ವಿಜಯಪುರ: ನಗರದ ಮನಗೂಳಿ ರಸ್ತೆಯಲ್ಲಿರುವ ಶ್ರೀ ಶಿವಚಿದಂಬರ ದೇವಾಲಯದಲ್ಲಿ ಇದೇ ದಿನಾಂಕ ೦೩ ರಂದು ಶ್ರೀ ಶಿವಚಿದಂಬರ ಜಯಂತೋತ್ಸವ ಶ್ರದ್ಧಾ-ಭಕ್ತಿಪೂರ್ವಕವಾಗಿ ನಡೆಯಲಿದೆ.
ದಿ.೩ ರಂದು ಬೆಳಿಗ್ಗೆ ೬ ಕ್ಕೆ ಕಾಕಡಾರತಿ, ಬೆಳಿಗ್ಗೆ ೭ ಕ್ಕೆ ಶ್ರೀ ಶಿವಚಿದಂಬರೇಶ್ವರರಿಗೆ ಅಭಿಷೇಕ, ಬೆಳಿಗ್ಗೆ ೮ ಕ್ಕೆ ಶ್ರೀ ಯೋಗಿಶ್ವರ ಯಾಜ್ಞವಲ್ಕ್ಯರ ಅಷ್ಟೋತ್ತರ ನಡೆಯಲಿದೆ. ಅದೇ ದಿನ ಬೆಳಿಗ್ಗೆ ೧೦ ಕ್ಕೆ ಶ್ರೀ ರಾಮ ಜಯರಾಮ ಜಯರಾಮ ಎಂಬ ಜಪ ಸಂಕಲ್ಪಕ್ಕೆ ಪೂರಕವಾದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ೧೨ ಕ್ಕೆ ತೊಟ್ಟಿಲೋತ್ಸವ ನಡೆಯಲಿದೆ. ಅದೇ ದಿನ ಮಧ್ಯಾಹ್ನ ೧೨.೩೦ ಕ್ಕೆ ಶ್ರೀ ಸಂತ ಶಂಕರಣ್ಣಾ ಅನಂತಪೂರ ಅವರಿಂದ ಪ್ರವಚನ, ಮಧ್ಯಾಹ್ನ ೧.೩೦ ಕ್ಕೆ ಮಂಗಳಾರತಿ, ಮಹಾಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೭ ಕ್ಕೆ ಶಿವಚಿಂದಬರ ಹಾಗೂ ಕಾರ್ತಿಕೋತ್ಸವ ನಡೆಯಲಿದೆ ಎಂದು ವಿಜಯ ಜೋಶಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
