ಶ್ರೀ ಶಿವದಾಸಿಮಯ್ಯ ಜಯಂತ್ಯೋತ್ಸವ | ಪ್ರತಿಭಾ ಪುರಸ್ಕಾರ | ದಾನಿಗಳಿಗೆ ಸನ್ಮಾನ
ವಿಜಯಪುರ: ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಸಮಾಜಕ್ಕೆ ಒಳಿತನ್ನು ಮಾಡುವ ಮನೋಭಾವನೆ ಉಳ್ಳವರಾಗಬೇಕೆಂದು ಬೆಳ್ಳರೆ ಬಸವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಶಿವಸಿಂಪಿ ಸಮಾಜ ಕಲ್ಯಾಣ ಸಂಘ (ರಿ) ವಿಜಯಪುರ ಇವರು ಹಮ್ಮಿಕೊಂಡಿರುವ ಶ್ರೀ ಶಿವದಾಸಿಮಯ್ಯ ಜಯಂತ್ಯೋತ್ಸವ ೨೦೨೨-೨೩ರ ಪ್ರತಿಭಾ ಪುರಸ್ಕಾರ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಮೃತಾನಂದ ಮಹಾಸ್ವಾಮಿಗಳು ಗುರುದೇವ ಆಶ್ರಮ ಕಾತ್ರಾಳ ಬಾಲಗಾಂವ ಮತ್ತು ಸಿದ್ದರಾಮೇಶ್ವರ ಪಟ್ಟದ ದೇವರು ಬೋಳಚಿಂಚೋಳಿ ಇವರು ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಬಸನಗೌಡ ಆರ್ ಪಾಟೀಲ (ಯತ್ನಾಳ) ಅವರು, ಸಮಾಜ ಪ್ರಗತಿಯತ್ತ ಸಾಗಲು ಆಡಳಿತ ಮಂಡಳಿಯ ಪ್ರಾಮಾಣಿಕ, ಕ್ರಿಯಾಶೀಲತೆ ಹಾಗೂ ಉತ್ತಮ ಹಿನ್ನೆಲೆ ಕಾರಣ. ಆಡಳಿತ ಮಂಡಳಿ ಉತ್ತಮವಾಗಿದ್ದರೆ ಸಮಾಜದಿಂದ ಮತ್ತು ಜನ ಪ್ರತಿನಿಧಿಗಳಿಂದ ದೇಣಿಗೆ ಸಹಾಯ ಸಹಕಾರ ದೊರೆಯುತ್ತದೆ ಎಂದು ತಿಳಿಸಿ, ಸಮಾಜದಲ್ಲಿರುವ ಎಲ್ಲ ಜನರು ತಮ್ಮ ದುಡಿಮೆಯ ಸ್ವಲ್ಪ ಭಾಗವನ್ನು ಸಮಾಜದ ಅಭಿವೃದ್ಧಿಗೆ ಮೀಸಲಾಗಿಡಬೇಕೆಂದು ತಿಳಿಸಿದರಲ್ಲದೆ, ತಾವು ಕೂಡ ಸಹಾಯ ಮಾಡುವುದಾಗಿ ಭರವಸೆ ನೀಡಿದರು.
ವಿದ್ಯಾ ಸಂತೋಷ ಕಲ್ಯಾಣಶೆಟ್ಟಿ ಶಿವದಾಸಿಮಯ್ಯರ ಬಗೆಗೆ ಉಪನ್ಯಾಸ ನೀಡಿದರು.
ಶಿವಶಂಕರ ಎಂ ಸಿಂದಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರತಿಭಾನ್ವಿತ ೩೦ ವಿದ್ಯಾರ್ಥಿಗಳನ್ನು ಹಾಗೂ ದಾನಿಗಳಿಗೆ ಸನ್ಮಾನಿಸಲಾಯಿತು.
ಗಂಗಾಧರ ಯಾವಗಲ್ ಹಾಗೂ ವಿವಿಧ ಜಿಲ್ಲೆಗಳ ಜಿಲ್ಲಾ ಅಧ್ಯಕ್ಷರು ವೇದಿಕೆ ಮೇಲಿದ್ದರು.
ಈ ಸಮಯದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಎಂ ಬಿ ಕನ್ನೂರ, ಅಪ್ಪು ಕಲ್ಯಾಣಶೆಟ್ಟಿ , ಶಿವಕುಮಾರ ಭುಯಾರ, ವೀರಭದ್ರ ಮೇತ್ರಿ , ಯುವರಾಜ ಚೋಳಕೆ, ಗುಂಡೇಶ್ವರ ಹಳಕಟ್ಟಿ, ಅನಿಲ್ ಭೂಸನೂರ, ಪಿ.ಎಂ.ಗಲಗಲಿ, ಪ್ರಸಾದ್ ಶಿವಸಿಂಪಿ, ಎಸ್ ಕೆ ಗೌಡ್ರು , ಅಧಿಕ ಸಂಖ್ಯೆಯಲ್ಲಿ ಮಹಿಳಾ ಮಂಡಲದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ಸುನೀತಾ ಗಲಗಲಿ ಹಾಗೂ ಭುವನೇಶ್ವರಿ ಹಳಕಟ್ಟಿ ಇವರಿಂದ ಪ್ರಾರ್ಥನೆ ಹಾಗೂ ಸ್ವಾಗತ ಗೀತೆ, ಐ.ಎಸ್. ನರೂಣಿ ಇವರಿಂದ ಸ್ವಾಗತ ಮತ್ತು ಪರಿಚಯ, ಅನ್ನಪೂರ್ಣ ಭೂಸನೂರ ಇವರಿಂದ ನಿರೂಪಣೆ, ವಿಜಯಲಕ್ಷ್ಮಿ ಸೋಲಾಪುರ ಇವರಿಂದ ವಂದನಾರ್ಪಣೆ ಜರುಗಿದವು.

