೇಕಾರ, ಪುರಸಭೆ ಸದಸ್ಯರಾದ ನೀಲು ನಾಯಕ, ರವಿ ಪಟ್ಟಣಶೆಟ್ಟಿ, ಆದರ್ಶ ಶಿಕ್ಷಕರ ವೇದಿಕೆಯ ಜಿಲ್ಲಾಧ್ಯಕ್ಷ ಉಮೇಶ ಕೌಲಗಿ, ಮುಖಂಡರಾದ ಪರಶುರಾಮ ಅಡಗಿಮನಿ, ಅಶೋಕ ಹಾರಿವಾಳ, ಸುಭಾಸ ಚಕ್ರಮನಿ, ರಾಜೇಸಾಬ ಶಿವನಗುತ್ತಿ ಇತರರು ಆಗಮಿಸುವರು. ಸಂಜೆ ೫ ಗಂಟೆಗೆ ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮ್ಮೇಳನಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿಧಿಗಳು ಆಗಮಿಸುತ್ತಾರೆ ಎಂದು ನಗೆ ಸಮ್ಮೇಳನದ ಸಂಘಟಕರು ತಿಳಿಸಿದ್ದಾರೆ.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 22, 2026

ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು

ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’

ಏ.೨೩ ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 22, 2026
    In ದಿನಪತ್ರಿಕೆ
  • ನೂರಕ್ಕೆ ನೂರರಷ್ಟು ಫಲಿತಾಂಶ ಸಾಧಿಸಿದನಾಗನೂರು ಕಾಲೇಜು
    In (ರಾಜ್ಯ ) ಜಿಲ್ಲೆ
  • ಪತ್ರಕರ್ತ ಇಂದುಶೇಖರ ಮಣೂರ ಗೆ ’ಬಸವ ಸೇವಾ ಪ್ರಶಸ್ತಿ’
    In (ರಾಜ್ಯ ) ಜಿಲ್ಲೆ
  • ಏ.೨೩ ರಿಂದ ಪಂಚಕಲ್ಯಾಣ ಪ್ರತಿಷ್ಠಾ ಮಹಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣವೇ ಮುಖ್ಯ ಅಸ್ತ್ರ
    In (ರಾಜ್ಯ ) ಜಿಲ್ಲೆ
  • ಜಗತ್ತಿಗೆ ಅದ್ವೈತ ತತ್ವ ಪರಿಚಯಿಸಿದ ತತ್ವಜ್ಞ ಆದಿ ಶಂಕರಾಚಾರ್ಯರು
    In (ರಾಜ್ಯ ) ಜಿಲ್ಲೆ
  • ರಾಜ್ಯ ಮುಕ್ತ ವಿವಿ ಕರಾಮುವಿಕೆ-ಸೆಟ್ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳಿಗೆ ತರಬೇತಿ
    In (ರಾಜ್ಯ ) ಜಿಲ್ಲೆ
  • ಸರಳತೆ ಮೆರೆದ ಚಿದಾನಂದ ಸವದಿ :ಇಂದಿರಾ ಕ್ಯಾಂಟೀನ್‌ನಲ್ಲಿ ಭೋಜನ
    In (ರಾಜ್ಯ ) ಜಿಲ್ಲೆ
  • ಮಕ್ಕಳಿಗೆ ಇಂದು ಕಂಪ್ಯೂಟರ್ ಜ್ಞಾನ ಅತ್ಯವಶ್ಯ :ಮಠಪತಿ
    In (ರಾಜ್ಯ ) ಜಿಲ್ಲೆ
  • ಹೈರಿಗೆಯಲ್ಲಿ ಅಂಬೇಡ್ಕರ್ ಜಯಂತಿ & ರಣದಕಾಳಮ್ಮ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.