Author: editor.udayarashmi@gmail.com

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ, ಪುರಾಣ ಎಂದರೆ ಆಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದಂತೆ ಅದಕ್ಕೆ ಶರಣರ ಸಂತರ ಸತ್ಪುರುಷರ ದಾರ್ಶನಿಕರ ಮಹಾತ್ಮರ ಚರಿತ್ರೆ ಆಲಿಸುವುದರಿಂದ ಜೀವನ ಪಾವನವಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು.ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿದ್ದರಾಮೇಶ್ವರ ಜಾತ್ರಾ ನಿಮಿತ್ಯ ೧೪ ದಿನಗಳ ಪರ್ಯಂತ ಹಮ್ಮಿಕೊಂಡ ಜಗದ್ಗುರು ರೇವಣಸಿದ್ಧೇಶ್ವರ ಹಾಗೂ ಸೊನ್ನಲಗಿ ಶಿವಯೋಗಿ ಸಿದ್ಧರಾಮೇಶ್ವರ ಪುರಾಣ ಮಂಗಲ ಹಾಗೂ ಧರ್ಮಸಭೆಯಲ್ಲಿ ಮಾತನಾಡಿ, ಅವಿಭಕ್ತ ಕುಟುಂಬಗಳು ಮರೆಯಾಗಿ ಚಿಕ್ಕ ಚಿಕ್ಕ ಸಂಸಾರಗಳು ಉದ್ಭವಾಗುತ್ತೀರುವುದು ಸಂಬಂಧಗಳ ಬೆಲೆ ತಿಳಿಸಿ ರಕ್ತ ಸಂಬಂಧಗಳ ಅರ್ಥ ಭೋದಿಸುವ ಪಾವನ ಸ್ಥಳಗಳು ಧರ್ಮದ ದೇವಾಲಯಗಳು ಅತ್ತೆ ಮಾವ ಮೈದುನ ಸಹೋದರ ಸಹೋದರಿ ಪತಿ ಪತ್ನಿಯರ ಅಂತರಂಗದ ತೋಳಲಾಟ ಹೋಗಲಾಡಿಸುವ ದಿವ್ಯ ಶಕ್ತಿ ಶರಣರ ಜೀವನ ಚರಿತ್ರೆಯಲ್ಲಿ ಇರುವುದು ಇಂತಹ ಅದ್ಭುತ ಶಕ್ತಿ ಶರಣರ ಜೀವನ ಚರಿತ್ರೆಯಲ್ಲಿ ಇದೆ. ಧರ್ಮದ ರಕ್ಷಣ ಹಿರಿಯರ…

Read More

ಮುದ್ದೇಬಿಹಾಳ: ಕಲ್ಬುರ್ಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು.ಡಿ೧ ರಂದು ರಾತ್ರಿ ಅಗ್ನಿ ಪ್ರವೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಧ್ಯರಾತ್ರ ೨ಗಂಟೆಗೆ ಪ್ರಾರಂಭವಾಗಿ ಮೊದಲು ಪುರವಂತರರು ಅಗ್ನಿಪ್ರವೇಶಿಸಿದರು. ಬೆಳಗಿನ ಜಾವ ೫ಗಂಟೆಯವರೆಗೆ ಯಾವುದೇ ತೊಂದರೆಯಿಲ್ಲದೇ ನೆರವೇರಿತು. ಸಂಜೆ ೭ ಗಂಟೆಗೆ ರಥೋತ್ಸವ ಜರುಗಿತು. ಭಕ್ತರು ಚಲಿಸುವ ರಥಕ್ಕೆ ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು ಭಕ್ತಿಯನ್ನು ಪ್ರದರ್ಶಿಸಿದರು.ಅದಕ್ಕೂ ಮೊದಲು ನಡೆದ ಮದ್ದು ಸುಡುವ ಕಾರ್ಯಕ್ರಮ ಬಾನಂಗಳದ ಸೌಂದರ್ಯವನ್ನು ಇಮ್ಮಡಿಗೊಳಿತ್ತು.

