Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕಲಕೇರಿ: ಜ.22 ರಂದು ಮರ್ಯಾದಾ ಪುರುಷೋತ್ತಮ, ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ಬಾಲರಾಮ ಮೂರ್ತಿ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಶ್ರೀರಾಮರಕ್ಷೆ ಮಂತ್ರಾಕ್ಷತೆ ಪ್ರತಿ ಮನೆ ಮನೆಗೆ ತಲುಪಿಸಲು ಪರಮ ರಾಮ ಭಕ್ತ ಹನುಮನ ದಿನ ಶನಿವಾರ ಸಕಲ ವೈಭವದೊಂದಿಗೆ ಪುರ ಪ್ರವೇಶಕ್ಕೆ ಸ್ವಾಗತ ಮಾಡಿಕೊಳ್ಳಲಾಯಿತು.ಗ್ರಾಮದ ಶ್ರೀ ಯಲ್ಲಾಲಿಂಗ ಮಠದಿಂದ ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದವರೆಗೆ ಡೊಳ್ಳು ವಾದ್ಯ ಭಾಜಾ ಭಜಂತ್ರಿ ಮೆರವಣಿಗೆಯೊಂದಿಗೆ ಗ್ರಾಮದ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮತ್ತು ಗದ್ದುಗಿಮಠದ ಮಡಿವಾಳೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಶ್ರೀರಾಮ ಭಕ್ತರು, ಯುವ ಸಮೂಹ ರಾಮನಾಮವನ್ನು ಪಠಿಸುತ್ತಾ ಜಯಘೋಷಗಳೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತ ಮಾಡಿಕೊಂಡರು.ಈ ವೇಳೆ ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮನ ವೇಷಧರಿಸಿದ ಮುದ್ದು ಮಕ್ಕಳು ಎಲ್ಲರ ಗಮನ ಸೆಳೆದರು
ತಿಕೋಟಾ: ಜನೆವರಿ 22ಕ್ಕೆ ನಡೆಯುವ ಆಯೋಧ್ಯೇಯ ಶ್ರೀರಾಮಚಂದ್ರನ ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಹಾಗೂ ದೇವಾಲಯದ ಉದ್ಘಾಟನೆಯು ಅಖಂಡ ಭಾರತದ ಸನಾತನ ಸಂಸ್ಕೃತಿಗೆ ಸಂದ ಜಯ. ರಾಮನ ಆದರ್ಶ, ರಾಮನ ತತ್ವಗಳು ದೇಶಕ್ಕಷ್ಟೇ ಅಲ್ಲದೇ ವಿಶ್ವಕ್ಕೂ ಆದರ್ಶಪ್ರಾಯವಾಗಿದೆ ಎಂದು ಪ್ರವಚಕಾರ ಬಾಬುರಾವ್ ಮಹಾರಾಜರು ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಜರುಗಿದ ಪ್ರಭು ಶ್ರೀ ರಾಮಚಂದ್ರನ ಬೃಹತ್ ಶೋಭಾಯಾತ್ರೆಯಲ್ಲಿ ಅವರು ಮಾತನಾಡಿದರು.ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ. ರಾಮಮಂದಿರದ ಬಾಗಿಲು ತೆರೆಯುವ ದಿನಕ್ಕಾಗಿ ಭಕ್ತರು ಕಾಯುತ್ತಿದ್ದು, ಶೀಘ್ರದಲ್ಲಿ ದೇಗುಲ ಭಕ್ತರ ಪ್ರವೇಶಕ್ಕೆ ತೆರೆಯಲಿದೆ. ರಾಮ ಮಂದಿರವು ರಾಷ್ಟ್ರೀಯ ದೇವಾಲಯವಾಗಬೇಕು. ಯುವಕರು ಕಾಶಿಯೊಂದಿಗೆ ಅಯೋಧ್ಯೆಯ ದರ್ಶನವನ್ನೂ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ ರೇ ಸಿ ಪಾಟೀಲ ಹೇಳಿದರು.