ತಾಳಿಕೋಟಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಹೌಸಿಂಗ್ ಫಾರ್ ಆಲ್ ಹಾಗೂ ರಾಜ್ಯ ಸರ್ಕಾರದ ವಸತಿ ಯೋಜನೆಗಳ ಸಹ ಯೋಜನೆಯೊಂದಿಗೆ ನಿರ್ಮಿಸುತ್ತಿರುವ 600 ( ಜಿ+3) ಗುಂಪು ಮನೆಗಳ ನಿರ್ಮಾಣ ಕಾಮಗಾರಿಗೆ ಶಾಸಕ ಸಿ. ಎಸ್. ನಾಡಗೌಡ ಅವರು ಭೂಮಿ ಪೂಜೆ ನೆರವೇರಿಸಿದರು.
ಬುಧವಾರ ಪಟ್ಟಣದ ಹರನಾಳ ರಸ್ತೆಯ ಪಕ್ಕದಲ್ಲಿ ನಿರ್ಮಾಣಗೊಳ್ಳಲಿರುವ ನಿವೇಶನದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ ಹಾಗೂ ತಾಳಿಕೋಟಿ ಪುರಸಭೆ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸಮಾರಂಭದಲ್ಲಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಈ ಬಡಾವಣೆ ಆಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಗೊಳ್ಳಲಿದ್ದು ಸಕಲ ಸೋಲತ್ತುಗಳನ್ನು ಹೊಂದಿರುವ ಒಂದು ಸುಂದರವಾದ ಬಡಾವಣೆ ಆಗಲಿದೆ ಇದು ತಾಳಿಕೋಟಿ ಪಟ್ಟಣದ ಉಪನಗರದಂತೆ ಆಗುವುದು ಈ ಕಾಮಗಾರಿಯು ಅತ್ಯುತ್ತಮ ರೀತಿಯಲ್ಲಿ ಮುಕ್ತಾಯವಾಗಬೇಕಾದರೆ ನಿಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಸಣ್ಣಪುಟ್ಟ ಏನಾದರೂ ತೊಂದರೆ ಹಾಗೂ ಸಮಸ್ಯೆಗಳು ಇದ್ದರೆ ಅಧಿಕಾರಿಗಳಿಂದ ಮಾಹಿತಿ ಪಡೆದು ಬಗೆಹರಿಸಿಕೊಳ್ಳಿ ಈ ಮನೆಗಳು ನಿರ್ಮಾಣವಾದಾಗ ತಾವು ತಮ್ಮ ನೂತನ ಮನೆಯಲ್ಲಿ ನೆಮ್ಮದಿ ಯ ಬದುಕು ನೆಡಸಿ ಎಂದು ಹಾರಿಸುತ್ತೇನೆ ಎಂದರು. ವೇದಿಕೆಯಲ್ಲಿ ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹಮದ್ ಖಾಜಿ. ಕಾಂಗ್ರೆಸ್ ಮುಖಂಡ ಪ್ರಭುಗೌಡ ಮದರ್ಕಲ್. ಚಿನ್ನು ಧಣಿ ಬಸರ ಕೋಡ. ವಿರುಪಾಕ್ಷಯ್ಯ ಹಿರೇಮಠ. ಬಾಬುರಾವ್ ಸಿಂಧೆ. ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಸಿದ್ದನಗೌಡ ಪಾಟೀಲ. ವಿಜಯ ಸಿಂಗ್ ಹಜೇರಿ .ಚಿನ್ನಪ್ಪ ಮಾಳಿ. ಸಂಗನಗೌಡ ಅಸ್ಕಿ .ಪುರಸಭೆ ಸದಸ್ಯರಾದ ಮಲ್ಲಿಕಾರ್ಜುನ ಪಟ್ಟಣಶೆಟ್ಟಿ. ಡಿ .ವಿ. ಪಾಟೀಲ. ಮುತ್ತಪ್ಪಣ್ಣ ಚಮಲಾಪೂರ. ಪರಶುರಾಮ ತಂಗಡಗಿ. ಮುಸ್ತಫಾ ಚೌಧರಿ .ಹುಸೇನ ಜಮಾದಾರ. ಆದಮಶಾ ಮಕಾನದಾರ. ಗನಿಸಾಬ ಲಾಹೋರಿ. ಅಬ್ದುಲ್ ರೆಹಮಾನ ಸಾಬ ಯಕೀನ. ಇಬ್ರಾಹಿಂ ಮನ್ಸೂರ. ಮೆಹಬೂಬ ಕೆಂಭಾವಿ .ಫಯಾಜ್ ಉತ್ನಾಳ.ನಬಿಸಾಬ ಹುಣಶ್ಯಾಳ
ಪುರಸಭೆ ಮುಖ್ಯ ಅಧಿಕಾರಿ ಮೋಹನ ಜಾಧವ ಗುತ್ತಿಗೆದಾರ ಅಶ್ಪಾಕ್ ಬೆಟಿಗೇರಿ ಇಲಾಖೆ ಅಧಿಕಾರಿಗಳು. ಫಲಾನುಭವಿಗಳು ಹಾಗೂ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

