Author: editor.udayarashmi@gmail.com

ಬುಧವಾರ 20 ಪ್ರಕರಣಗಳು ಪತ್ತೆ | ಇಬ್ಬರು ಸಾವು | ಸಕ್ರೀಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆ | ಪಾಸಿಟಿವಿಟಿ ಪ್ರಮಾಣ ಶೇ.2.49 ಬೆಂಗಳೂರು: ಕಳೆದ ಎರಡು ವರ್ಷಗಳಿಂದ ದೂರವಾಗಿದ್ದ ಮಹಾಮಾರಿ ಕೊರೋನಾ ಇದೀಗ ಮತ್ತೆ ತನ್ನ ಆರ್ಭಟ ಶುರು ಮಾಡಿಕೊಂಡಿದೆ.ಬುಧವಾರ ರಾಜ್ಯದಲ್ಲಿ 20 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.ಈ ಮಧ್ಯೆ ರಾಜ್ಯದಲ್ಲಿ ಬುಧವಾರ ಒಂದೇ ದಿನ 22 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಕೊರೋನಾ ಸಕ್ರೀಯ ಪ್ರಕರಣಗಳ ಸಂಖ್ಯೆ 92ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 19, ಬಳ್ಳಾರಿಯಲ್ಲಿ 2, ದಕ್ಷಿಣ ಕನ್ನಡದಲ್ಲಿ 1 ಪ್ರಕರಣ ಪತ್ತೆಯಾಗಿದೆ.ಕಳೆದ 24 ಗಂಟೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 808 ಪರೀಕ್ಷೆಗಳನ್ನು ಮಾಡಲಾಗಿದ್ದು, ಇವುಗಳಲ್ಲಿ 407 ಆರ್‌ಟಿ-ಪಿಸಿಆರ್ ಮತ್ತು 401 ರಾಪಿಡ್ ಆಂಟಿಜೆನ್ ಪರೀಕ್ಷೆಗಳಾಗಿವೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣವು 2.49 ಪ್ರತಿಶತದಷ್ಟಿದ್ದರೆ, ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 10 ರಷ್ಟಿದೆ ಎಂದು ಅದು ಹೇಳಿದೆ.ಈ ಪೈಕಿ 72 ಮಂದಿಗೆ ಹೋಮ್‌ ಐಸೋಲೇಷನ್‌ನಲ್ಲಿ…

Read More

ಚಿಮ್ಮಡ: ಅರಣ್ಯ ಇಲಾಖೆಯಿಂದ ಬೆಳಗಾವಿ ಜಿಲ್ಲೆಯ ಘಟಪ್ರಭಾ ಪಕ್ಷಿಧಾಮದಲ್ಲಿ ಉತ್ತಮ ಕಾರ್ಯನಿರ್ವಹಿಸಿದಕ್ಕಾಗಿ ಗ್ರಾಮದ ವಾಸುದೇವ ಇಗವೆಯವರಿಗೆ ಮಾನವರತ್ನ ರಾಜ್ಯ ಪ್ರಶಸ್ತಿ ನೀಡಲಾಗಿದೆ.ಮೈಸೂರಿನ ಮಾನವ ಹಕ್ಕುಗಳ ಸೇವಾ ಸಮೀತಿ ತನ್ನ ಏಳನೇಯ ವಾರ್ಷಿಕೋತ್ಸವದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಬ್ರಹತ್ ಕಾರ್ಯಕ್ರಮದಲ್ಲಿ ಘಟಪ್ರಭಾ ಪಕ್ಷಿಧಾಮದಲ್ಲಿ ಕಳೆದ ಹಲವು ವರ್ಷಗಳ ಉತ್ತಮ ಸೇವೆಯನ್ನು ಪರಿಗಣಿಸಿ ಸೇವಾಕ್ಷೇತ್ರದ “ಮಾನವರತ್ನ” ಪ್ರಶಸ್ತಿ ನೀಡಿ ಗೌರವಿಸಿದೆ.