Read More

ತನು ಫೌಂಡೇಶನ್‌ವತಿಯಿಂದ ಕನ್ನಡ ರಾಜ್ಯೋತ್ಸವ | ಸಾಧಕರಿಗೆ ‘ತನು ಕನ್ನಡ-ಮನ ಕನ್ನಡ ರಾಜ್ಯ ಪ್ರಶಸ್ತಿ’ ಪ್ರದಾನ ವಿಜಯಪುರ: ನಾವು ನವ್ಹೆಂಬರ್ ಕನ್ನಡಿಗರಾಗಬಾರದು, ನಿರಂತರ ಕನ್ನಡಿಗರಾಗಬೇಕು. ಕನ್ನಡವನ್ನು ನಾವೆಲ್ಲಾ ಮಾತನಾಡುತ್ತಾ, ಆಡಳಿತದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಇಂದು ನಾವು ಕನ್ನಡವನ್ನು ಉಳಿಸಬೇಕಾಗಿದೆ ಎಂದು ಕಮಾಂಡೆಂಟ್ ಐಆರ್‌ಬಿ ಮುಖ್ಯಸ್ಥ ಎನ್.ಬಿ.ಮೆಳ್ಳೆಗಟ್ಟೆ ಹೇಳಿದರು.ನಗರದ ಶ್ರೀ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ನಡೆದ ತನು ಫೌಂಡೇಶನ್ ವಿಜಯಪುರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕನ್ನಡ ಸಿರಿಗನ್ನಡ’ ಕಾರ್ಯಕ್ರಮ ಹಾಗೂ ‘ತನು ಕನ್ನಡ ಮನ ಕನ್ನಡ’ ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡಕ್ಕಿರುವ ಶ್ರೀಮಂತಿಕೆ, ಅದರ ಸಂಸ್ಕೃತಿಗಿರುವ ತಾಕತ್ತು ಶಾಶ್ವತವಾಗಿದೆ. ಇಂಗ್ಲೀಷ್ ನ ವ್ಯಾಮೋಹ ಬಿಟ್ಟು ಕನ್ನಡಕ್ಕೆ ಆದ್ಯತೆ ಕೊಡಬೇಕು. ವ್ಯವಹಾರಕ್ಕಾಗಿ ಮಾತ್ರ ಬೇರೆ ಭಾಷೆ ಇರಲಿ, ಮನಸ್ಪೂರ್ವಕವಾಗಿ ಕನ್ನಡ ಮಾತ್ರ ಇರಲಿ ಎಂದು ತಿಳಿಸಿದರು.ಅನ್ಯಭಾಷಿಕರಿಗೆ ನಮ್ಮ ಕನ್ನಡ ಕಲಿಸುವ ಪರಿಪಾಠ ಆಗಬೇಕಿದೆ. ಕರ್ನಾಟಕದ ಏಕೀಕರಣದ ಮಹತ್ವವನ್ನು ನಾವು ಇಂದು ಅರಿಯುವುದು ಮಹತ್ವದ್ದಾಗಿದೆ. ಸಾಹಿತಿಗಳ ಬರಹಗಳನ್ನು…

Read More

ಇಂಡಿ: ಈ ಭಾಗದ ಜನರ ಆಶೀರ್ವಾದದಿಂದ ಸತತ ೪೫ ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಜಿಲ್ಲೆಗೆ ಒಂದು ಲಕ್ಷ ಕೋಟಿಗೂ ಅಧಿಕ ಅನುದಾನ ತಂದು ಅಭಿವೃಧ್ಧಿಪಡಿಸಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.ಅವರು ಶನಿವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಇಂಡಿ ಮತ್ತು ಚಡಚಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ಸಭೆ, ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಿಲ್ಲೆಗೆ ಎನ್‌ಟಿಪಿಸಿ, ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳು, ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃಧ್ಧಿಪಡಿಸುವದು ಇಂತಹ ಹಲವು ಕಾರ್ಯವನ್ನು ಮಾಡಿದ ತೃಪ್ತಿ ನನಗಿದೆ. ಕೆಲವೊಬ್ಬರು ಅಂಗಿಯ ತೋಳು ಏರಿಸುತ್ತ, ಈ ಎಲ್ಲ ಕೆಲಸ ನಾ ಮಾಡೀನಿ, ನಾ ಮಾಡೀನಿ ಅಂತ ಹೇಳ್ಕೋತ್ ತಿರಗಾಡ್ತಾರ, ತಿರಗಾಡವ್ರು ತಿರಗಾಡಲಿ, ಜನರಿಗೆ ಎಲ್ಲಾ ಗೊತ್ತದ ಎಂದರು.೨೦೦೪ ರಲ್ಲಿ ರಾಮಕೃಷ್ಣ ಹೆಗಡೆ ಅವರ ಆರೋಗ್ಯ ವಿಚಾರಿಸಲು ಅವರ ಮನೆಗೆ ಹೋಗಿದ್ದೆ, ಆಗ ಅವರು ನನ್ನನ್ನು ಪಕ್ಕದಲ್ಲಿ ಕೂರಿಸಿ ರಮೇಶ ನಮ್ಮ ಪಾರ್ಟಿ…

