ಬಸವನಬಾಗೇವಾಡಿ: ಪಟ್ಟಣದ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯದಿಂದ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭವಾರ್ತೆ, ಬಸವನಬಾಗೇವಾಡಿ, ನ. 30
ವಿಶ್ವಮಾನವ ಕಲ್ಪನೆ ಹೊಂದಿದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ ಸಮಾನತೆಯ ಸಂದೇಶವನ್ನು ಭಕ್ತ ಕನಕದಾಸರು ಸಾರಿದ್ದಾರೆ ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಕಿತ್ತೂರಾಣಿ ಚೆನ್ನಮ್ಮ ವೃತ್ತದಲ್ಲಿ ಗುರುವಾರ ದಾಸ ಶ್ರೇಷ್ಠ ಕನಕದಾಸರ 536 ನೆಯ ಜಯಂತೋತ್ಸವದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನಕದಾಸರು ರಚಿಸಿರುವ ರಾಮಧಾನ್ಯ ಚರಿತ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪ. ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ. ಅವುಗಳ ಮೂಲಕ ಸಮಾಜದಲ್ಲಿ ಶಾಂತಿ, ಸಮಾನತೆ ಪ್ರಗತಿ ಸಾಧಿಸಲು ಸಾಧ್ಯವಿದೆ. ತಮ್ಮ ಸಮಾಜಸತ್ವವನ್ನು ಬಿಟ್ಟು ಅವರು ದಾಸ ಶ್ರೇಷ್ಠರಾಗಿದ್ದಾರೆ ಎಂದು ಹೇಳಿದರು.
ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ. ದಾಸ ಪದ ಹಾಡಿ ಜೀವನದ ಸಾರವನ್ನು ತಿಳಿಸಿದರು .ಕುಲ ಕುಲ ಕುಲವೆಂದು ಬಡಿದಾಡದಿರಿ, ನಿಮ್ಮ ಕುಲದ ನೆಲೆಯನಾದರೂ ಬಲ್ಲಿರಾ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ನಿಂಗಪ್ಪ ಅವಟಿ ,ಸುನಿಲ ಚಿಕ್ಕೊಂಡ, ಮನಾನ್ನ ಶಾಬಾದಿ ,ಪ್ರಶಾಂತ ಮುಂಜಾನೆ, ಮಾಂತೇಶ ಹೆಬ್ಬಾಳ, ಶಂಕರಸಿಂಗ ರಜಪೂತ, ಜಟ್ಟಿಂಗರಾಯ ಮಾಲಗಾರ, ವೆಂಕಟೇಶ ಕರಾಡೆ, ಶ್ರೀಧರ ಕುಂಬಾರ, ಸಂಜೀವ ಬಿರಾದಾರ, ಸುರೇಶ ದೇಸಾಯಿ, ಸಿದ್ದು ಜಂಬಲದಿನ್ನಿ, ಅಪ್ಪು ಸಂಗಮ, ಮಹೇಶ ಪತ್ತಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

