ಇಂಡಿ: ಈ ಭಾಗದ ಜನರ ಆಶೀರ್ವಾದದಿಂದ ಸತತ ೪೫ ವರ್ಷಗಳ ಕಾಲ ರಾಜಕಾರಣ ಮಾಡಿದ್ದೇನೆ. ಜಿಲ್ಲೆಗೆ ಒಂದು ಲಕ್ಷ ಕೋಟಿಗೂ ಅಧಿಕ ಅನುದಾನ ತಂದು ಅಭಿವೃಧ್ಧಿಪಡಿಸಿದ್ದೇನೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಅವರು ಶನಿವಾರ ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಇಂಡಿ ಮತ್ತು ಚಡಚಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ಸಭೆ, ಹಾಗೂ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಗೆ ಎನ್‌ಟಿಪಿಸಿ, ವಿಮಾನ ನಿಲ್ದಾಣ, ನೀರಾವರಿ ಯೋಜನೆಗಳು, ರಸ್ತೆಗಳನ್ನು ಮೇಲ್ದರ್ಜೆಗೇರಿಸಿ ಅಭಿವೃಧ್ಧಿಪಡಿಸುವದು ಇಂತಹ ಹಲವು ಕಾರ್ಯವನ್ನು ಮಾಡಿದ ತೃಪ್ತಿ ನನಗಿದೆ. ಕೆಲವೊಬ್ಬರು ಅಂಗಿಯ ತೋಳು ಏರಿಸುತ್ತ, ಈ ಎಲ್ಲ ಕೆಲಸ ನಾ ಮಾಡೀನಿ, ನಾ ಮಾಡೀನಿ ಅಂತ ಹೇಳ್ಕೋತ್ ತಿರಗಾಡ್ತಾರ, ತಿರಗಾಡವ್ರು ತಿರಗಾಡಲಿ, ಜನರಿಗೆ ಎಲ್ಲಾ ಗೊತ್ತದ ಎಂದರು.
೨೦೦೪ ರಲ್ಲಿ ರಾಮಕೃಷ್ಣ ಹೆಗಡೆ ಅವರ ಆರೋಗ್ಯ ವಿಚಾರಿಸಲು ಅವರ ಮನೆಗೆ ಹೋಗಿದ್ದೆ, ಆಗ ಅವರು ನನ್ನನ್ನು ಪಕ್ಕದಲ್ಲಿ ಕೂರಿಸಿ ರಮೇಶ ನಮ್ಮ ಪಾರ್ಟಿ ಇನ್ನು ಬೆಳೆಂಗಿಲ್ಲಾ, ನೀ ಬಿಜೆಪಿ ಪಕ್ಷಕ್ಕ ಹೋಗು, ಪ್ರತೀ ಹಳ್ಳಿಯಿಂದ ಜನ ಬಿಜೆಪಿ ಮಾಡ್ತಾರ ಅತ್ತ ಹೇಳಿದ್ರು, ಅವರ ಮಾತಿಗೆ ಓಗೊಟ್ಟು ಪ್ರಥಮವಾಗಿ ನಾನು ಉತ್ತರ ಕರ್ನಾಟಕದ ಎಲ್ಲ ಲಿಂಗಾಯತ ಮುಖಂಡರಿಗೆ ಮಾತನಾಡಿ, ಎಲ್ಲರೂ ಬಿಜೆಪಿ ಸೇರೂನು ಅತ್ ಮೊದಲು ನಾನೇ ಸೇರ್‌ಕೊಂಡೆ. ಮುಂದೆ ತಂಡೋಪ ತಂಡವಾಗಿ ಎಲ್ಲರೂ ಬಿಜೆಪಿಗೆ ಸೇರಿದ್ರು ಎಂದು ಹಳೆಯ ಕಾಲದ ತಮ್ಮ ರಾಜಕಾರಣದ ಕುರಿತು ಮೆಲುಕು ಹಾಕಿದರು.
ನಾವು ಆಡುವ ಮಾತು, ನಮ್ಮ ವರ್ತನೆ ಸರಿ ಇದ್ರೆ ಎಲ್ಲರೂ ನಮ್ಮನ್ನು ಗೌರವಿಸುತ್ತಾರೆ, ಬೆಳೆಸುತ್ತಾರೆ. ನನ್ನ ವೈಯಕ್ತಿಕ ಬೆಳವಣಿಗೆಗೆ ನನ್ನ ವರ್ತನೆಯ ಜೊತೆಗೆ ಇಂಡಿ ತಾಲೂಕಿನ ಹಲವು ಹಿರಿಯರ ಸಹಕಾರವಿದೆ ಎಂದರು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯ ರಾಜ್ಯ ಸಂಚಾಲಕ ವಿವೇಕ ಡಬ್ಬಿ ಮಾತನಾಡಿದರು.
ಬಿಜೆಪಿ ಮುಖಂಡರಾದ ಮಲ್ಲಿಕಾರ್ಜುನ ಜೋಗೂರ, ಮಲ್ಲಿಕಾರ್ಜುನ ಕಿವುಡೆ, ಕಾಸುಗೌಡ ಬಿರಾದಾರ, ಸಾಬಣ್ಣ ಮಾಶ್ಯಾಳ, ಸಿದ್ದಲಿಂಗ ಹಂಜಗಿ, ಅನೀಲ ಜಮಾದಾರ, ಸಂಜೀವ ಐಹೊಳೆ ಮತ್ತಿತರರು ಮಾತನಾಡಿದರು.
ವೇದಿಕೆಯಲ್ಲಿ ಹಣಮಂತ್ರಾಯಗೌಡ ಪಾಟೀಲ, ರಾಮ ಅವಟಿ, ರಾಜಕುಮಾರ ಸಗಾಯಿ, ವಿಜಯಲಕ್ಷ್ಮೀ ರೂಗಿಮಠ, ಶ್ರೀಶೈಲ ಮದರಿ ಸೇರಿದಂತೆ ಇನ್ನಿತರರು ಇದ್ದರು.
Subscribe to Updates
Get the latest creative news from FooBar about art, design and business.
ವರ್ತನೆ ಸರಿ ಇದ್ರೆ ನಮ್ಮನ್ನು ಬೆಳೆಸುತ್ತಾರೆ :ಸಂಸದ ಜಿಗಜಿಣಗಿ
Related Posts
Add A Comment