Read More

ವಿಜಯಪುರ: ನಾಡಿನ ಮೇರು ಕಲಾವಿದ ಡಾಕ್ಟರ್ ವಿಷ್ಣುವರ್ಧನ್ ಅವರ ಪುಣ್ಯಭೂಮಿ ನಿರ್ಮಾಣ ಮಾಡುವ ಬಗ್ಗೆ ಇದೇ ಡಿಸೆಂಬರ್ 17ರಂದು ಬೆಂಗಳೂರಿನಲ್ಲಿ ಹೋರಾಟ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಜಯಪುರ ಜಿಲ್ಲಾ ಘಟಕದ ವತಿಯಿಂದ ವಿಷ್ಣು ಸಂಗಮೇಶ ತಿಳಿಸಿದ್ದಾರೆ.ಶನಿವಾರ ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ವಿಷ್ಣುವರ್ಧನ್ 30 12 2009ರಂದು ಇಹಲೋಕ ತ್ಯಜಿಸಿ 14 ವರ್ಷ ಕಳೆದರೂ ಇದುವರೆಗೂ ಪುಣ್ಯಭೂಮಿ ನಿರ್ಮಾಣ ಕಾರ್ಯ ನೆರವೇರಿಲ್ಲ. ಕೋಟ್ಯಾಂತರ ಅಭಿಮಾನಿಗಳು ಪಡೆದ ಕೋಟಿಗೊಬ್ಬ ಯಜಮಾನ್ರ ಅಂತ್ಯಕ್ರಿಯೆ ನಡೆದ ಸ್ಥಳದಲ್ಲಿ ಪುಣ್ಯಭೂಮಿ ನಿರ್ಮಿಸಲು ಭೂಮಿ ನೀಡುವಲ್ಲಿ ಸರ್ಕಾರಗಳು ಇಂದಿಗೂ ಅಂತಿಮ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿರುವುದು ಬೇಸರದ ಸಂಗತಿ ಎಂದಿದ್ದಾರೆ.ಡಾಕ್ಟರ್ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಪುಣ್ಯಭೂಮಿ ಸ್ಥಾಪನೆಗೆ ಸರಕಾರಕ್ಕೆ ಅಂತಿಮ ಎಚ್ಚರಿಕೆ ನೀಡಲು ಮತ್ತು ಕಾನೂನು ಪ್ರಕ್ರಿಯೆ ಹೋರಾಟಕ್ಕೆ ನಾಡಿನ ಎಲ್ಲ ಕನ್ನಡಪರ ಹೋರಾಟಗಾರರು, ರೈತ ಪರ ಹೋರಾಟಗಾರರು…

Read More

ವಿಜಯಪುರ: ಬ್ರಾಹ್ಮಣ, ಕ್ಷತ್ರೀಯ, ವೈಷ್ಯ ಹಾಗೂ ಶೂದ್ರ ಇವು ಒಂದರ ಮೇಲೆ ತಳಹದಿಯ ಆಧಾರದ ಮೇಲೆ ನಿಂತು ಬದುಕು ಸಾಗಿಸಿ ಸಮಾಜದ ಉದ್ದಾರದ ಕಡೆಗೆ ತಗೆದುಕೊಂಡು ಹೋಗುವದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಮುತ್ತಗಿಯ ಅರ್ಚಕ ಪಂ. ನರಹರಿ ಆಚಾರ್ಯ ಜೋಶಿ ಅವರು ಹೇಳಿದರು.ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ವಿಜಯಪುರ ಇದರ ಆಶ್ರಯದಲ್ಲಿ ಪ್ರತಿತಿಂಗಳು ನಡೆಸುತ್ತಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂತ ಕನಕದಾಸರ ಮೋಹನ ತರಂಗಿಣಿ ಕುರಿತು ಉಪನ್ಯಾಸ ನೀಡುತ್ತದ್ದ ಅವರು, ಕನಕದಾಸರ ಈ ಕೃತಿಯಲ್ಲಿಯೂ ಧರ್ಮದ ತಳಹದಿಯ ಮೇಲೆ ನಿಂತ ಪ್ರಸಂಗದ ವಿವರಣೆಯನ್ನು ನೀಡಿ, ಬ್ರಾಹ್ಮಣ ಓದಿದರೇ, ಅವನಿಗೆ ಕ್ಷತ್ರೀಯ ನೆಂಬ ಶಕ್ತಿ ಬರಬೇಕು, ಈ ಶಕ್ತಿ ಬರಲು ಆಹಾರ ಬೇಕಾದರೆ ವೈಷ್ಯನ ಆಹಾರ ಸೇವಿಸಿ ಶಕ್ತಿ ಉಂಟಾಗಲು ದೇಹ ಶೂದ್ರನ ಪಾದ ಮೇಲೆ ನಿಂತಿರುತ್ತದೆ, ನಮಸ್ಕಾರ ಮಾಡುವದು ಶಿರಕ್ಕಲ್ಲ ಪಾದಕ್ಕೆ ಎಂಬುದು ಅರಿತುಕೊಂಡು ನಾಲ್ಕು ವರ್ಣಗಳು ಯಾವ ರೀತಿಯಲ್ಲಿ ಶ್ರೇಷ್ಠವಾದುದು ಎಂಬುದನ್ನು ಸೂಕ್ಷ್ಮವಾಗಿ ಅರಿಯಲು ಸಾಧ್ಯ ಎಂದವರು ಹೇಳಿದರು.ಜಗತ್ತನ್ನು…

