ಮುದ್ದೇಬಿಹಾಳ: ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಡಬ್ಬಾ ಅಂಗಡಿಗಳನ್ನಿಟ್ಟುಕೊಂಡ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ತೆರವುಗೊಳಿಸದಂತೆ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಅಂಗಡಿಕಾರರಲ್ಲಿ ಬಹುತೇಕರು ದೈಹಿಕ ಸಾಮರ್ಥ್ಯದಿಂದ ದುಡಿಯಲು ಆಗದ ಅಂಗವಿಕಲರು, ವಿಧವೆಯರು, ಹಿಂದುಳಿದ ವರ್ಗದವರು ಇದ್ದು ಸಾಲ ಸೋಲ ಮಾಡಿಕೊಂಡಿದ್ದೇವೆ. ನಮ್ಮ ಅಂಗಡಿಗಳನ್ನು ತೆರವುಗೊಳಿಸದೇ ಇನ್ನೂ ಕೆಲವು ದಿನಗಳ ಕಾಲ ಅವಕಾಶ ನೀಡಬೇಕು ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಬಿ.ವಿ.ಪಾಟೀಲ, ಕೆ.ಪಿ.ಲಮಾಣಿ, ಜೆ.ಎನ್.ನದಾಫ್, ಎಸ್.ಎಸ್.ಸಜ್ಜನ, ಎಸ್.ಎಲ್.ನಾಯ್ಕೋಡಿ, ಆರ್.ಪಿ.ಲಮಾಣಿ, ಆನಂದ ಬಿ.ಎಚ್, ಎಲ್.ಪಿ.ಲಮಾಣಿ, ಸಿ.ಎಸ್.ಬಿರಾದಾರ ಸೇರಿದಂತೆ ಮತ್ತೀತರರು ಸಹಿ ಮಾಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