Read More

ಚಿಮ್ಮಡ: ಶಫರ್ಡ ಇಂಡಿಯಾ ಇಂಟರನ್ಯಾಶನಲ್ ಸಂಘಟಣೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಇಲ್ಲಿನ ಗ್ರಾಪಂ ಸದಸ್ಯ ಮಹಾಲಿಂಗ ಮಾಯಣ್ಣವರರನ್ನು ನೇಮಕಗೊಳಿಸಲಾಗಿದೆ.ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥರವರು ರಾಷ್ಟ್ರೀಯ ಅಧ್ಯಕ್ಷರಾಗಿರುವ ಈ ಸಂಘಟನೆಯಿಂದ ಇತ್ತೀಚೆಗೆ ಲೋಕಾಪುರದಲ್ಲಿ ನಡೆದ ಬ್ರಹತ್ ಸಮಾವೇಶದಲ್ಲಿ ಎಚ್ ವಿಶ್ವಣಾಥರವರು ಕಾಶೀನಾಥ ಹುಡೇದರನ್ನು ಜಿಲ್ಲಾಧ್ಯಕ್ಷರನ್ನಾಗಿ, ಮಹಾಲಿಂಗ ಮಾಯಣ್ಣವರರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೆಮಕಗೊಳಿಸಿದ್ದಾರೆ.

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತಿ ವ್ಶಾಪ್ತಿಯ ಬಸವ ವಸತಿ ಯೋಜನೆಯಡಿ ಆಶ್ರಯ ಮನೆಗಳ ಫಲಾನುಭವಿಗಳ ಆಯ್ಕೆ ವಿಶೇಷ ಗ್ರಾಮ ಸಭೆ ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ ಅವರ ಅಧ್ಶಕ್ಷತೆಯಲ್ಲಿ ಶ್ರೀ ಕಲ್ಶಾಣದ್ದೇಶ್ವರ ಮಠದ ಆವರಣದಲ್ಲಿ ಬುಧವಾರ ನಡೆಯಿತು.ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ ಮಾತನಾಡಿ, ಗ್ರಾಪಂ ವ್ಶಾಪ್ತಿಯ ಹೊನ್ನಳ್ಳಿ, ಬ್ರಹ್ಮದೇವನಮಡು, ಖಾನಾಪೂರ, ಕರವಿನಾಳ ಗ್ರಾಮಗಳಲ್ಲಿ ಬಸವ ವಸತಿ ಯೋಜನೆಯಡಿ ೭೬ ಮನೆಗಳ ಹಂಚಿಕೆ ಪ್ರಕ್ರಿಯೆ ಪಾರದಶ೯ಕವಾಗಿ ಅಹ೯ ಫಲಾನುಭವಿಗಳ ಆಯ್ಕೆ ಮಾಡಲಾಗಿದೆ ಎಂದರು.ಈ ಸಂದಭ೯ದಲ್ಲಿ ತಾಲೂಕು ಅರಣ್ಶಾಧಿಕಾರಿ, ಗ್ರಾಪಂ ನೋಡಲ್ ಅಧಿಕಾರಿ ಎಂ.ವೈ.ಮಲ್ಕಣ್ಣನವರ, ಗ್ರಾಪಂ ಉಪಾಧ್ಶಕ್ಷೆ ಮುನ್ನಿ ಸಾಹೇಪಟೇಲ ಮುರಡಿ, ಕಾಯ೯ದಶಿ೯ ಚಾಂದಾಬಾಷಾ ಕೊರಬು, ತಿಪ್ಪಯ್ಶ ನೆಲ್ಲಗಿಮಠ, ಸೋಮನಗೌಡ ಚಿರಲದಿನ್ನಿ, ದೇವಿಂದ್ರ ತೊನಶ್ಶಾಳ, ಕಲ್ಲಪ್ಪಗೌಡ ಪಾಟೀಲ, ಮರೇಪ್ಪ ಚಲುವಾದಿ, ಕಂಪ್ಶೂಟರ್ ಆಪರೇಟರ್ ಅಂಬ್ರಿಶ ಪಾಟೀಲ, ಹಣಮಂತ್ರಾಯಗೌಡ ಬಿರಾದಾರ, ಸಂಗನಗೌಡ ಪಾಟೀಲ, ಬಸನಗೌಡ ಉಳ್ಳೆಸೂರ, ಚಂದ್ರು ಕೆಂಭಾವಿ, ಹಣಮಂತ ಯಂಟಮಾನ, ಬಂದೇನಮಾಜ ಸೀತನೂರ, ಡಿ.ಕೆ.ಸೀತನೂರ, ಮಶ್ಶಾಕ ನಾಯ್ಕೋಡಿ, ನಜೀರಸಾಬ ನಾಯ್ಕೋಡಿ, ಆನಂದ ದೊಡ್ಡಮನಿ…

