ಇಂಡಿ: ಗ್ರಾಮೀಣ ಕತೆಗಳು ನಮ್ಮ ಬದುಕಿನ ಕತೆಗಳೇ ಆಗಿವೆ, ಅಲ್ಲಿ ನಮ್ಮ ದೇಸಿಯ ಸೊಗಡು ಇತ್ತೀಚೆಗಿನ ದಿನಗಳಲ್ಲಿ ಮರೆಯಾಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಬೆಳಗಾವಿ ಜಿಲ್ಲೆಯ ಯಕ್ಕುಂಡಿ ಸರಕಾರಿ ಪದವಿಪೂರ್ವ ಕಾಲೇಜಿ ಪ್ರಾಚಾರ್ಯ ಡಾ. ವೈ.ಎಂ.ಯಾಕೊಳ್ಳಿ ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ವಿಭಾಗ ಹಾಗೂ ಕಡಣಿಯ ಬೆರಗು ಪ್ರಕಾಶನ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಡಾ. ಪ್ರಕಾಶ ಗ.ಖಾಡೆ ಅವರ ಬಾಳುಕುನ ಪುರಾಣ ಕಥಾ ಓದು ಮತ್ತು ಸಂವಾದ ಕಾರ್ಯಕ್ರಮದಲ್ಲಿ ಬಾಳುಕುನ ಪುರಾಣ ಕತಾವಲೋಕನ ಕುರಿತು ಉಪನ್ಯಾಸ ನೀಡಿದರು.
ಇಂದಿನ ಕನ್ನಡದ ಕತೆಗಳಲ್ಲಿ ಮೆಟ್ರೊ ಜಗತ್ತು ಅನಾವರಣವಾಗುತ್ತಿರುವ ಈ ಹೊತ್ತಲ್ಲಿ ಬಾಳುಕುನ ಪುರಾಣದ ಮೂಲಕ ಕತೆಗಾರ ಗ್ರಾಮೀಣ ಪ್ರದೇಶದ ಜನರ ಜೀವನಶೈಲಿಗಳನ್ನು ಜಾನಪದೀಯಶೈಲಿಯಲ್ಲಿ ಹಿಡಿದಿಡುವ ಕಾರ್ಯ ಮೆಚ್ಚುಗೆ ಪಡುವಂತಹದ್ದು, ಕತೆಗಾರರು ಇಂತಹ ಸಂಗತಿಗಳನ್ನು ಬಹಳ ಸೂಕ್ಷವಾಗಿ ಓದುಗರಿಗೆ ಕಟ್ಟಿಕೊಡುವ ಕೆಲಸ ಮಾಡಬೇಕು ಎಂದು ಆಶಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ ರಮೇಶ ಕತ್ತಿ ಮಾತನಾಡಿ, ಪ್ರಕಾಶ ಖಾಡೆ ಈ ನೆಲದ ಸತ್ವಯುತ ಬರಹಗಾರ, ಅವರ ಕತೆಗಳಲ್ಲಿ ಜಾನಪದೀಯ ಸೊಬಗು ಹೆಚ್ಚು ವಿಸ್ತಾರವನ್ನು ಪಡೆದಿದೆ, ಖಾಡೆ ಅವರು ಮಹತ್ವದ ಕತೆಗಾರರ ಸಾಲಿನಲ್ಲಿ ನಿಲ್ಲುತ್ತಾರೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಆರ್.ಎಚ್.ರಮೇಶ ವಹಿಸಿಕೊಂಡು ಇಂತಹ ಕಾರ್ಯಕ್ರಮಗಳು ನಮ್ಮಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವದಲ್ಲದೆ ನಮಗೂ ಬರಹದ ಪ್ರೇರಣೆಯಾಗಿದೆ ಇಂತಹ ಉಪಯುಕ್ತ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಐಕ್ಯೂಐಸಿ ಸಂಯೋಜಕಿ ಡಾ. ಶೀರುನುಸಲ್ತಾನ ಇನಾಮದಾರ, ಪ್ರೊ.ತಿಪ್ಪಣ್ಣ.ಎಸ್.ವಗ್ದಾಳ, ಪ್ರೊ ರಾಜಲಕ್ಷ್ಮೀ ಆರ್, ಸತೀಶಕುಮಾರ ಚುಂಚೂರ, ಪ್ರೊ.ಎಸ್.ಜೆ.ಮಾಡ್ಯಾಳ, ಸೋಮಲಿಂಗ ಎಸ್ ಗಂಜಿ ಮೊದಲಾದವರು ವೇದಿಕೆಯಲ್ಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

