ಸಿಂದಗಿ: ಕನಕದಾಸರ ಕೀರ್ತನೆಗಳ ಪ್ರತಿ ಸಾಲಿನಲ್ಲಿಯೂ ಸಾವಿರಾರು ನಿಘುಡಾರ್ಥ ಹಾಗೂ ಅಧ್ಬುತ ಸಂದೇಶ ಅಡಗಿದೆ ಎಂದು ಬಿಜೆಪಿಯ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ ಹೇಳಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡ ೩೫೬ನೆಯ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟು ಸಾವಿನ ಚಕ್ರದಿಂದ ಪಾರಾಗಬೇಕಾದರೇ ಏನು ಮಾಡಬೇಕು ಎಂದು ಗುರುಗಳು ಕೇಳಿದ ಪ್ರಶ್ನೆಗೆ ಅವರೇ ಕಾಯಬೇಕು ಎಂದು ಉತ್ತರಿಸಿದ ಕನಕದಾಸರ ಮಾತನ್ನು ಕೇಳಿದ ಸಬಿಕರು ಅವರೇ ಕಾಯಿ ತಂದುಕೊಟ್ಟರAತೆ. ಆದರೆ ಅವರೇ ಕಾಯಬೇಕು ಎನ್ನುವ ಮಾತು ದೇವರೇ ಕಾಯಬೇಕು ಎಂದರ್ಥ. ನಾನು ಎಂಬ ಅಹಂಕಾರ ಅಳಿದು ಹೋದರೆ ಸ್ವರ್ಗಕ್ಕೆ ಹೋಗಬಹುದು ಎಂದರು.
ಈ ವೇಳೆ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಅಬು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ.ಖತೀಬ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಸಾಪ ನೂತನ ಅಧ್ಯಕ್ಷ ಶಿವಾನಂದ ಬಡಾನೂರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಲ್ಲನಗೌಡ ಪಾಟೀಲ ನಿರೂಪಿಸಿದರು. ಅಂಬಿಕಾ ಪಾಟೀಲ ವಂದಿಸಿದರು. ಈ ವೇಳೆ ಶರಣಮ್ಮ ನಾಯಕ, ಶಾಂತೂ ರಾಣಾಗೋಳ, ಗೋಲ್ಲಾಳಪ್ಪ ಬಿರಾದಾರ, ಎಸ್.ಎಮ್ ಚಿಗರಿ, ವರ್ಷಾ ಪಾಟೀಲ, ಅಶ್ವೀನಿ ಪಾತ್ರೋಟ್ಟಿ, ಬೀರು ಚೌಧರಿ ಸೇರಿದಂತೆ ಅನೇಕರಿದ್ದರು.
*ಶ್ರೀ ಪದ್ಮರಾಜ ಮಹಿಳಾ ಕಾಲೇಜು*
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಕಾಲೇಜಿನಲ್ಲಿ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೇ ವೇಳೆ ಪದವಿ ಪ್ರಾಚಾರ್ಯ ಎಸ್.ಎಂ ಪೂಜಾರಿ, ಉಪನ್ಯಾಸಕರಾದ, ಎಸ್.ಸಿ ದುದ್ದಗಿ, ಹೇಮಾ ಕಾಸರ, ಯು.ಸಿ ಪೂಜೇರಿ, ಸತೀಶ ಕಕ್ಕಸಗೇರಿ, ಶಂಕರ ಕುಂಬಾರ, ವಿಜಯಲಕ್ಷಿö್ಮÃ ಭಜಂತ್ರಿ ಸೇರಿದಂತೆ ಅನೇಕರಿದ್ದರು.
ಬ್ಲಾಕ್ ಕಾಂಗ್ರೆಸ್ ಕಛೇರಿ: ಪಟ್ಟಣದ ಎಪಿಎಂಸಿಯಲ್ಲಿರುವ ಸಿಂದಗಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆವರಣೆ ಮಾಡಲಾಯಿತು.
ಇದೇ ವೇಳೆ ಬ್ಲಾಕ್ ಕಾಂಗ್ರೆಸ್ ಸಮಿತಿ ತಾಲೂಕಾಧ್ಯಕ್ಷ ಸುರೇಶ ಪೂಜಾರ ಮಾತನಾಡಿ, ಕನಕದಾಸರ ಕೀರ್ತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿಕೊಳ್ಳಬೇಕು ಮುಂದಿನ ಯುವ ಪಿಳೀಗೆಗೆ ತಿಳಿಸುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.