Read More

ಅಮೋಘಸಿದ್ದೇಶ್ವರ ಪುರಾಣ ಮಂಗಲ | ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ ಅಭಿಮತ ಬ್ರಹ್ಮದೇವನಮಡು: ಸಮಾಜದಲ್ಲಿ ಪ್ರತಿಯೊಬ್ಬರೂ ಧಾಮಿ೯ಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕ ನೆಮ್ಮದಿ ಕಂಡುಕೊಳ್ಳಬಹುದು ಎಂದು ಗೋಲಗೇರಿಯ ಕಾಂಗ್ರೆಸ್ ಮುಖಂಡ ರವಿರಾಜ ದೇವರಮನಿ ಹೇಳಿದರು.ಸಿಂದಗಿ ತಾಲೂಕಿನ ಸುಕ್ಷೇತ್ರ ಯಂಕಂಚಿ ಕುಂಟೋಜಿ ಹಿರೇಮಠದಲ್ಲಿ ೪೬ನೇ ವಷ೯ದ ಲಿಂ.ಶ್ರೀ ರುದ್ದಮುನಿ ಶಿವಾಚಾಯ೯ರ ಪುಣ್ಶಾರಾಧನೆ ಅಂಗವಾಗಿ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ಅಮೋಘಸಿದ್ದೇಶ್ವರ ಪುರಾಮ ಮಹಾಮಂಗಲ ಕಾಯ೯ಕ್ರಮದಲ್ಲಿ ಮಾತನಾಡಿದರು.ವಿವಿಧ ಜಾತಿ, ಧಮ೯, ಮತ, ಜನಾಂಗದ ಮಧ್ಶೆ ಭಾವೈಕ್ಶ ಹಾಗೂ ಸೌಹಾದ೯ ಮೂಡಿಸಲು ಪುರಾಣ-ಪ್ರವಚನ ಕಾಯ೯ಕ್ರಮಗಳು ಅವಶ್ಶ. ಕೃಷಿ ಪ್ರಧಾನವಾದ ನಾಡಿನಲ್ಲಿ ಸಂಪ್ರದಾಯ, ಧಮಾ೯ಚರಣೆಗಳು, ಪುರಾಣ ಪ್ರವಚನ ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಧಾಮಿ೯ಕ ಸಂಸ್ಕಾರ, ನೈತಿಕ ಮೌಲ್ಯಗಳು ಮನವರಿಕೆ ಮಾಡುವುದು ಅವಶ್ಶವಾಗಿದೆ ಎಂದರು.ಕಡಕೋಳ ಮಡಿವಾಳೇಶ್ವರ ಮಹಾ ಮಠದ ಡಾ.ರುದ್ರಮುನಿ ಶಿವಾಚಾಯ೯ರು, ಆಲಮೇಲ ಹಿರೇಮಠದ ಚಂದ್ರಶೇಖರ ಶಿವಾಚಾಯ೯ರು ಆಶೀವ೯ಚನ ನೀಡಿ, ಮಠ ಮಂದಿರಗಳಲ್ಲಿ ಇಂತಹ ಆಧ್ಶಾತ್ಮಿಕ ಚಿಂತನೆ, ಮಹಾಪುರುಷರ ಜೀವನ ಚರಿತ್ರೆಯ ಪುರಾಣ ಪ್ರವಚನದಿಂದ ಆಧ್ಶಾತ್ಮಿಕ ಚಿಂತನೆ…

