ಕಲಕೇರಿ: ಜ.22 ರಂದು ಮರ್ಯಾದಾ ಪುರುಷೋತ್ತಮ, ಅಯೋಧ್ಯೆ ಪ್ರಭು ಶ್ರೀ ರಾಮಚಂದ್ರ ಬಾಲರಾಮ ಮೂರ್ತಿ ಪ್ರತಿಷ್ಠಾನ ಹಿನ್ನೆಲೆಯಲ್ಲಿ ಶ್ರೀರಾಮರಕ್ಷೆ ಮಂತ್ರಾಕ್ಷತೆ ಪ್ರತಿ ಮನೆ ಮನೆಗೆ ತಲುಪಿಸಲು ಪರಮ ರಾಮ ಭಕ್ತ ಹನುಮನ ದಿನ ಶನಿವಾರ ಸಕಲ ವೈಭವದೊಂದಿಗೆ ಪುರ ಪ್ರವೇಶಕ್ಕೆ ಸ್ವಾಗತ ಮಾಡಿಕೊಳ್ಳಲಾಯಿತು.
ಗ್ರಾಮದ ಶ್ರೀ ಯಲ್ಲಾಲಿಂಗ ಮಠದಿಂದ ಶ್ರೀ ಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನದವರೆಗೆ ಡೊಳ್ಳು ವಾದ್ಯ ಭಾಜಾ ಭಜಂತ್ರಿ ಮೆರವಣಿಗೆಯೊಂದಿಗೆ ಗ್ರಾಮದ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಮತ್ತು ಗದ್ದುಗಿಮಠದ ಮಡಿವಾಳೇಶ್ವರ ಶಿವಾಚಾರ್ಯರ ಸಮ್ಮುಖದಲ್ಲಿ ಶ್ರೀರಾಮ ಭಕ್ತರು, ಯುವ ಸಮೂಹ ರಾಮನಾಮವನ್ನು ಪಠಿಸುತ್ತಾ ಜಯಘೋಷಗಳೊಂದಿಗೆ ಭಕ್ತಿಪೂರ್ವಕವಾಗಿ ಸ್ವಾಗತ ಮಾಡಿಕೊಂಡರು.
ಈ ವೇಳೆ ಶ್ರೀರಾಮ, ಲಕ್ಷ್ಮಣ, ಸೀತೆ ಮತ್ತು ಹನುಮನ ವೇಷಧರಿಸಿದ ಮುದ್ದು ಮಕ್ಕಳು ಎಲ್ಲರ ಗಮನ ಸೆಳೆದರು
Subscribe to Updates
Get the latest creative news from FooBar about art, design and business.
Related Posts
Add A Comment