ಈ ಸಂದರ್ಭದಲ್ಲಿ ಲಿಂಗರಾಜ ಪಾಟೀಲ, ಅರವಿಂದ್ ಮಾಲಗಾರ, ತುಕಾರಾಮ ನಲವಡೆ, ರಾಜಕುಮಾರ ತಿವಾರಿ, ಮೊನೇಶ್ ಪತ್ತಾರ, ಗಣೇಶ ಗುಗ್ಗರಿ, ಧರೆಪ್ಪ ಹೆಚ್ ಡಿ, ಸುರೇಶ ನರಳೆ, ಸಂಜು ಯಚ್ಚಿ, ಗೋವಿಂದ ರಜಪೂತ, ಶ್ರೀಶೈಲ ಕೊರಬು, ಮಹಾಂತೇಶ ಮಾಲಗಾರ…
ಶ್ರೀ ಶಿವದಾಸಿಮಯ್ಯ ಜಯಂತ್ಯೋತ್ಸವ | ಪ್ರತಿಭಾ ಪುರಸ್ಕಾರ | ದಾನಿಗಳಿಗೆ ಸನ್ಮಾನ ವಿಜಯಪುರ: ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸಮಾಜಕ್ಕೆ ಒಳಿತನ್ನು ಮಾಡುವ ಮನೋಭಾವನೆ ಉಳ್ಳವರಾಗಬೇಕೆಂದು ಬೆಳ್ಳರೆ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.ಶಿವಸಿಂಪಿ ಸಮಾಜ ಕಲ್ಯಾಣ ಸಂಘ (ರಿ) ವಿಜಯಪುರ ಇವರು ಹಮ್ಮಿಕೊಂಡಿರುವ ಶ್ರೀ ಶಿವದಾಸಿಮಯ್ಯ ಜಯಂತ್ಯೋತ್ಸವ ೨೦೨೨-೨೩ರ ಪ್ರತಿಭಾ ಪುರಸ್ಕಾರ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಅಮೃತಾನಂದ ಮಹಾಸ್ವಾಮಿಗಳು ಗುರುದೇವ ಆಶ್ರಮ ಕಾತ್ರಾಳ ಬಾಲಗಾಂವ ಮತ್ತು ಸಿದ್ದರಾಮೇಶ್ವರ ಪಟ್ಟದ ದೇವರು ಬೋಳಚಿಂಚೋಳಿ ಇವರು ಸಾನಿಧ್ಯ ವಹಿಸಿದ್ದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸನಗೌಡ ಆರ್ ಪಾಟೀಲ (ಯತ್ನಾಳ) ಅವರು, ಸಮಾಜ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿಯ ಪ್ರಾಮಾಣಿಕ, ಕ್ರಿಯಾಶೀಲತೆ ಹಾಗೂ ಉತ್ತಮ ಹಿನ್ನೆಲೆ ಕಾರಣ. ಆಡಳಿತ ಮಂಡಳಿ ಉತ್ತಮವಾಗಿದ್ದರೆ ಸಮಾಜದಿಂದ ಮತ್ತು ಜನ ಪ್ರತಿನಿಧಿಗಳಿಂದ ದೇಣಿಗೆ ಸಹಾಯ ಸಹಕಾರ ದೊರೆಯುತ್ತದೆ ಎಂದು ತಿಳಿಸಿ, ಸಮಾಜದಲ್ಲಿರುವ ಎಲ್ಲ ಜನರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಾಗಿಡಬೇಕೆಂದು ತಿಳಿಸಿದರಲ್ಲದೆ,…