Read More

ಮುದ್ದೇಬಿಹಾಳ: ಡಿ.೨೧ ರಂದು ನಿಡಗುಂದಿ ೧೧೦/೩೩/೧೧ಕೆವಿ ಉಪಕೇಂದ್ರದ ಮೂರನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ನಿರ್ವಹಿಸುತ್ತಿರುವದರಿಂದ ಈ ಉಪಕೇಂದ್ರಗಳ ಮೇಲೆ ಬರುವ ಹುಲ್ಲೂರ, ಹುಲ್ಲೂರ ಎನ್.ಜೆ.ವಾಯ್, ಕಾಶಿನಕುಂಟಿ, ಮುದೂರ, ಹಾಗೂ ಜಟ್ಟಗಿ, ಈ ಎಲ್ಲ ೧೧ಕೆವಿ ಐಪಿಗಳ ಮೇಲೆ ಬರುವ ಸ್ಥಾವರಗಳಿಗೆ ಹಾಗೂ ನೀರಾವರಿ ಪಂಪಸೆಟ್ಟುಗಳಿಗೆ ಬೆಳಿಗ್ಗೆ ೧೦ರಿಂದ ಸಂಜೆ ೬ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

Read More

ಮುದ್ದೇಬಿಹಾಳ: ತಾಲೂಕಿನ ವ್ಯಾಪ್ತಿಯಲ್ಲಿನ ೪ ಖಾಸಗಿ ಆಸ್ಪತ್ರೆಗಳಿಗೆ ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ ನೇತೃತ್ವದ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ಕೆಲ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು.ಖಾಸಗಿ ಆಸ್ಪತ್ರೆಗಳಲ್ಲಿ ತಾವು ಹೊಂದಿರುವ ವೈದ್ಯಕೀಯ ಪದವಿಗೆ ವಿರುದ್ಧವಾಗಿ ಬೇರೆ ವೈದ್ಯಕೀಯ ಪದ್ಧತಿಯಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿರುವ, ಬ್ಯಾನ್ ಮಾಡಲಾದ ಔಷಧಿಗಳನ್ನು ಉಪಯೋಗಿಸುತ್ತಿರುವ, ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳದವರಿಗೆ, ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜಮೆಂಟ್ ನಿರ್ವಹಿಸಿಲ್ಲದ ಬಗ್ಗೆ, ಆಸ್ಪತ್ರೆಯನ್ನು ಕೆಎಂವಿ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡಿರದ, ಚಾರ್ಜ್ ಲೀಸ್ಟ್ ಹಾಕಿರದ, ವಿದ್ಯಾರ್ಹತೆ ದಾಖಲೆ ಪತ್ರಗಳನ್ನು ಮತ್ತು ಕೆಪಿಎಂಇ ಸರ್ಟಿಫಿಕೇಟ್ ಪ್ರದರ್ಶನ ಮಾಡಿಲ್ಲದಿರುವ ಹೀಗೆ ಇವುಗಳಲ್ಲಿನ ಯಾವುದಾದರೊಂದು ಅಥವಾ ಎಲ್ಲ ಅಂಶಗಳ ನ್ಯೂನ್ಯತೆಗಳು ಕಂಡು ಬಂದವರಿಗೆ ನೊಟೀಸ್ ಜಾರಿ ಮಾಡಿದ್ದಾರೆ.ಈ ಬಗ್ಗೆ ಮಾಹಿತಿ ನೀಡಿದ ಅವರು ಮೇಲಾಧಿಕಾರಿಗಳ ಆದೇಶದಂತೆ ವೈದ್ಯರ ನೊಂದಣಿ, ಮೂಲ ಸೌಕರ್ಯ, ಸ್ವಚ್ಛತೆಯ ಬಗ್ಗೆ ಪರಿಶೀಲಿಸಿದ್ದೇವೆ. ಬಯೋಮೆಕಲ್ ತ್ಯಾಜ್ಯವನ್ನು ಎಲ್ಲಂದರಲ್ಲಿ ಎಸೆಯದಂತೆ ತಾಕೀತು ಮಾಡಲಾಗಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ವಿದ್ಯಾರ್ಹತೆ…

