ವಿಜಯಪುರ: ಬ್ರಾಹ್ಮಣ, ಕ್ಷತ್ರೀಯ, ವೈಷ್ಯ ಹಾಗೂ ಶೂದ್ರ ಇವು ಒಂದರ ಮೇಲೆ ತಳಹದಿಯ ಆಧಾರದ ಮೇಲೆ ನಿಂತು ಬದುಕು ಸಾಗಿಸಿ ಸಮಾಜದ ಉದ್ದಾರದ ಕಡೆಗೆ ತಗೆದುಕೊಂಡು ಹೋಗುವದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ ಎಂದು ಮುತ್ತಗಿಯ ಅರ್ಚಕ ಪಂ. ನರಹರಿ ಆಚಾರ್ಯ ಜೋಶಿ ಅವರು ಹೇಳಿದರು.
ಶ್ರೀ ಕಾಳಿದಾಸ ಶಿಕ್ಷಣ ಸಂಸ್ಥೆ ವಿಜಯಪುರ ಇದರ ಆಶ್ರಯದಲ್ಲಿ ಪ್ರತಿತಿಂಗಳು ನಡೆಸುತ್ತಿರುವ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂತ ಕನಕದಾಸರ ಮೋಹನ ತರಂಗಿಣಿ ಕುರಿತು ಉಪನ್ಯಾಸ ನೀಡುತ್ತದ್ದ ಅವರು, ಕನಕದಾಸರ ಈ ಕೃತಿಯಲ್ಲಿಯೂ ಧರ್ಮದ ತಳಹದಿಯ ಮೇಲೆ ನಿಂತ ಪ್ರಸಂಗದ ವಿವರಣೆಯನ್ನು ನೀಡಿ, ಬ್ರಾಹ್ಮಣ ಓದಿದರೇ, ಅವನಿಗೆ ಕ್ಷತ್ರೀಯ ನೆಂಬ ಶಕ್ತಿ ಬರಬೇಕು, ಈ ಶಕ್ತಿ ಬರಲು ಆಹಾರ ಬೇಕಾದರೆ ವೈಷ್ಯನ ಆಹಾರ ಸೇವಿಸಿ ಶಕ್ತಿ ಉಂಟಾಗಲು ದೇಹ ಶೂದ್ರನ ಪಾದ ಮೇಲೆ ನಿಂತಿರುತ್ತದೆ, ನಮಸ್ಕಾರ ಮಾಡುವದು ಶಿರಕ್ಕಲ್ಲ ಪಾದಕ್ಕೆ ಎಂಬುದು ಅರಿತುಕೊಂಡು ನಾಲ್ಕು ವರ್ಣಗಳು ಯಾವ ರೀತಿಯಲ್ಲಿ ಶ್ರೇಷ್ಠವಾದುದು ಎಂಬುದನ್ನು ಸೂಕ್ಷ್ಮವಾಗಿ ಅರಿಯಲು ಸಾಧ್ಯ ಎಂದವರು ಹೇಳಿದರು.
ಜಗತ್ತನ್ನು ನಾವು ನೋಡದೇ ಜಗತ್ತು ನಮ್ಮನ್ನು ನೋಡುವಂತೆ ನಾವಾಗಬೇಕು ಎಂದು ಹೇಳಿ ನಿರಂತರ ಅಭ್ಯಾಸದ ಛಲ ಇರಬೇಕು, ಹೊಗಳೂವ ಭಾವನೆ ಇರಬೇಕು, ಹರಿಯುವ ನೀರದಂತಿರಬೇಕು ಎಂದು ಎಲ್ಲಾ ಧರ್ಮದ ಸಾರವನ್ನು ಹೇಳುತ್ತದೆ ಅದನ್ನು ಸಾಧಿಸಿದಾಗಲೇ ಜೀವನಕ್ಕೆ ಒಂದು ಬೆಲೆ ಬರಲು ಸಾಧ್ಯ ಎಂದರು. ನಮ್ಮಲ್ಲಿ ಸಂಸ್ಕಾರ ಬೆಳೆಯುವಲ್ಲಿ ನಮ್ಮ ಧರ್ಮವನ್ನು ನಾವು ಯಾವಾಗಲೂ ಕಾಪಾಡಿಕೊಂಡಾಗ ಧರ್ಮ ನಮ್ಮನ್ನು ರಕ್ಷೀಸುತ್ತದೆ ಎಂದರು.
