ವಿಜಯಪುರ: ವಿಜಯಪುರ ಜಿಲ್ಲೆಯ ೧೧೦ಕೆ.ವಿ ನಿಡಗುಂದಿ ಹಾಗೂ ಮುಖರ್ತಿಹಾಳ ಉಪ ಕೇಂದ್ರಗಳ ತ್ರೈಮಾಸಿಕ ದುರಸ್ತಿ ಕಾಮಗಾರಿ ಕೈಗೆತ್ತಿಕೊಲ್ಳಲಾಗಿದೆ. ಈ ವಿದ್ಯುತ್ ಉಪ-ಕೇಂದ್ರಗಳಿಂದ ವಿದ್ಯುತ್ ಸರಬರಾಜು ಹೊಂದುವ ೩೩ಕೆ.ವಿ ಮಾರ್ಗಗಳು ಹಾಗೂ ೧೧ಕೆ.ವಿ ನಿರಂತರ ಜ್ಯೋತಿ ಮಾರ್ಗಗಳು, ಕೃಷಿ ನೀರಾವರಿ ಮಾರ್ಗಗಳು, ನಿಡಗುಂದಿ ಪಟ್ಟಣ, ಆಲಮಟ್ಟಿ ಹಾಗೂ ಬ.ಬಾಗೇವಾಡಿ, ಇಂಗಳೇಶ್ವರ, ಹಂಗರಗಿ, ಹೂವಿನ ಹಿಪ್ಪರಗಿ ಬಹುಹಳ್ಳಿ ಕುಡಿಯುವ ನೀರಿನ ಘಟಕಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಡಿ ೨೧ರಂದು ಬೆಳಿಗ್ಗೆ ೧೦ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಬಸವನ ಬಾಗೇವಾಡಿಯ ಹೆಸ್ಕಾಂನ ಕಾರ್ಯನಿವಾಹಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