ವಿಜಯಪುರದ ಬಂಜಾರಾ ಪಿಯು ಕಾಲೇಜು ವತಿಯಿಂದ ಕುಷ್ಟ ರೋಗಿಗಳಿಗೆ ಅನ್ನಸಂತರ್ಪಣೆ ವಿಜಯಪುರ: ಬಂಜಾರಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ವಿಜಯಪುರದ ಶಿವಗಿರಿಯ ಪಕ್ಕದಲ್ಲಿರುವ “ಕುಷ್ಟರೋಗಿಗಳ ಕಾಲೋನಿಗೆ ಹೋಗಿ ಕುಷ್ಟರೋಗಿಗಳಿಗೆ ಅನ್ನಸಂತರ್ಪಣೆ ಮಾಡಿಸಿ ಮಾನವೀಯತೆ ಮೆರೆದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಂ.ಎಸ್.ನಿಂಬರಗಿ ಮಾತನಾಡಿ, ಕುಷ್ಟರೋಗಿಗಳ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು, ಕುಷ್ಟ ರೋಗಿಗಳ ಕಾರ್ಯ ಚಟುವಟಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಕುಷ್ಟರೋಗಕ್ಕೆ ಅಂಟಿಕೊಂಡಿರುವ ಕಳಂಕ, ತಾರತಮ್ಯ ಹೋಗಲಾಡಿಸಲು ಅಧಿಕಾರಿಗಳು ಶ್ರಮಿಸಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.ಈ ವೇಳೆಯಲ್ಲಿ ಎಸ್.ಎಸ್.ತೆನಿಹಳ್ಳಿ ಮಾತನಾಡಿದರು.ಈ ಕಾರ್ಯಕ್ಕೆ ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿ ಆರ್.ಡಿ.ಚವ್ಹಾಣ್, ಪ್ರಾಚಾರ್ಯ ಎಸ್.ಬಿ.ಪವಾರ, ಉಪನ್ಯಾಸಕ ಶಿವಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೋರಟಗಿ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ನಡೆದ ಸಮಾರಂಭ |ಇಸ್ರೋ ವಿಜ್ಞಾನಿ ದಂಪತಿಗೆ ಸನ್ಮಾನ | ವಿದ್ಯಾರ್ಥಿಗಳೊಂದಿಗೆ ಸಂವಾದ ಮೋರಟಗಿ: ಮೊಟ್ಟ ಮೊದಲು ವಿದ್ಯಾರ್ಥಿಗಳ ಗುರಿ ಗಟ್ಟಿಯಾಗಿರಬೇಕು ಮನಸ್ಸಿಟ್ಟು ಪುಸ್ತಕ ಓದಿದರೆ ಯಶಸ್ಸು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಪುಸ್ತಕವನ್ನು ತಲೆಬಾಗಿ ಓದಿದರೆ ಮುಂದೊಂದು ದಿನ ಪುಸ್ತಕ ನಿಮ್ಮನ್ನು ತಲೆ ಎತ್ತಿ ತಿರುಗಾಡುವಂತೆ ಮಾಡುತ್ತದೆ. ವಿದ್ಯಾರ್ಥಿ ಜೀವನ ಬಂಗಾರವಿದ್ದಂತೆ ಕಳೆದುಕೊಳ್ಳಬೇಡಿ ಎಂದು ಚಂದ್ರಯಾನ ರೂವಾರಿ ಇಸ್ರೋ ವಿಜ್ಞಾನಿ ಯೋಜನಾ ನಿರ್ದೇಶಕ ವಿಲಾಸ ರಾಠೋಡ್ ಹೇಳಿದರು.ಸ್ಥಳೀಯ ಕಲ್ಪವೃಕ್ಷ ಪದವಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡ ಸನ್ಮಾನ ಸಮಾರಂಭ ಹಾಗೂ ಇಸ್ರೋ ವಿಜ್ಞಾನಿ ಜೊತೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ವಿದ್ಯಾರ್ಥಿಗಳು ಮೊದಲು ಮೂಡನಂಬಿಕೆಯಿಂದ ಹೊರಬನ್ನಿ. ದೇವರು ಎಂದರೆ ಒಂದು ಭಯ ಇರಲಿ, ದೇವರ ಕೃಪಾಶಿರ್ವಾದದಿಂದ ಉತ್ತೀರ್ಣ ಆಗುತ್ತೀರಿ ಎನ್ನುವ ಭರವಸೆಯಲ್ಲಿ ಕೂಡಬೇಡಿ. ಶಿಕ್ಷಕರು ಹೇಳಿದ ಮಾರ್ಗದಲ್ಲಿ ನಡೆದು ಕಷ್ಟಪಟ್ಟು ಓದಿದರೆ ಮಾತ್ರ ನೀವು ಕಂಡ ಕನಸು ಖಂಡಿತ ಈಡೇರುತ್ತದೆ ಎಂದರು.ನಂತರ ಕೆಪಿಸಿಸಿ ರಾಜ್ಯ ಪ್ರಧಾನ…
