Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮಂಡ್ಯ ಮಂಜುನಾಥ ಉಡುಪ ಬಲ ಹೆಟ್ಟೋ, ಬುದ್ದಿ ಹೆಚೋ ಎಂಬ ವಿಷಯದಲ್ಲಿ ಒಮ್ಮೆ ಸಿಂಹಕ್ಕೂ ನರಿಗೂ ತುಂಬ ಚರ್ಚೆ ನಡೆಯಿತು. ಬಲಕ್ಕಿಂತ ಬುದ್ದಿಯೇ ಹೆಚ್ಚು ಎಂದು ನರಿ ವಾದಿಸಿತು. ಅಷ್ಟೇ ಅಲ್ಲ, ತನ್ನ ಆ ಹೇಳಿಕೆಯನ್ನು ಸಮರ್ಥಿಸಿ ತೋರಿಸಲೂ ಅದು ಸಿದ್ಧವಿತ್ತು. ನರಿಯ ಮಾತಿನ ಸರಣಿ ಸಿಂಹಕ್ಕೆ ಹಿಡಿಸಿತು.ನರಿಯ ಹೇಳಿಕೆ ನಿಜವಿರಲೂಬಹುದೆಂದು ಅದಕ್ಕೆ ಅನ್ನಿಸತೊಡಗಿತು.ಹೀಗಿರುತ್ತ ಒಮ್ಮೆ ಅವು ಬೇಟೆಗೆಂದು ಹೊರಟವು.ನರಿ ತನ್ನ ಹೇಳಿಕೆಯ ಸಮರ್ಥನೆಗಾಗಿ ಒಂದು ಯೋಜನೆ ಹಾಕಿತು. ಸಿಂಹ ಸತ್ತು ಬಿದ್ದಂತೆ ನಟಿಸಬೇಕು. ಇತರ ಪ್ರಾಣಿಗಳು ಸಮೀಪಿಸಿದಾಗ ಧುತ್ತೆಂದು ಎದ್ದು ನಿಂತು ಅವುಗಳ ಮೇಲೆ ಆಕ್ರಮಣ ನಡೆಸಬೇಕು, ಇದು ನರಿಯಯೋಜನೆ.ಸರಿ, ಸಿಂಹ ಸತ್ತಂತೆ ಬಿದ್ದು ಕೊಂಡಿತು. ನರಿ ಪಕ್ಕದಪೊದೆಯಲ್ಲಿ ಅಡಗಿಕೊಂಡಿದ್ದು ಸಿಂಹಕ್ಕೆ ಸೂಚನೆಗಳನ್ನು ಕೊಡುತ್ತಿತ್ತು. ಅಷ್ಟರಲ್ಲಿ ಆನೆಗಳ ಒಂದು ಹಿಂಡು ಧಾವಿಸುತ್ತ ಬರುವುದು ಕಾಣಿಸಿತು. ಸಿಂಹ ಸಹಜವಾಗಿ ಇಂಥ ಸಂದರ್ಭದಲ್ಲಿ ಎದ್ದು ನಿಲ್ಲಬೇಕು. ಆದರೆ ನರಿ ಅದಕ್ಕೆ ಏಳಬೇಡವೆಂದು ಸೂಚಿಸಿತು. ಆನೆಗಳ ಹಿಂಡು ತೀರ ಹತ್ತಿರ ಬರಲಿ, ಆಗ ಮಿಂಚಿನಂತೆ…
ವಿಜಯಪುರ: ನಗರದ ಸಾರಿಪುತ್ರ ಭೋಧಿಮ್ಮ ಬುದ್ಧ ವಿಹಾರದಲ್ಲಿ ಡಿ. ೬ರಿಂದ ೮ರವರೆಗೆ ಬೆಳಿಗ್ಗೆ ೧೦ ರಿಂದ ರಾತ್ರಿ ೯ ಗಂಟೆವರೆಗೆ ವಿಶ್ವರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರ ೬೭ನೇ ಮಹಾಪರಿನಿರ್ವಾಣ ದಿನದ ನಿಮಿತ್ಯ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಮತ್ತು ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನಗರದ ಬೌದ್ಧವಿಹಾರ ನಿರ್ಮಾಣ ಸಮಿತಿ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಹೇಳಿದ್ದಾರೆ.