Read More

ವಿಜಯಪುರ: ವಿಜಯಪುರ ಜಿಲ್ಲೆಯ ೧೧೦ಕೆ.ವಿ ನಿಡಗುಂದಿ ಹಾಗೂ ಮುಖರ್ತಿಹಾಳ ಉಪ ಕೇಂದ್ರಗಳ ತ್ರೈಮಾಸಿಕ ದುರಸ್ತಿ ಕಾಮಗಾರಿ ಕೈಗೆತ್ತಿಕೊಲ್ಳಲಾಗಿದೆ. ಈ ವಿದ್ಯುತ್ ಉಪ-ಕೇಂದ್ರಗಳಿಂದ ವಿದ್ಯುತ್ ಸರಬರಾಜು ಹೊಂದುವ ೩೩ಕೆ.ವಿ ಮಾರ್ಗಗಳು ಹಾಗೂ ೧೧ಕೆ.ವಿ ನಿರಂತರ ಜ್ಯೋತಿ ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು, ನಿಡಗುಂದಿ ಪಟ್ಟಣ, ಆಲಮಟ್ಟಿ ಹಾಗೂ ಬ.ಬಾಗೇವಾಡಿ, ಇಂಗಳೇಶ್ವರ, ಹಂಗರಗಿ, ಹೂವಿನ ಹಿಪ್ಪರಗಿ ಬಹುಹಳ್ಳಿ ಕುಡಿಯುವ ನೀರಿನ ಘಟಕಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಡಿ ೨೧ರಂದು ಬೆಳಿಗ್ಗೆ ೧೦ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನ ಬಾಗೇವಾಡಿಯ ಹೆಸ್ಕಾಂನ ಕಾರ್ಯನಿವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.

Read More

ವಿಜಯಪುರ: ಜಿಲ್ಲೆಯು ಐತಿಹಾಸಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿದ್ದು, ಇದೊಂದು ಪ್ರವಾಸಿ ತಾಣವಾಗಿದೆ. ದೇಶ-ವಿದೇಶದ ಪ್ರವಾಸಿಗರು ಆಗಮಿಸುತ್ತಿದ್ದು, ನಗರದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಲೋಕಾಯುಕ್ತ ಅಧಿಕ್ಷಕ ಹನಮಂತರಾಯ ಅವರು ಹೇಳಿದರು.ಬುಧವಾರ ನಗರದ ಸೆಟ್‌ಲೈಟ್ ಬಸ್ ನಿಲ್ದಾಣ, ಶಿವಾಜಿ ವೃತ್ತ, ಕೇಂದ್ರ ಬಸ್ ನಿಲ್ದಾಣ, ಕೋರ್ಟ್, ಗಗನ ಮಹಲ್ ಹಾಗೂ ಎ.ಪಿ.ಎಮ್.ಸಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ವೀಕ್ಷಿಸಿದರು.ಸೆಟ್‌ಲೈಟ್ ಬಸ್ ನಿಲ್ದಾಣ ಹಾಗೂ ಕೇಂದ್ರ ಬಸ್ ನಿಲ್ದಾಣಗಳಲ್ಲಿ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಗೋಡೆ ಆವರಣ ಸುತ್ತಲೂ ವಿವಿಧ ಗಿಡ ಮರಗಳ ಬೆಳೆಸಬೇಕು. ಹಸಿರು ಹುಲ್ಲು ಬೆಳೆಸುವ ಮೂಲಕ ಬಸ್ ನಿಲ್ದಾಣವನ್ನು ಸುಂದರವಾಗಿಸುವುದರೊಂದಿಗೆ ಸ್ವಚ್ಚತೆ, ಕಸ-ತ್ಯಾಜ್ಯವನ್ನು ದಿನದಲ್ಲಿ ಎರಡು ಸರತಿಗಳಲ್ಲಿ ವಿಲೇವಾರಿಗೆ ಕ್ರಮ ವಹಿಸಬೇಕು. ನಿಲ್ದಾಣದ ಆವರಣದಲ್ಲಿರುವ ಐತಿಹಾಸಿಕ ಬಾವಿಯನ್ನು ಸ್ವಚ್ಚಗೊಳಿಸಿ, ನೀರನ್ನು ಬಳಸಿಕೊಳ್ಳುವಂತೆ, ಬಸ್ ನಿಲ್ದಾಣದ ಸ್ಥಳಗಳಲ್ಲಿ ಸಿ.ಸಿ. ಟಿವಿ ಅಳವಡಿಸಬೇಕು ಎಂದು ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳಿಗೆ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು.ಜಿಲ್ಲೆಯ ಬೇರೆ-ಬೇರೆ ಗ್ರಾಮಗಳಿಂದ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ನಗರಕ್ಕೆ ಆಗಮಿಸುತ್ತಾರೆ. ಶಾಲಾ–ಕಾಲೇಜಿನ ನಿಗದಿತ ಸಮಯಕ್ಕನುಗುಣವಾಗಿ ವಿದ್ಯಾರ್ಥಿಗಳು…

