ಬಸವನಬಾಗೇವಾಡಿ: ಪಟ್ಟಣದ ಬಿ ಎಲ್ ಡಿ ಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಗುರುವಾರ ಆಚರಿಸಲಾಯಿತು.
ಜಯಂತಿಯಂಗವಾಗಿ ಭಕ್ತ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ನಂತರ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿದ ಅವರು, ಕನಕದಾಸರು ಇಡೀ ಮಾನವಕುಲಕ್ಕೆ ಸಾಮರಸ್ಯದ ಬೋಧನೆ ಮಾಡಿದ್ದಾರೆ. ಇವರ ಸಂದೇಶಗಳು ಸರ್ವಕಾಲಿಕ ಪ್ರಸ್ತುತವಾಗಿವೆ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ರವೀಂದ್ರಗೌಡ ಕೆ., ನ್ಯಾಕ ಸಂಯೋಜಕ ಪ್ರೊ.ಸಿ.ಪಿ.ಧಡೇಕರ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ವೈ.ಬಿ.ನಾಯಕ, ವಿದ್ಯಾರ್ಥಿ ಒಕ್ಕೂಟದ ಮುಖ್ಯಸ್ಥ ಪ್ರೊ.ಡಿ.ಎಸ್.ಲಗಳಿ, ಐಕ್ಯೂಎಸಿ ಸಂಯೋಜಕ ಪ್ರೊ.ದಿಲೀಪಕುಮಾರ, ಡಾ.ಎಸ್.ಬಿ.ಜನಗೊಂಡ, ಎಂ.ಕೆ.ಯಾಧವ, ಪಿ.ಎಸ್.ಹೊರಕೇರಿ, ಎಂ.ಆರ್.ಮಮದಾಪೂರ, ಎಸ್.ಡಿ.ಹಣಮರೆಡ್ಡಿ, ಜೆ.ಎಸ್.ಡಾವಣಗೇರಿ ಎಸ್.ಜೆ.ಸೂರ್ಯವಂಶಿ ಇತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