ನಗರದ ಖಾಸಗಿ ಹೊಟೆಲನಲ್ಲಿ ಶನಿವಾರ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ನಿಪ್ಪಾಣಿಯ ದೀಪಕ ಆಕಾರಾಮ ಮಥಾಳೆ ಮತ್ತು ನಂದಕುಮಾರ ಆಕಾರಾಮ ಮಥಾಳೆ ಅವರು ಸಂಗ್ರಹಿಸಿರುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನ ಇದಾಗಿದೆ. ಡಿ.೬ರಂದು ಸಂಜೆ ೬ಗಂಟೆಗೆ ಡಾ.ಅಂಬೇಡ್ಕರ ಅವರ ನುಡಿನಮನ ಕಾರ್ಯಕ್ರಮವೂ ಜರುಗಲಿದೆ. ಕಾರಣ ಜಿಲ್ಲೆಯ ಡಾ. ಬಾಬಾಸಾಹೇಬ ಅಂಬೇಡ್ಕರ ಅನುಯಾಯಿಗಳು, ಪ್ರಗತಿಪರ ಚಿಂತಕರು, ಬುದ್ಧನುಯಾಯಿಗಳು ಈ ಛಾಯಾಚಿತ್ರಗಳ ಪ್ರದರ್ಶನ ಮತ್ತು ನುಡಿನಮನ ಕಾರ್ಯಕ್ರಮಕ್ಕೆ ಅಧಿಕ ಸಂಖ್ಯೆಯಲ್ಲಿ ಆಗಮಿಸಬೇಕೆಂದು ರಾಜಶೇಖರ ಯಡಹಳ್ಳಿ ಕೋರಿದ್ದಾರೆ.ಬೌದ್ಧವಿಹಾರ ನಿರ್ಮಾಣ ಸಮಿತಿ ಉಪಾಧ್ಯಕ್ಷ ಶಶಿಕಾತ ಹೊನವಾಡಕರ, ಪ್ರಧಾನ ಕಾರ್ಯದರ್ಶಿ ನಾಗರಾಜ ಲಂಬು, ಹಿರಿಯ ಪತ್ರಕರ್ತ ಅನೀಲ…
ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಸುರಕ್ಷತಾ ಅಧಿಕಾರಿ ಶ್ರೀಮತಿ ಅನಸೂಯಾ ಹೆಗಡೆ ಅವರ ಬೀಳ್ಕೊಡುಗೆ ಸಮಾರಂಭ ಜರುಗಿತು.ಪ್ರಾಥಮಿಕ ಆಡಳಿತ ವೈದ್ಯಾಧಿಕಾರಿ ಡಾ. ಎಸ್ ಜಿ ಕಿಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆರೋಗ್ಯ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬಂದಂತಹ ಸುರಕ್ಷತಾ ಅಧಿಕಾರಿ ತಮ್ಮ ಒಳ್ಳೆಯ ಒಡನಾಟದಿಂದ ಆರೋಗ್ಯ ಕೇಂದ್ರಕ್ಕೆ ಬರುವಂತಹ ರೋಗಿಯ ಜೊತೆಗೆ ಹಾಗೆ ಸಿಬ್ಬಂದಿ ಜೊತೆಗೆ ಅಚ್ಚು ಮೆಚ್ಚಿನ ಸೇವೆ ಸಲ್ಲಿಸಿದ್ದರು. ಇಂತಹ ಅಧಿಕಾರಿಗಳು ಸಿಗುವುದು ಅಪರೂಪ ಎಂದು ಶ್ಲಾಘಿಸಿದರು.ವೇದಿಕೆ ಮೇಲೆ ವೈದ್ಯಾಧಿಕಾರಿಗಳಾದ ಡಾ. ಶ್ವೇತಾ ಇಂಗಳೇಶ್ವರ್,ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಜಕ್ಕನಗೌಡ, ಗ್ರಾಪಂ ಸದಸ್ಯ ಅರವಿಂದ ಮಾಲಗಾರ ಮಾತನಾಡಿದರು.ನಿರೂಪಣೆ ಸಿ ಎ ಜೋಶಿ ಮಾಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ತುಕಾರಾಮ ದಡಕೆ, ಉಪಾಧ್ಯಕ್ಷ, ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಇದ್ದರು.