Read More

ಕೃಷಿ-ತೋಟಗಾರಿಕೆ ಉತ್ಪನ್ನಗಳ ಖರೀದಿದಾರ-ಮಾರಾಟಗಾರರ ಸಮಾವೇಶಕ್ಕೆ ಚಾಲನೆ ವಿಜಯಪುರ: ನಮ್ಮ ಜಿಲ್ಲೆಯು ಪ್ರಮುಖವಾಗಿ ಕೃಷಿ ಆಧಾರಿತವಾಗಿದೆ. ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ತಮ್ಮ ಆದಾಯ ದ್ವಿಗುಣಗೊಳಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ ಅವರು ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿಗೆ ಸಂಬಂಧಿಸಿದ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ರೈತರು ರಾಸಾಯನಿಕ ಗೊಬ್ಬರ ಬಳಸದೇ, ಸಾವಯವ ರಸಗೊಬ್ಬರವನ್ನು ಉಪಯೋಗಿಸಿ ಹೆಚ್ಚಿನ ಇಳುವರಿ ಪಡೆಯಬೇಕು. ರೈತರು ಕೃಷಿಯಲ್ಲಿ ವೈಜ್ಞಾನಿಕ ಹಾಗೂ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕೃಷಿಯೊಂದಿಗೆ ಉಪ ಕಸುಬನ್ನು ಅಳವಡಿಸಿಕೊಳ್ಳಬೇಕು. ತೋಟಗಾರಿಕೆ ಬೆಳೆಗಳೊಂದಿಗೆ ಮಿಶ್ರ ಬೇಸಾಯಕ್ಕೆ ಒತ್ತು ನೀಡಬೇಕು. ಈ ನಿಟ್ಟಿನಲ್ಲಿ ರೈತರಿಗೂ ಅನೂಕೂಲವಾಗುವ ನಿಟ್ಟಿನಲ್ಲಿ ಇಂದು ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ಖರೀದಿದಾರ ಹಾಗೂ ಮಾರಾಟಗಾರರ ಸಮಾವೇಶವನ್ನು ಏರ್ಪಡಿಸಲಾಗಿದೆ. ಇದರಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕೃಷಿಗೆ ಸಂಬಂಧಿಸಿದ ಇಂತಹ ಕಾರ್ಯಕ್ರಮವನ್ನು…

Read More