ಮುದ್ದೇಬಿಹಾಳ: ತಾಲೂಕಿನ ವ್ಯಾಪ್ತಿಯಲ್ಲಿನ ೪ ಖಾಸಗಿ ಆಸ್ಪತ್ರೆಗಳಿಗೆ ತಾಲೂಕು ಆರೋಗ್ಯಾಧಿಕಾರಿ ಸತೀಶ ತಿವಾರಿ ನೇತೃತ್ವದ ಆರೋಗ್ಯ ಇಲಾಖೆಯ ತಂಡ ಭೇಟಿ ನೀಡಿ ಕೆಲ ಅಗತ್ಯ ದಾಖಲೆಗಳನ್ನು ಪರಿಶೀಲಿಸಿದರು.
ಖಾಸಗಿ ಆಸ್ಪತ್ರೆಗಳಲ್ಲಿ ತಾವು ಹೊಂದಿರುವ ವೈದ್ಯಕೀಯ ಪದವಿಗೆ ವಿರುದ್ಧವಾಗಿ ಬೇರೆ ವೈದ್ಯಕೀಯ ಪದ್ಧತಿಯಲ್ಲಿ ಪ್ರ್ಯಾಕ್ಟೀಸ್ ಮಾಡುತ್ತಿರುವ, ಬ್ಯಾನ್ ಮಾಡಲಾದ ಔಷಧಿಗಳನ್ನು ಉಪಯೋಗಿಸುತ್ತಿರುವ, ಆಸ್ಪತ್ರೆಯ ಒಳಗೆ ಮತ್ತು ಹೊರಗೆ ಸುತ್ತಮುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳದವರಿಗೆ, ಬಯೋ ಮೆಡಿಕಲ್ ವೇಸ್ಟ್ ಮ್ಯಾನೇಜಮೆಂಟ್ ನಿರ್ವಹಿಸಿಲ್ಲದ ಬಗ್ಗೆ, ಆಸ್ಪತ್ರೆಯನ್ನು ಕೆಎಂವಿ ಕಾಯ್ದೆಯಡಿ ನೊಂದಣಿ ಮಾಡಿಸಿಕೊಂಡಿರದ, ಚಾರ್ಜ್ ಲೀಸ್ಟ್ ಹಾಕಿರದ, ವಿದ್ಯಾರ್ಹತೆ ದಾಖಲೆ ಪತ್ರಗಳನ್ನು ಮತ್ತು ಕೆಪಿಎಂಇ ಸರ್ಟಿಫಿಕೇಟ್ ಪ್ರದರ್ಶನ ಮಾಡಿಲ್ಲದಿರುವ ಹೀಗೆ ಇವುಗಳಲ್ಲಿನ ಯಾವುದಾದರೊಂದು ಅಥವಾ ಎಲ್ಲ ಅಂಶಗಳ ನ್ಯೂನ್ಯತೆಗಳು ಕಂಡು ಬಂದವರಿಗೆ ನೊಟೀಸ್ ಜಾರಿ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು ಮೇಲಾಧಿಕಾರಿಗಳ ಆದೇಶದಂತೆ ವೈದ್ಯರ ನೊಂದಣಿ, ಮೂಲ ಸೌಕರ್ಯ, ಸ್ವಚ್ಛತೆಯ ಬಗ್ಗೆ ಪರಿಶೀಲಿಸಿದ್ದೇವೆ. ಬಯೋಮೆಕಲ್ ತ್ಯಾಜ್ಯವನ್ನು ಎಲ್ಲಂದರಲ್ಲಿ ಎಸೆಯದಂತೆ ತಾಕೀತು ಮಾಡಲಾಗಿದೆ. ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳ ವಿದ್ಯಾರ್ಹತೆ ಮತ್ತು ರೋಗಿಗಳಿಗೆ ನೀಡುವ ಚಿಕಿತ್ಸೆ ಹೀಗೆ ಎಲ್ಲ ಅವಶ್ಯಕ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಬೇರೆ ಭಾಗದಲ್ಲಿ ನಕಲಿ ವೈದ್ಯರ ಬಗ್ಗೆ ಬಂದ ದೂರಿನನ್ವಯ ಈ ಪರಿಶೀಲನೆ ನಡೆಸಲಾಗಿದೆ. ನಮ್ಮ ಭಾಗದಲ್ಲಿ ಮೂರು ಆಸ್ಪತ್ರೆಗಳಿಗೆ ನೊಟೀಸ್ ಜಾರಿ ಮಾಡಿದ್ದೇವೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