ಬಸವಣ್ಣನ ವಚನವನ್ನು ನಿವೃತ್ತ ಉಪನಿಬಂಧಕರಾದ ಬಿ.ಆರ್.ಬನಸೋಡೆ ಅವರು ಹಾಡಿ, ಕಲಿಯುದರಲ್ಲಿಯೇ ಸಂತೋಷವಿದೆ ಎಂದು ತೋರಿಸಿಕೊಟ್ಟ ರಾಮಕೃಷ್ಣ ಪರಮಹಂಸರ ವಿಚಾರಧಾರೆಗಳನ್ನು ಕೊಂಡಾಡಿದರು.
ಸಣ್ಣ ಸಂಸ್ಥೆಯಾದರೂ ಕೆಲಸ ಮಾತ್ರ ದೊಡ್ಡದು, ಇಂತಹ ಉತ್ತಮ ದೇಶ ಕಟ್ಟುವ ಕಾರ್ಯದ ಸಂಸ್ಕೃತಿ ಉಳಿಸಿ-ಬೆಳೆಸಿ ನೀತಿ ಬೊಧನೆ ಕಾರ್ಯಗಳನ್ನು ನಡೆಸುತ್ತಿರುವ ಜಿದ್ದಿ ಅವರ ಛಲ ಅಪಾರವಾದುದು. ಇದು ಮುಂದೆ ಸಾಗಲಿ ಇದಕ್ಕೆ ಒಂದಿಲ್ಲೊಂದು ದಿನ ಬೆಲೆ ಬರಲೇ ಬೇಕು ಎಂದು ನಿವೃತ್ತ ಪ್ರಾಚಾರ್ಯ ವಿ.ಡಿ.ವಸ್ತ್ರದ ಬಣ್ಣಿಸಿದರು.
.ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಸ್. ಎ. ಜಿದ್ದಿ ಅವರು ಅಧ್ಯಕ್ಷತೆ ವಹಿಸಿದ್ದರು ಬಸವರಾಜ ಮೇಟಿ, ಸಿದ್ದನಗೌಡ ಶಿವಣಗಿ, ನ್ಯಾಯವಾದಿ ಕೆ.ಎಫ್.ಅಂಕಲಗಿ, ಕೆ.ಆರ್.ನಾಗೋಡ, ನಿವೃತ್ತ ಶಿಕ್ಷಕ ಕುಲಕರ್ಣಿ, ಆಡಳಿತಾಧಿಕಾರಿ ಆರ್. ಎಸ್. ವಾಡೇದ, ವಿ.ಎಸ್.ಶಿರೋಳ, ವಿ.ಎಸ್. ಕುಲಕರ್ಣಿ, ಮಿನಾಕ್ಷಿ ಆಸಂಗಿ, ಕಡಕೋಳ ಗುರುಗಳು, ಬಿ.ಟಿ.ಜಿದ್ದಿ ಹಾಗೂ ತಾಜಪೂರ, ಕಕಮರಿಯ ಶಿಕ್ಷಕರುಗಳು ಸಿಬ್ಬಂದಿ ಭಾಗವಹಿಸಿದ್ದರು.
ಜಿ.ಎಚ್.ಮರನೂರ ಪ್ರಾರ್ಥಿಸಿದರು. ಪ್ರಾಚಾರ್ಯ ಕೆ.ಆರ್.ಜಾಧವ ಸ್ವಾಗತಿಸಿದರು. ಉಪನ್ಯಾಸಕ ಡಿ.ಬಿ.ದೊಡಮನಿ ನಿರೂಪಿಸಿದರು. ವಂದನಾರ್ಪಣೆಯನ್ನು ಆಯ್.ಎನ್.ಕಂಬಾರ ಮಾಡಿದರು
Subscribe to Updates
Get the latest creative news from FooBar about art, design and business.
Related Posts
Add A Comment