ವಿಜಯಪುರ: ಭೂಣಲಿಂಗ ಹತ್ಯೆ ತಡೆಯುವಂತೆ ಆಗ್ರಹಿಸಿ ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಾರ್ಟಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಎರಡು-ಮೂರು ದಿನಗಳ ಹಿಂದೆ ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಣ್ಣು ಭ್ರೂಣಲಿಂಗ ಪತ್ತೆ ಮತ್ತು ಹತ್ಯೆ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ಬೆಂಗಳೂರು ಪೊಲೀಸ್ ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ಈ ಜಾಲ ದಕ್ಷಿಣ ಕರ್ನಾಟಕವಲ್ಲದೇ ಉತ್ತರ ಕರ್ನಾಟಕದಲ್ಲಿಯೂ ಸಕ್ರಿಯವಾಗಿದೆ ಎಂಬ ವದಂತಿ ಇದೆ. ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಖಾಸಗಿ ಆಸ್ಪತ್ರೆಗಳನ್ನು ನಡೆಸುತ್ತಿರುವ ರಾಜಕಾರಣಿಗಳು ಉದ್ಯಮಿಗಳು ಸರ್ಕಾರಿ ಅಧಿಕಾರಿಗಳ ಸಂಬಂಧಿಕರ ಆಸ್ಪತ್ರೆಗಳಲ್ಲಿ ಈ ರೀತಿಯ ಪ್ರಕರಣಗಳು ಯಥೇಚ್ಛವಾಗಿ ಇದ್ದರೂ ಸಹ ಜಿಲ್ಲಾ ಆರೋಗ್ಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯಾವುದೇ ರೀತಿಯ ಪ್ರಕರಣಗಳು ಬೆಳಕಿಗೆ ಬಂದಿರುವುದಿಲ್ಲ. ಹಾಗಾಗಿ ಜಿಲ್ಲೆಯಲ್ಲಿ ಒಂದು ತನಿಖಾ ತಂಡವನ್ನು ರಚಿಸಿ ಹೆಣ್ಣು ಬ್ರೂಣ ಹತ್ಯೆ ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ನಡೆಯದಂತೆ ಸೂಕ್ತ ಕ್ರಮವನ್ನು ವಹಿಸಬೇಕು. ಮೈಸೂರು ಮತ್ತು ಮಂಡ್ಯ ಜಿಲ್ಲೆಯಲ್ಲಿ ಬಂಧನಕ್ಕೆ…
ವಿಜಯಪುರ ಜಿಲ್ಲೆಯ ೩೦೮ ಪೌರಕಾರ್ಮಿಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ವಿಜಯಪುರ: ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಲ್ಲಿ ಕಾರ್ಯನಿರ್ವಹಿಸುತ್ತಿರುವ ೩೦೮ ಪೌರಕಾರ್ಮಿಕರಿಗೆ ಖಾಯಂ ನೇಮಕಾತಿ ಆದೇಶ ಪತ್ರವನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ವಿತರಣೆ ಮಾಡಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಜಿಲ್ಲೆಯ ಮಹಾನಗರ ಪಾಲಿಕೆ, ಪುರಸಭೆ, ಪಟ್ಟಣ ಪಂಚಾಯತಿ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಜಿಲ್ಲಾಧಿಕಾರಿಗಳಿಂದ ನೇಮಕಾತಿ ಆದೇಶ ಪಡೆದುಕೊಂಡರು.ಆದೇಶ ಪ್ರತಿ ಪಡೆದ ಪೌರಕಾರ್ಮಿಕರು ಅಪಾರ ಸಂತಸ ವ್ಯಕ್ತಪಡಿಸಿ, ನಮ್ಮ ಬಾಳಿಗೆ ಬೆಳಕು ಕಲ್ಪಿಸಿದ ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು, ನಗರ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯನ್ನು ಕಾಪಾಡುವ ಪೌರಕಾರ್ಮಿಕರು ಸ್ವಚ್ಛತಾ ಸೈನಿಕರಾಗಿ ಕಾರ್ಯನಿರ್ವಹಿಸುತ್ತಾರೆ. ಇವರ ಬದುಕಿಗೆ ಆಧಾರ ಕಲ್ಪಿಸಲು ಸರ್ಕಾರ ನೇಮಕಾತಿ ಆದೇಶ ನೀಡಿದ್ದು, ಪ್ರತಿ ಪೌರಕಾರ್ಮಿಕರಿಗೆ ಎರಡು ಜೊತೆ ಸಮವಸ್ತ್ರ, ಸುರಕ್ಷಾ ಸಾಧನಗಳನ್ನು ಒದಗಿಸಲಾಗುವುದು. ತಮ್ಮ ಆರೋಗ್ಯ ಕಾಪಾಡಿಕೊಂಡು ಸುರಕ್ಷಾ ಸಾಧನಗಳನ್ನು ಬಳಸಿ ಕಾರ್ಯನಿರ್ವಹಿಸಬೇಕು.…
ವಿಜಯಪುರ: ನಗರದ ಬಳಿಯ ಅರಕೇರಿ ಗ್ರಾಮದ ಹತ್ತಿರ ನಿರ್ಮಾಣವಾಗುತ್ತಿರುವ ನೂತನ ಕೇಂದ್ರ ಕಾರಾಗೃಹದ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.ನೂತನ ಕೇಂದ್ರ ಕಾರಾಗೃಹಕ್ಕೆ ಭೂತನಾಳ ಕೆರೆಯಿಂದ ನೀರಿನ ಸೌಲಭ್ಯವನ್ನು ಒದಗಿಸುವ ೬೫೦.೦೦ ಲಕ್ಷಗಳ ಅಂದಾಜು ವೆಚ್ಚದ ಪ್ರಸ್ತಾವನೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಅವರು, ನೂತನ ಕೇಂದ್ರ ಕಾರಾಗೃಹದ ಕಾಮಗಾರಿಗಳ ಎಲ್ಲ ವಿಭಾಗಗಳ ವೀಕ್ಷಣೆ ನಡೆಸಿ, ಕಾರಾಗೃಹದ ಹೊರವೃತ್ತದ ಸುತ್ತುವರಿಗೆ ತೆರಳಿ ಭದ್ರತಾ ಗೋಡೆಯನ್ನು ವೀಕ್ಷಿಸಿದರು.ಈ ಸಂದರ್ಭದಲ್ಲಿ ಕಾರಾಗೃಹ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಅಭಿಯಂತರರು ಉಪಸ್ಥಿತರಿದ್ದರು.
ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಅಭಿಮತ ವಿಜಯಪುರ: ಗ್ರಾಮ ನಗರ ಸ್ವಚ್ಛತೆಯನ್ನು ಹೆಚ್ಚಿಸುವಲ್ಲಿ ಪೌರಕಾರ್ಮಿಕರ ಪಾತ್ರ ಅನನ್ಯವಾಗಿದ್ದು, ಸಮಾಜದಲ್ಲಿ ಪೌರ ಕಾರ್ಮಿಕರಿಗೆ ಗೌರವ ನೀಡುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ವಿಜಯಕುಮಾರ ಆಜೂರ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ನಗರಭಿವೃದ್ಧಿ ಕೋಶ ಹಾಗೂ ಸಮಾಜ ಕಲ್ಯಾಣ ಇಲಾಖೆ ವಿಜಯಪುರ ವತಿಯಿಂದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಪೌರಕಾರ್ಮಿಕರಿಗೆ ಇ.ಎಸ್.ಐ, ಪಿಎಫ್ ವಿಮೆ, ಸ್ವಚ್ಛತೆ ಮತ್ತು ಆರೋಗ್ಯ ಕುರಿತು ಅರಿವು ಮೂಡಿಸುವ ಒಂದು ದಿನದ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪೌರಕಾರ್ಮಿಕರ ಗೌರವಕ್ಕೆ ಕುಂದು ಬಾರದಂತೆ ನಡೆದುಕೊಳ್ಳಬೇಕು. ಅವರು ನಿರ್ವಹಿಸುವ ಕಾರ್ಯ ಅನನ್ಯವಾಗಿದೆ. ಸ್ವಚ್ಛ ಸುಂದರ ನಗರವನ್ನಾಗಿಸುವಲ್ಲಿ ಅವರು ನಿರ್ವಹಿಸುವ ಕಾರ್ಯ ಮಹತ್ತರವಾಗಿದೆ. ಅದರಂತೆ, ಪೌರಕಾರ್ಮಿಕರು ಸಹ ತಮ್ಮ ವೈಯಕ್ತಿಕ ಆರೋಗ್ಯದ ಕುರಿತು ನಿಗಾವಹಿಸಿ, ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸಿ,ಅವರನ್ನು ವಿದ್ಯಾವಂತರನ್ನಾಗಿ ಮಾಡಿ, ಉನ್ನತ ಹುದ್ದೆಗೇರಲು ಪ್ರೇರೇಪಿಸಬೇಕು ಎಂದು ಹೇಳಿದರು.ಮಹಾನಗರ…
ಬಸವನಬಾಗೇವಾಡಿ: ಸಹಜ ನಗೆ ಆರೋಗ್ಯಕರವಾಗುವ ಜೊತೆಗೆ ಮನಸ್ಸಿನ ಒತ್ತಡ ಕಡಿಮೆ ಮಾಡುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸಹಜ ನಗೆಯನ್ನು ರೂಢಿ ಮಾಡಿಕೊಳ್ಳುವುದು ಉತ್ತಮ ಎಂದು ಕರ್ನಾಟಕ ರಾಜ್ಯೋತ್ಸವ ಪುರಸ್ಕ್ರತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪೂರ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ಕರ್ನಾಟಕ ರಾಜ್ಯ ನಗೆಯೋಗ ಕೂಟಗಳ ಒಕ್ಕೂಟ ಹಾಗೂ ಸ್ಥಳೀಯ ಬಸವೇಶ್ವರ ನಗೆಯೋಗ ಕೂಟದ ಸಹಯೋಗದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ೨೦ ನೇ ನಗೆ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಹೃದಯದಿಂದ ಬರುವುದೇ ನಿಜವಾದ ನಗೆ. ನಗೆಯಲ್ಲಿ ವ್ಯಂಗ್ಯ ನಗೆ, ಕುಹಕ ನಗೆ, ಅಪಹಾಸ್ಯ ನಗೆ ಉಂಟು. ಇವು ಇನ್ನೊಬ್ಬರಿಗೆ ನೋವು ಉಂಟು ಮಾಡುತ್ತವೆ. ಇಂತಹ ನಗೆ ಯಾರೂ ರೂಢಿಸಿಕೊಳ್ಳದೇ ಆರೋಗ್ಯಕರವಾದ ಸಹಜ ನಗೆ ರೂಢಿಸಿಕೊಂಡರೆ ಆರೋಗ್ಯದಿಂದ ಇರಲು ಸಾಧ್ಯ. ರಾಜರ ಕಾಲದಲ್ಲಿ ಕಲಾವಿದರೊಂದಿಗೆ ಹಾಸ್ಯ ಕಲಾವಿದರಿಗೂ ರಾಜಾಶ್ರಯ ನೀಡುತ್ತಿದ್ದರು ಎಂದ ಅವರು, ನಗೆಯಲ್ಲಿ ಹೊಗೆ ಇರಬಾರದು. ಇದು ಪ್ರತಿಯೊಬ್ಬರಲ್ಲಿ ಹಗೆ ಉಂಟು ಮಾಡುತ್ತದೆ. ಉತ್ತಮ ಆರೋಗ್ಯ…
ಬಸವನಬಾಗೇವಾಡಿ: ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.ಜಯಂತಿಯಂಗವಾಗಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದ ಅವರು, ಕನಕದಾಸರು ಇಡೀ ಮಾನವಕುಲಕ್ಕೆ ಸಾಮರಸ್ಯದ ಬೋಧನೆ ಮಾಡಿದ್ದಾರೆ. ಇವರ ಸಂದೇಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದರು.ಪೂಜಾ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ ಕೆ., ನ್ಯಾಕ ಸಂಯೋಜಕ ಪ್ರೊ.ಸಿ.ಪಿ.ಧಡೇಕರ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ವಿದ್ಯಾರ್ಥಿ ಒಕ್ಕೂಟದ ಮುಖ್ಯಸ್ಥ ಪ್ರೊ.ಡಿ.ಎಸ್.ಲಗಳಿ, ಐಕ್ಯೂಎಸಿ ಸಂಯೋಜಕ ಪ್ರೊ.ದಿಲೀಪಕುಮಾರ, ಡಾ.ಎಸ್.ಬಿ.ಜನಗೊಂಡ, ಎಂ.ಕೆ.ಯಾಧವ, ಪಿ.ಎಸ್.ಹೊರಕೇರಿ, ಎಂ.ಆರ್.ಮಮದಾಪೂರ, ಎಸ್.ಡಿ.ಹಣಮರೆಡ್ಡಿ, ಜೆ.ಎಸ್.ಡಾವಣಗೇರಿ ಎಸ್.ಜೆ.ಸೂರ್ಯವಂಶಿ ಇತರರು ಭಾಗವಹಿಸಿದ್ದರು.
ಬಸವನಬಾಗೇವಾಡಿ: ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಬಿಎ ವಿಭಾಗದ ವಿದ್ಯಾರ್ಥಿ ವಿಜಯ ಮಾಳಗೊಂಡ ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಕಳೆದ ಸೆಪ್ಟಂಬರ್-ಅಕ್ಟೋಬರ್-೨೦೨೩ ನಡೆಸಿದ ವಿಶ್ವವಿದ್ಯಾಲಯದ ೬ ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಸಂಖ್ಯಾಶಾಸ್ತ್ರ ಪತ್ರಿಕೆ ೧ ಮತ್ತು ೨ ರಲ್ಲಿ ೧೦೦ ಕ್ಕೆ ೧೦೦ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. ಸಾಧನೆಗೈದ ವಿದ್ಯಾರ್ಥಿಗೆ ಸಂಸ್ಥೆಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೋಟ್ನಾಳ, ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಸಂಖ್ಯಾಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪಿ.ಎಸ್.ಹೊರಕೇರಿ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಮಹಾವಿದ್ಯಾಲಯ ಪ್ರಕಟಣೆ ತಿಳಿಸಿದೆ.
