ಮುದ್ದೇಬಿಹಾಳ: ಕಲ್ಬುರ್ಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಹಲಕರ್ಟಿ ಗ್ರಾಮದ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಲಕ್ಷಾಂತರ ಭಕ್ತರ ಮಧ್ಯೆ ಅದ್ಧೂರಿಯಾಗಿ ಜರುಗಿತು.
ಡಿ೧ ರಂದು ರಾತ್ರಿ ಅಗ್ನಿ ಪ್ರವೇಶ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಧ್ಯರಾತ್ರ ೨ಗಂಟೆಗೆ ಪ್ರಾರಂಭವಾಗಿ ಮೊದಲು ಪುರವಂತರರು ಅಗ್ನಿಪ್ರವೇಶಿಸಿದರು. ಬೆಳಗಿನ ಜಾವ ೫ಗಂಟೆಯವರೆಗೆ ಯಾವುದೇ ತೊಂದರೆಯಿಲ್ಲದೇ ನೆರವೇರಿತು. ಸಂಜೆ ೭ ಗಂಟೆಗೆ ರಥೋತ್ಸವ ಜರುಗಿತು. ಭಕ್ತರು ಚಲಿಸುವ ರಥಕ್ಕೆ ಉತ್ತತ್ತಿ ಮತ್ತು ಬಾಳೆಹಣ್ಣು ಎಸೆದು ಭಕ್ತಿಯನ್ನು ಪ್ರದರ್ಶಿಸಿದರು.
ಅದಕ್ಕೂ ಮೊದಲು ನಡೆದ ಮದ್ದು ಸುಡುವ ಕಾರ್ಯಕ್ರಮ ಬಾನಂಗಳದ ಸೌಂದರ್ಯವನ್ನು ಇಮ್ಮಡಿಗೊಳಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

