ತಿಕೋಟಾ: ತಾಲ್ಲೂಕಿನ ಬಾಬಾನಗರ ಗ್ರಾಮದ ಹಿರೇಕುರುಬರ ವಸ್ತಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ವಿಜಯಪುರ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೋಲಮಟ್ಟಿ ಹಾಗೂ ಕಛೇರಿ ತಂಡವು ಭೇಟಿ ನೀಡಿ ಶಾಲೆಯ ಸಮಗ್ರ ಮೌಲ್ಯಮಾಪನ ಮಾಡಿದಾಗ ಶಾಲಾ ಶೈಕ್ಷಣಿಕ, ಭೌತಿಕ ಸೌಲಭ್ಯ, ಉತ್ತಮ ಕಲಿಕಾ ವಾತಾವರಣ ಹಾಗೂ ಮಕ್ಕಳ ಕಲಿಕೆ ಕಂಡು ಶಾಲಾ ಶಿಕ್ಷಕರನ್ನು ಪ್ರಶಂಸಿಸಿ ಅಭಿನಂದನಾ ಪತ್ರ ವಿತರಿಸಿ ಸನ್ಮಾನಿಸಿದರು.
ಗ್ರಾಮದಿಂದ ಐದಾರು ಕಿಲೋಮೀಟರ್ ದೂರ ಇರುವ ವಸ್ತಿ ಶಾಲೆಯಲ್ಲಿ 127 ಮಕ್ಕಳು ದಾಖಲಾತಿ ಹೊಂದಿ ಪ್ರತಿದಿನ ನೂರಕ್ಕೆ ನೂರರಷ್ಟು ಹಾಜರಾತಿ ಹೊಂದಿ ಉತ್ತಮ ಕಲಿಕೆ ಸಾಗುತ್ತಿದೆ. ಶಾಲಾ ಸ್ವಚ್ಚತೆ, ಅಭಿವೃದ್ಧಿ, ಮಕ್ಕಳ ಸ್ಪಷ್ಟ ಓದು , ಶುದ್ದ ಬರಹ, ಗಣಿತದ ಮೂಲಕ ಕ್ರಿಯೆಗಳು, ಇಂಗ್ಲೀಷ್ ಕಲಿಕೆ ಎಲ್ಲವೂ ಅಚ್ಚುಕಟ್ಟಾಗಿ ಶಿಸ್ತುಬದ್ದ ಕಲಿಕೆ ಕಂಡು ಬಂದಿತು. ಶೇ100 ಹಾಜರಾತಿ ಹೊಂದಿದ ವಿಶೇಷ ತೋಟದ ವಸ್ತಿ ಶಾಲೆಯಾಗಿದೆ. ಸಮಗ್ರ ಶಾಲೆಯ ಅಭಿವೃದ್ಧಿಯಾಗಬೇಕಾದರೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರ ಶ್ರಮ ಬಹಳಷ್ಟಿದೆ. ಅವರ ಪ್ರಾಮಾಣಿಕ ಬೋಧನೆಗೆ ಮಕ್ಕಳಲ್ಲಿ ಉತ್ತಮ ಕಲಿಕೆಯಾಗಿದೆ ಎಂದು ಬಿಇಓ ಬಳೋಲಮಟ್ಟಿ ಖುಷಿ ಹಂಚಿಕೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

