Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಶಾಸಕ ಯಶವಂತಗೌಡರು ತಮ್ಮ ರಾಜಿನಾಮೆಗೆ ಬದ್ದರಾಗಿರಬೇಕು
(ರಾಜ್ಯ ) ಜಿಲ್ಲೆ

ಶಾಸಕ ಯಶವಂತಗೌಡರು ತಮ್ಮ ರಾಜಿನಾಮೆಗೆ ಬದ್ದರಾಗಿರಬೇಕು

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲ ಹೇಳಿಕೆ

ಉದಯರಶ್ಮಿ ದಿನಪತ್ರಿಕೆ

ಇಂಡಿ: ಸ್ಥಳೀಯ ಶಾಸಕ ಯಶವಂತಗೌಡ ಪಾಟೀಲರು ನಾನು ಬದ್ದತೆಯ ಸಿದ್ದಾಂತದ ರಾಜಕಾರಣಿ ಎಂದು ಹೇಳುತ್ತಾರೆ. ಈಗ ಅತೃಪ್ತರಾಗಿ ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಮತ್ತೆ ಮೂರು ದಿನಗಳಾದ ಮೇಲೆ ರಾಜಿನಾಮೆ ಹಿಂದೆ ಪಡೆದಿದ್ದೇನೆ ಎಂದು ನಾಟಕ ಮಾಡಬಾರದು. ರಾಜಿನಾಮೆಗೆ ಬದ್ದರಾಗಿರಬೇಕು ಎಂದು ಬಿಜೆಪಿ ತಾಲೂಕಾ ಮಂಡಲ ಅಧ್ಯಕ್ಷ ಹಣಮಂತರಾಯಗೌಡ ಪಾಟೀಲರು ಹೇಳಿದರು.
ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಭಿವೃದ್ದಿಯಲ್ಲಿ ವಂಚನೆ ಆಗಿದ್ದರೆ ರಾಜಿನಾಮೆ ನೀಡಲಿ ಅಧಿಕಾರ ಬೇಕೆಂದು ರಾಜಿನಾಮೆ ನೀಡಿರುವದು ಅವರಿಗೆ ಶೋಬೆ ತರುವಂಥದ್ದಲ್ಲ. ಈಗಾಗಲೇ ಅವರು ರಾಜಿನಾಮೆ ನೀಡಿದ್ದು ಅದಕ್ಕೆ ಕಾರ್ಯಕರ್ತರ ಮತಕ್ಷೇತ್ರದ ಜನರ ಅಭಿಪ್ರಾಯ ಕೇಳಿಲ್ಲ. ನಾಳೆ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಮತಕ್ಷೇತ್ರದ ಜನರಿಗೆ ತಲೆಬಾಗಿ ರಾಜಿನಾಮೆ ಮರಳಿ ಪಡೆಯುತ್ತೇನೆ ಎಂದು ನಾಟಕವಾಡಬಾರದು ಎಂದರು.
ತಾಲೂಕು ಬರದಿಂದ ತತ್ತರಿಸುತ್ತಿದೆ, ಮಳೆ ಸರಿಯಾಗಿ ಆಗಿಲ್ಲ, ಕುಡಿಯುವ ನೀರಿನ ತೊಂದರೆ ಆಗುತ್ತಿದೆ. ಈ ಸಮಯದಲ್ಲಿ ರಾಜೀನಾಮೆ ಎಂಬ ನಾಟಕ ಎಷ್ಟು ಸರಿ, ಹಿರಿಯ ಶಾಸಕರು ಮೂರು ಬಾರಿ ಜನರು ಆಯ್ಕೆ ಮಾಡಿದ್ದು ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದರು.
ಕಳೆದ ಮೂರು ತಿಂಗಳಿಂದ ಸಚಿವ ಸ್ಥಾನಕ್ಕಾಗಿ ಬೆಂಗಳೂರು ದೆಹಲಿ ಅಡ್ಡಾಡುತ್ತಿದ್ದಾರೆ. ಗ್ರಾಮಗಳ ಕಡೆಗೆ ಗಮನವೇ ಹರಿಸಿಲ್ಲ, ಆಡಳಿತ ಕುಸಿದು ಬಿದ್ದಿದೆ. ಕಳೆದ ಬಾರಿ ಚುನಾವಣೆಯಲ್ಲಿ ತಾಲೂಕನ್ನು ಜಿಲ್ಲೆ ಮಾಡುತ್ತೇನೆಂದು ನಂಬಿಸಿ ಮೋಸ ಮಾಡಿದರು. ಈಗ ರಾಜಿನಾಮೆಯ ನಾಟಕವಾಡುತ್ತಿದ್ದಾರೆ. ಸ್ವಾರ್ಥ ಮುಂದೆ ಇಟ್ಟುಕೊಂಡು ರಾಜಿನಾಮೆ ನೀಡಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ವಿಶೇಷವಾಗಿ ರೋಡಗಿ, ಖೇಡಗಿ ಹಾಗೂ ಭುಯ್ಯಾರ ಗ್ರಾಮಗಳ ಜನರಿಗೆ ಕುಡಿಯಲು ಹಾಗೂ ದೈನಂದಿನ ಬಳಕೆಗೆ ಕನಿಷ್ಠ ನೀರು ಕೂಡ ಸಿಗುತಿರಲಿಲ್ಲ. ಅಂತಹ ಗಂಭೀರ ಪರಿಸ್ಥಿತಿಯಲ್ಲೂ ಶಾಸಕರು ಜನರ ಸಂಕಷ್ಟ ಆಲಿಸದೆ ಸ್ವಾರ್ಥ ರಾಜಕೀಯಕ್ಕಾಗಿ ಓಡಾಡಿದ್ದು ನಮ್ಮ ಭಾಗದ ಜನರ ದುರ್ದೈವ ಎಂದರು.
ರಾಜೀನಾಮೆ ಕೈ ಬರಹದ ಮೂಲಕ ಸ್ಪೀಕರ ಅವರಿಗೆ ಸಲ್ಲಿಸಬೇಕು. ಟೈಪ್ ಮಾಡಿದ ಪತ್ರ ಸಮಂಜಸವಲ್ಲ. ಕುರ್ಚಿ ಆಸೆಗಾಗಿ ಮತಕ್ಷೇತ್ರದ ಜನರನ್ನು ಕೇಳದೇ ರಾಜಿನಾಮೆ ನೀಡಿದ್ದೀರಿ ಅದನ್ನು ಮರಳಿ ಪಡೆಯಬಾರದು. ತತ್ವ ಸಿದ್ದಾಂತ ಬದ್ದತೆಯ ಮಾತುಗಳು ಕೇವಲ ಬಾಯಿಯಿಂದ ಬರಬಾರದು ಆಚರಣೆಯಲ್ಲಿ ಇರಬೇಕು ಎಂದರು.
ಕಾಸುಗೌಡ ಬಿರಾದಾರ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಕಿವಡೆ, ಶೀಲವಂತ ಉಮರಾಣಿ, ರವಿ ವಗ್ಗೆ ದೇವೆಂದ್ರ ಕುಂಬಾರ ಮಾತನಾಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಬಾಳು ಮುಳಜಿ, ಮಹೇಶ ಹೂಗಾರ, ಸಂತೋಷ ಪಾಟೀಲ, ಪ್ರಶಾಂತ ಗವಳಿ, ಸಂತೋಷ ಪಾಟೀಲ, ಭೀಮರಾಯ ಬಬಲಾದ, ರಾಜಶೇಖರ ಭತಗುಣಕಿ ಮತ್ತಿತರಿದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026

ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ

ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ

ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಸೆಪ್ಟೆಂಬರ್ 24,2026
    In ದಿನಪತ್ರಿಕೆ
  • ಆಲ್ಝೈಮರ್ಸ್ ಕಾಯಿಲೆ ನಿಯಂತ್ರಣ ಪ್ರತಿಯೊಬ್ಬರ ಹೊಣೆಗಾರಿಕೆ
    In (ರಾಜ್ಯ ) ಜಿಲ್ಲೆ
  • ಮಹಿಳೆ ಮಗು ಕಾಣೆ :ಪತ್ತೆಗೆ ಮನವಿ
    In (ರಾಜ್ಯ ) ಜಿಲ್ಲೆ
  • ಸಮಾಪನೆಗೊಂಡ ೩ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಸೆ.೨೪ರಂದು ೧೫ ಗ್ರಾಮಗಳಲ್ಲಿ ಪಿಂಚಣಿ ಅದಾಲತ್
    In (ರಾಜ್ಯ ) ಜಿಲ್ಲೆ
  • ಮೈಸೂರು ದಸರಾ: ಕನ್ನಡ ಪುಸ್ತಕಗಳ ಮಾರಾಟ ಮೇಳಕ್ಕೆ ಅರ್ಜಿ ಆಹ್ವಾನ
    In (ರಾಜ್ಯ ) ಜಿಲ್ಲೆ
  • ಪೌರ ಕಾರ್ಮಿಕರ ಆರೋಗ್ಯ-ಮಕ್ಕಳ ಶಿಕ್ಷಣಕ್ಕೆ ಆದ್ಯತೆ
    In (ರಾಜ್ಯ ) ಜಿಲ್ಲೆ
  • ಹೊಸನಗರ ಹಳ್ಳದ ಸೇತುವೆ ಮೇಲೆ ಸಂಚಾರಕ್ಕೆ ಸಂಚಕಾರ
    In (ರಾಜ್ಯ ) ಜಿಲ್ಲೆ
  • ಬೇನಾಳ ಗ್ರಾಮಕ್ಕೆ ನುಗ್ಗಿದ ಮೊಸಳೆ ಮರಿ :ಆತಂಕದಲ್ಲಿ ಗ್ರಾಮಸ್ಥರು
    In (ರಾಜ್ಯ ) ಜಿಲ್ಲೆ
  • ಶಿವಾನಂದ ತಗಡೂರ ಗೆ ನಾಟಕ ಅಕಾಡೆಮಿ ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.