ತಿಕೋಟಾ: ತಾಲ್ಲೂಕಿನ ಹೊನವಾಡ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಿರಿಯ ಸುರಕ್ಷತಾ ಅಧಿಕಾರಿ ಶ್ರೀಮತಿ ಅನಸೂಯಾ ಹೆಗಡೆ ಅವರ ಬೀಳ್ಕೊಡುಗೆ ಸಮಾರಂಭ ಜರುಗಿತು.
ಪ್ರಾಥಮಿಕ ಆಡಳಿತ ವೈದ್ಯಾಧಿಕಾರಿ ಡಾ. ಎಸ್ ಜಿ ಕಿಣಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಆರೋಗ್ಯ ಇಲಾಖೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸಿಕೊಂಡು ಬಂದಂತಹ ಸುರಕ್ಷತಾ ಅಧಿಕಾರಿ ತಮ್ಮ ಒಳ್ಳೆಯ ಒಡನಾಟದಿಂದ ಆರೋಗ್ಯ ಕೇಂದ್ರಕ್ಕೆ ಬರುವಂತಹ ರೋಗಿಯ ಜೊತೆಗೆ ಹಾಗೆ ಸಿಬ್ಬಂದಿ ಜೊತೆಗೆ ಅಚ್ಚು ಮೆಚ್ಚಿನ ಸೇವೆ ಸಲ್ಲಿಸಿದ್ದರು. ಇಂತಹ ಅಧಿಕಾರಿಗಳು ಸಿಗುವುದು ಅಪರೂಪ ಎಂದು ಶ್ಲಾಘಿಸಿದರು.
ವೇದಿಕೆ ಮೇಲೆ ವೈದ್ಯಾಧಿಕಾರಿಗಳಾದ ಡಾ. ಶ್ವೇತಾ ಇಂಗಳೇಶ್ವರ್,
ಪ್ರಾಥಮಿಕ ಆರೋಗ್ಯ ನಿರೀಕ್ಷಣಾಧಿಕಾರಿ ಜಕ್ಕನಗೌಡ, ಗ್ರಾಪಂ ಸದಸ್ಯ ಅರವಿಂದ ಮಾಲಗಾರ ಮಾತನಾಡಿದರು.
ನಿರೂಪಣೆ ಸಿ ಎ ಜೋಶಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ತುಕಾರಾಮ ದಡಕೆ, ಉಪಾಧ್ಯಕ್ಷ, ಸದಸ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲ ಅಧಿಕಾರಿಗಳು, ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