ಇಂಡಿ: ಜಿಲ್ಲಾ ಮಾಡಬೇಕೆಂದು ಆಗ್ರಹಿಸಿ ಪಟ್ಟಣ ಮತ್ತು ತಾಲೂಕಿನ ಅಂಜುಮನ್ ಇಸ್ಲಾಂ ಸಮಿತಿಯ ಬಂಧುಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.ಇಂಡಿಯ ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷ ಅಫಝಲ ಹವಾಲದಾರ ಮಾತನಾಡಿ ಈಗಾಗಲೇ ಇಂಡಿಯ ಶಾಸಕರಾದಿಯಾಗಿ ಝಮೀರ್ ಅಹಮ್ಮದ ಖಾನರವರಿಗೆ ಇಂಡಿ ಜಿಲ್ಲೆ ಮಾಡುವ ಕುರಿತು ಮನವರಿಕೆ ಮಾಡಿದ್ದು ಅವರು ಸಹಕಾರ ನೀಡುವುದಾಗಿ ಒಪ್ಪಿದ್ದಾರೆ ಎಂದರು.ಉಪಾಧ್ಯಕ್ಷ ಹುಸೇನ ಬೇಪಾರಿ ಮಾತನಾಡಿದರು.ಪ್ರತಿಭಟನೆಯಲ್ಲಿ ಮೌಲಾನಾ ಝೀಯಾ ಉಲ್ ಹಕ್ ಉಮರಿ, ಬಾಗವಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸತ್ತಾರ ಬಾಗವಾನ, ಪುರಸಭೆ ಸದಸ್ಯ ಜಹಾಂಗೀರ ಸೌದಾಗರ, ಜಬ್ಬಾರ ಅಣ್ಣಾ ಅರಬ್, ಹುಸೇನ ಜಮಾದಾರ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಮಹಮ್ಮದ ಬಾಗವಾನ, ಅಬ್ದುಲ್ ರಹಮಾನ ಅಂತೋಲೆ, ಇಲಿಯಾಸ ಬೋರಾಮಣಿ,ಮುನ್ನಾ ಬಾಗವಾನ, ಯಾಕುಬ ಮಾಶ್ಯಾಳಕರ, ರೈಸ ಅಷ್ಟೇಕರ ಮತ್ತಿತರಿದ್ದರು.
ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರವುಗೊಳಿಸದಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.ಅಂಗಡಿಕಾರರಲ್ಲಿ ಬಹುತೇಕರು ದೈಹಿಕ ಸಾಮರ್ಥ್ಯದಿಂದ ದುಡಿಯಲು ಆಗದ ಅಂಗವಿಕಲರು, ವಿಧವೆಯರು, ಹಿಂದುಳಿದ ವರ್ಗದವರು ಇದ್ದು ಸಾಲ ಸೋಲ ಮಾಡಿಕೊಂಡಿದ್ದೇವೆ. ನಮ್ಮ ಅಂಗಡಿಗಳನ್ನು ತೆರವುಗೊಳಿಸದೇ ಇನ್ನೂ ಕೆಲವು ದಿನಗಳ ಕಾಲ ಅವಕಾಶ ನೀಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.ಬಿ.ವಿ.ಪಾಟೀಲ, ಕೆ.ಪಿ.ಲಮಾಣಿ, ಜೆ.ಎನ್.ನದಾಫ್, ಎಸ್.ಎಸ್.ಸಜ್ಜನ, ಎಸ್.ಎಲ್.ನಾಯ್ಕೋಡಿ, ಆರ್.ಪಿ.ಲಮಾಣಿ, ಆನಂದ ಬಿ.ಎಚ್, ಎಲ್.ಪಿ.ಲಮಾಣಿ, ಸಿ.ಎಸ್.ಬಿರಾದಾರ ಸೇರಿದಂತೆ ಮತ್ತೀತರರು ಸಹಿ ಮಾಡಿದ್ದಾರೆ.