ಇದೇ ಸಂಧರ್ಭದಲ್ಲಿ ಪರಶುರಾಮ ಕಾಂಬಳೆ, ಜಯಶ್ರೀ ಹದನೂರ, ಶಾರದಾ ಬೆಟಗೇರಿ, ಮಹಾನಂದ ಬಮ್ಮಣ್ಣಿ, ಸೇರಿದಂತೆ ಕಾರ್ಯಕರ್ತರು ಇದ್ದರು.
ತಾಲೂಕು ಸಾರ್ವಜನಿಕ ಆಸ್ಪತ್ರೆ: ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಆವರಣೆ ಮಾಡಲಾಯಿತು. ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಎ.ಎ ಮಾಗಿ, ರಾಜಶೇಖರ ನರಗೋದಿ, ಎಂ.ಪಿ ಸಾಗರ, ಡಾ. ಬಡಿಗೇರ ಹಾಗೂ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.
ಶ್ರೀ ಪದ್ಮರಾಜ ಪ್ರಾಥಮಿಕ ಶಾಲೆ: ಪಟ್ಟಣದ ಶ್ರೀ ಪದ್ಮರಾಜ ಪ್ರಾಥಮಿಕ ಶಾಲೆಯಯಲ್ಲಿ ಕನಕದಾಸರ ಜಯಂತಿಯನ್ನು ಆಚರಣೆ ಮಾಡಲಾಯಿತು.
ಇದೇ ವೇಳೆ ಮುಖ್ಯಗುರು ಎಸ್.ಎಂ. ಬಿರಾದಾರ, ಎಸ್.ಎನ್. ಸಂಗಮ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಇದ್ದರು.
*ಆರ್.ಡಿ.ಪಾಟೀಲ ಕಾಲೇಜ* ಪಟ್ಟಣದ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಆರ್.ಡಿ.ಪಾಟೀಲ ಕಲಾ, ವಾಣಿಜ್ಯ, ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಿದ ೫೩೬ನೆಯ ಕನಕದಾಸರ ಜಯಂತ್ಯೋತ್ಸವ ಸಮಾರಂಭ ಆಚರಣೆ ಮಾಡಲಾಯಿತು.
ಈ ವೇಳೆ ಉಪಪ್ರಾಚಾರ್ಯ ಭೀಮನಗೌಡ ಸಿಂಗನಳ್ಳಿ ಮಾತನಾಡಿ, ದಾಸ ಸಾಹಿತ್ಯದ ಮೂಲಕ ಜೀವನಪಾಠ ಸಾರಿದವರು ಕನಕದಾಸರು. ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತವರೇಣ್ಯರು ಕನಕದಾಸರು ಎಂದರು.
ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ವಿ.ಡಿ.ಪಾಟೀಲ ಮಾತನಾಡಿದರು. ಉಪನ್ಯಾಸಕ ನಿಂಬೆಣ್ಣಾ ಪೂಜಾರಿ, ಬಸವರಾಜ ಜಮಾದಾರ, ವಿಶ್ವನಾಥ ನಂದಿಕೋಲ, ಸುರೇಶ ಜಾಧವ, ಗವಿಸಿದ್ದಪ್ಪ ಆನೆಗುಂದಿ, ವಿಜಯಲಕ್ಷ್ಮೀ ಹಿರೇಮಠ, ಲಕ್ಷ್ಮೀ ಕನ್ನೊಳ್ಳಿ, ನವೀನ ಶೆಳ್ಳಗಿ, ಸಂಗಮೇಶ ಚಾವರ್, ನೀಲಕಂಠ ಮೇತ್ರಿ, ಅಡಿವೆಪ್ಪಾ ದಸ್ಮಾ, ರೋಹಿತ ಸುಲ್ಪಿ, ರುಕ್ಮಣ್ಣಾ ಕೊಳ್ಳೂರೆ, ಭಾಗಮ್ಮ ಕೋರಿ, ಅರುಣಾ ಬಮ್ಮಣ್ಣಿ ಸೇರಿದಂತೆ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

