ಇಂಡಿ: ಸ್ವಾಮಿ ವಿವೇಕಾನಂದರು ಚಿಕಾಗೋ ಉಪನ್ಯಾಸದಿಂದ ಭಾರತದ ದೃಷ್ಠಿಕೋನವನ್ನು ವಿಶ್ವದ ಮುಂದೆ ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸಿದ್ದು, ನಮ್ಮ ದೇಶದ ಸಂಸ್ಕೃತಿ ಅನಾವರಣಗೊಳಿಸಿದ ಹಿರಿಮೆಯ ಭಾಷಣವಾಗಿತ್ತು ಎಂದು ವಿಶ್ವಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಸಂಸ್ಥೆಯ ಸಂಸ್ಥಾಪಕ ಪಿ.ಜಿ.ಕಲ್ಮನಿ ಹೇಳಿದರು.
ಶುಕ್ರವಾರ ತಾಲೂಕಿನ ಹಿರೇಬೇವನೂರ ಗ್ರಾಮದ ವಿಶ್ವ ಭಾರತಿ ವಿದ್ಯಾಕೇಂದ್ರ ಪ್ರಾಥಮಿಕ, ಪ್ರೌಢ ಹಾಗೂ ಶ್ರೀ ಬೀರಲಿಂಗೇಶ್ವರ ಪಬ್ಲಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತಿ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರಂತಹ ಆದರ್ಶ ಪುರುಷರನ್ನು ನಾವು ಆದರ್ಶವಾಗಿ ಇಟ್ಟುಕೊಂಡು ನಡೆದರೆ ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಬಾಳಿ ಉನ್ನತ ಸಾಧನೆ ಮಾಡಲು ಸಾದ್ಯವಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ವಿ.ಜಿ. ಕಲ್ಮನಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಶ್ರೀದೇವಿ ಕಲ್ಮನಿ, ಆಂಗ್ಲ ಮಾಧ್ಯಮ ಮುಖ್ಯ ಗುರು ಸುನಿಲ್ ವಿ.ಆರ್, ಶಿಕ್ಷಕರಾದ ಪ್ರಕಾಶ್ ಕಲ್ಮನಿ, ತುಕಾರಾಮ್ ಚವ್ಹಾಣ, ಸಚೀನ್ ಅಡಿಗುಂಡಿ, ಪರಮೇಶ್ವರ ಇಂಗಳೆ, ಪ್ರವೀಣ್ ಹೊಸಗೌಡರ್, ರಾಮ್ ಚವ್ಹಾಣ, ಜಾನ್ ವಿ, ಥಾಮಸ್ ಎಸ್.ಜಿ, ಹ್ಯಾರಿಶ್, ಎಲ್.ಎನ್. ಕರ್ಜಗಿ, ಶಿವಾನಂದ ಅಂದೇವಾಡಿ, ಜೆ.ಎ. ಬಿರಾದಾರ, ರಾಜಶ್ರೀ ಸಂಗಮ್, ಅಶ್ವಿನಿ ಚವ್ಹಾಣ, ಸಾರಾ ಕೆ, ದೀಪಾಮಾಲಾ, ಜೀನತ್ ಮಧು ಸೇರಿದಂತೆ ಅನೇಕರು ಇದ್ದರು.
ಶಿಕ್ಷಕ ಶಿವಾನಂದ ಕಲ್ಮನಿ ನಿರೂಪಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