ತಿಕೋಟಾ: ತಾಲ್ಲೂಕಿನ ಬಾಬಾನಗರ ಗ್ರಾಮದ ಹಿರೇಕುರುಬರ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಹಾಗೂ ಕಛೇರಿ ತಂಡವು ಭೇಟಿ ನೀಡಿ ಶಾಲೆಯ ಸಮಗ್ರ ಮೌಲ್ಯಮಾಪನ ಮಾಡಿದಾಗ ಶಾಲಾ ಶೈಕ್ಷಣಿಕ, ಭೌತಿಕ ಸೌಲಭ್ಯ, ಉತ್ತಮ ಕಲಿಕಾ ವಾತಾವರಣ ಹಾಗೂ ಮಕ್ಕಳ ಕಲಿಕೆ ಕಂಡು ಶಾಲಾ ಶಿಕ್ಷಕರನ್ನು ಪ್ರಶಂಸಿಸಿ ಅಭಿನಂದನಾ ಪತ್ರ ವಿತರಿಸಿ ಸನ್ಮಾನಿಸಿದರು.ಗ್ರಾಮದಿಂದ ಐದಾರು ಕಿಲೋಮೀಟರ್ ದೂರ ಇರುವ ವಸ್ತಿ ಶಾಲೆಯಲ್ಲಿ 127 ಮಕ್ಕಳು ದಾಖಲಾತಿ ಹೊಂದಿ ಪ್ರತಿದಿನ ನೂರಕ್ಕೆ ನೂರರಷ್ಟು ಹಾಜರಾತಿ ಹೊಂದಿ ಉತ್ತಮ ಕಲಿಕೆ ಸಾಗುತ್ತಿದೆ. ಶಾಲಾ ಸ್ವಚ್ಚತೆ, ಅಭಿವೃದ್ಧಿ, ಮಕ್ಕಳ ಸ್ಪಷ್ಟ ಓದು , ಶುದ್ದ ಬರಹ, ಗಣಿತದ ಮೂಲಕ ಕ್ರಿಯೆಗಳು, ಇಂಗ್ಲೀಷ್ ಕಲಿಕೆ ಎಲ್ಲವೂ ಅಚ್ಚುಕಟ್ಟಾಗಿ ಶಿಸ್ತುಬದ್ದ ಕಲಿಕೆ ಕಂಡು ಬಂದಿತು. ಶೇ100 ಹಾಜರಾತಿ ಹೊಂದಿದ ವಿಶೇಷ ತೋಟದ ವಸ್ತಿ ಶಾಲೆಯಾಗಿದೆ. ಸಮಗ್ರ ಶಾಲೆಯ ಅಭಿವೃದ್ಧಿಯಾಗಬೇಕಾದರೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಶ್ರಮ ಬಹಳಷ್ಟಿದೆ.…
ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ವಿದ್ಯಾ ಜ್ಯೋತಿ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ ಟಿ.ಬಿ. ಶಿರಕನಹಳ್ಳಿ, ಕಾರ್ಯದರ್ಶಿ ಪುಂಡಲಿಕ ಕಪಾಲಿ, ಶಿಕ್ಷಕಿ ಶೋಭಾ, ಲಕ್ಷ್ಮೀ ಗೋರನಾಳ, ರಾಣಿ ಹತ್ತಿ, ಅಶ್ವೀನಿ ರಜಪೂತ್, ಬಸಮ್ಮ ಶಿರಕನಹಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಇಂಡಿ: ಸ್ವಾಮಿ ವಿವೇಕಾನಂದರು ಚಿಕಾಗೋ ಉಪನ್ಯಾಸದಿಂದ ಭಾರತದ ದೃಷ್ಠಿಕೋನವನ್ನು ವಿಶ್ವದ ಮುಂದೆ ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿದ್ದು, ನಮ್ಮ ದೇಶದ ಸಂಸ್ಕೃತಿ ಅನಾವರಣಗೊಳಿಸಿದ ಹಿರಿಮೆಯ ಭಾಷಣವಾಗಿತ್ತು ಎಂದು ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಪಿ.ಜಿ.ಕಲ್ಮನಿ ಹೇಳಿದರು.ಶುಕ್ರವಾರ ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಸ್ವಾಮಿ ವಿವೇಕಾನಂದರಂತಹ ಆದರ್ಶ ಪುರುಷರನ್ನು ನಾವು ಆದರ್ಶವಾಗಿ ಇಟ್ಟುಕೊಂಡು ನಡೆದರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಿ ಉನ್ನತ ಸಾಧನೆ ಮಾಡಲು ಸಾದ್ಯವಾಗುತ್ತದೆ ಎಂದರು.ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಮಾತನಾಡಿದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ಆಂಗ್ಲ ಮಾಧ್ಯಮ ಮುಖ್ಯ ಗುರು ಸುನಿಲ್ ವಿ.ಆರ್, ಶಿಕ್ಷಕರಾದ ಪ್ರಕಾಶ್ ಕಲ್ಮನಿ, ತುಕಾರಾಮ್ ಚವ್ಹಾಣ, ಸಚೀನ್ ಅಡಿಗುಂಡಿ, ಪರಮೇಶ್ವರ ಇಂಗಳೆ, ಪ್ರವೀಣ್ ಹೊಸಗೌಡರ್, ರಾಮ್ ಚವ್ಹಾಣ, ಜಾನ್ ವಿ, ಥಾಮಸ್…