Read More

ಮುದ್ದೇಬಿಹಾಳ: ಇಲ್ಲಿನ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಮುದ್ದೇಬಿಹಾಳ ಕ್ರಿಕೇಟ್ ಪ್ರೀಮಿಯರ್ ಲೀಗ್ ಸೀಜನ್ ೬ ನ ಮುಕ್ತಾಯ ಸಮಾರಂಭವನ್ನು ಡಿ.೩ ರಂದು ಸಂಜೆ ೫:೩೦ಕ್ಕೆ ಹಮ್ಮಿಕೊಳ್ಳಲಾಗಿದೆ.ಸಮಾರಂಭದ ದಿವ್ಯ ಸಾನಿಧ್ಯವನ್ನು ಕುಂಟೋಜಿ ಸಂಸ್ಥಾನ ಹಿರೇಮಠದ ಡಾ.ಚನ್ನವೀರ ದೇವರು ಮತ್ತು ಮೌಲಾನಾ ಅಲ್ಲಾಭಕ್ಷ ಖಾಜಿ ವಹಿಸಲಿದ್ದಾರೆ. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಧ್ಯಕ್ಷತೆ, ಸಮಾಜ ಸೇವಕ, ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ, ಯಾಸೀನ್ ಸೋಠೆ ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಮಲ್ಲಿಕಾರ್ಜುನ ಮದರಿ, ಶಾಂತಗೌಡ ಪಾಟೀಲ ನಡಹಳ್ಳಿ, ಮಾಜಿ ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ, ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿ.ಎಂ.ನಾಗಠಾಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ, ಪು.ಸ ಮಹೆಬೂಬ ಗೊಳಸಂಗಿ ಸೇರಿದಂತೆ ಮತ್ತೀತರರು ಅತಿಥಿಗಳಾಗಿ ಆಗಮಿಸಲಿದ್ದಾರೆ.

Read More

ಇಂಡಿ: ಗ್ರಾಮೀಣ ಕತೆಗಳು ನಮ್ಮ ಬದುಕಿನ ಕತೆಗಳೇ ಆಗಿವೆ, ಅಲ್ಲಿ ನಮ್ಮ ದೇಸಿಯ ಸೊಗಡು ಇತ್ತೀಚೆಗಿನ ದಿನಗಳಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಬೆಳಗಾವಿ ಜಿಲ್ಲೆಯ ಯಕ್ಕುಂಡಿ ಸರಕಾರಿ ಪದವಿಪೂರ್ವ ಕಾಲೇಜಿ ಪ್ರಾಚಾರ್ಯ ಡಾ. ವೈ.ಎಂ.ಯಾಕೊಳ್ಳಿ ಹೇಳಿದರು.ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಹಾಗೂ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಪ್ರಕಾಶ ಗ.ಖಾಡೆ ಅವರ ಬಾಳುಕುನ ಪುರಾಣ ಕಥಾ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಬಾಳುಕುನ ಪುರಾಣ ಕತಾವಲೋಕನ ಕುರಿತು ಉಪನ್ಯಾಸ ನೀಡಿದರು.ಇಂದಿನ ಕನ್ನಡದ ಕತೆಗಳಲ್ಲಿ ಮೆಟ್ರೊ ಜಗತ್ತು ಅನಾವರಣವಾಗುತ್ತಿರುವ ಈ ಹೊತ್ತಲ್ಲಿ ಬಾಳುಕುನ ಪುರಾಣದ ಮೂಲಕ ಕತೆಗಾರ ಗ್ರಾಮೀಣ ಪ್ರದೇಶದ ಜನರ ಜೀವನಶೈಲಿಗಳನ್ನು ಜಾನಪದೀಯಶೈಲಿಯಲ್ಲಿ ಹಿಡಿದಿಡುವ ಕಾರ್ಯ ಮೆಚ್ಚುಗೆ ಪಡುವಂತಹದ್ದು, ಕತೆಗಾರರು ಇಂತಹ ಸಂಗತಿಗಳನ್ನು ಬಹಳ ಸೂಕ್ಷವಾಗಿ ಓದುಗರಿಗೆ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಆಶಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ ರಮೇಶ ಕತ್ತಿ ಮಾತನಾಡಿ, ಪ್ರಕಾಶ ಖಾಡೆ ಈ…

