ತಿಕೋಟಾ: ಜನೆವರಿ 22ಕ್ಕೆ ನಡೆಯುವ ಆಯೋಧ್ಯೇಯ ಶ್ರೀರಾಮಚಂದ್ರನ ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಹಾಗೂ ದೇವಾಲಯದ ಉದ್ಘಾಟನೆಯು ಅಖಂಡ ಭಾರತದ ಸನಾತನ ಸಂಸ್ಕೃತಿಗೆ ಸಂದ ಜಯ. ರಾಮನ ಆದರ್ಶ, ರಾಮನ ತತ್ವಗಳು ದೇಶಕ್ಕಷ್ಟೇ ಅಲ್ಲದೇ ವಿಶ್ವಕ್ಕೂ ಆದರ್ಶಪ್ರಾಯವಾಗಿದೆ ಎಂದು ಪ್ರವಚಕಾರ ಬಾಬುರಾವ್ ಮಹಾರಾಜರು ಹೇಳಿದರು.
ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದಲ್ಲಿ ಜರುಗಿದ ಪ್ರಭು ಶ್ರೀ ರಾಮಚಂದ್ರನ ಬೃಹತ್ ಶೋಭಾಯಾತ್ರೆಯಲ್ಲಿ ಅವರು ಮಾತನಾಡಿದರು.
ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ. ರಾಮಮಂದಿರದ ಬಾಗಿಲು ತೆರೆಯುವ ದಿನಕ್ಕಾಗಿ ಭಕ್ತರು ಕಾಯುತ್ತಿದ್ದು, ಶೀಘ್ರದಲ್ಲಿ ದೇಗುಲ ಭಕ್ತರ ಪ್ರವೇಶಕ್ಕೆ ತೆರೆಯಲಿದೆ. ರಾಮ ಮಂದಿರವು ರಾಷ್ಟ್ರೀಯ ದೇವಾಲಯವಾಗಬೇಕು. ಯುವಕರು ಕಾಶಿಯೊಂದಿಗೆ ಅಯೋಧ್ಯೆಯ ದರ್ಶನವನ್ನೂ ಮಾಡಬೇಕು ಎಂದು ನಿವೃತ್ತ ಉಪನ್ಯಾಸಕ ರೇ ಸಿ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಲಿಂಗರಾಜ ಪಾಟೀಲ, ಅರವಿಂದ್ ಮಾಲಗಾರ, ತುಕಾರಾಮ ನಲವಡೆ, ರಾಜಕುಮಾರ ತಿವಾರಿ, ಮೊನೇಶ್ ಪತ್ತಾರ, ಗಣೇಶ ಗುಗ್ಗರಿ, ಧರೆಪ್ಪ ಹೆಚ್ ಡಿ, ಸುರೇಶ ನರಳೆ, ಸಂಜು ಯಚ್ಚಿ, ಗೋವಿಂದ ರಜಪೂತ, ಶ್ರೀಶೈಲ ಕೊರಬು, ಮಹಾಂತೇಶ ಮಾಲಗಾರ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