Read More

ವಿಜಯಪುರ: ಇತ್ತೀಚೆಗೆ ದುಬೈನಲ್ಲಿ ನಡೆದ ಅಂತಾರಾಷ್ಟ್ರೀಯ ಬ್ರೇನ್ ಓ ಬ್ರೇನ್ ಅಬ್ಯಾಕ್ಸ್ ಸ್ಪರ್ಧೆಯಲ್ಲಿ ವಿಜಯಪುರದ ಅಮೋಘಸಾಯಿ ಬಾಬು ಕೋರಿ ಅವರು ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.ಎಆರ್‌ಜೆ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವ ಅಮೋಘಸಾಯಿ ಈ ವಿಶಿಷ್ಟ ಸಾಧನೆ ಮಾಡಿದ್ದಾರೆ ಎಂದು ವಿಜಯ ಜೋಶಿ ತಿಳಿಸಿದ್ದಾರೆ.

Read More

ವಿಜಯಪುರ: ನಗರದ ಮನಗೂಳಿ ರಸ್ತೆಯಲ್ಲಿರುವ ಶ್ರೀ ಶಿವಚಿದಂಬರ ದೇವಾಲಯದಲ್ಲಿ ಇದೇ ದಿನಾಂಕ ೦೩ ರಂದು ಶ್ರೀ ಶಿವಚಿದಂಬರ ಜಯಂತೋತ್ಸವ ಶ್ರದ್ಧಾ-ಭಕ್ತಿಪೂರ್ವಕವಾಗಿ ನಡೆಯಲಿದೆ.ದಿ.೩ ರಂದು ಬೆಳಿಗ್ಗೆ ೬ ಕ್ಕೆ ಕಾಕಡಾರತಿ, ಬೆಳಿಗ್ಗೆ ೭ ಕ್ಕೆ ಶ್ರೀ ಶಿವಚಿದಂಬರೇಶ್ವರರಿಗೆ ಅಭಿಷೇಕ, ಬೆಳಿಗ್ಗೆ ೮ ಕ್ಕೆ ಶ್ರೀ ಯೋಗಿಶ್ವರ ಯಾಜ್ಞವಲ್ಕ್ಯರ ಅಷ್ಟೋತ್ತರ ನಡೆಯಲಿದೆ. ಅದೇ ದಿನ ಬೆಳಿಗ್ಗೆ ೧೦ ಕ್ಕೆ ಶ್ರೀ ರಾಮ ಜಯರಾಮ ಜಯರಾಮ ಎಂಬ ಜಪ ಸಂಕಲ್ಪಕ್ಕೆ ಪೂರಕವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨ ಕ್ಕೆ ತೊಟ್ಟಿಲೋತ್ಸವ ನಡೆಯಲಿದೆ. ಅದೇ ದಿನ ಮಧ್ಯಾಹ್ನ ೧೨.೩೦ ಕ್ಕೆ ಶ್ರೀ ಸಂತ ಶಂಕರಣ್ಣಾ ಅನಂತಪೂರ ಅವರಿಂದ ಪ್ರವಚನ, ಮಧ್ಯಾಹ್ನ ೧.೩೦ ಕ್ಕೆ ಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೭ ಕ್ಕೆ ಶಿವಚಿಂದಬರ ಹಾಗೂ ಕಾರ್ತಿಕೋತ್ಸವ ನಡೆಯಲಿದೆ ಎಂದು ವಿಜಯ ಜೋಶಿ ತಿಳಿಸಿದ್ದಾರೆ.

Read More