ಇಂಡಿ: ಜಿಲ್ಲಾ ಮಾಡಬೇಕೆಂದು ಆಗ್ರಹಿಸಿ ಪಟ್ಟಣ ಮತ್ತು ತಾಲೂಕಿನ ಅಂಜುಮನ್ ಇಸ್ಲಾಂ ಸಮಿತಿಯ ಬಂಧುಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಇವರಿಗೆ ಮನವಿ ಸಲ್ಲಿಸಿದರು.
ಇಂಡಿಯ ಅಂಜುಮನ್ ಇಸ್ಲಾಂ ಸಮಿತಿಯ ಅಧ್ಯಕ್ಷ ಅಫಝಲ ಹವಾಲದಾರ ಮಾತನಾಡಿ ಈಗಾಗಲೇ ಇಂಡಿಯ ಶಾಸಕರಾದಿಯಾಗಿ ಝಮೀರ್ ಅಹಮ್ಮದ ಖಾನರವರಿಗೆ ಇಂಡಿ ಜಿಲ್ಲೆ ಮಾಡುವ ಕುರಿತು ಮನವರಿಕೆ ಮಾಡಿದ್ದು ಅವರು ಸಹಕಾರ ನೀಡುವುದಾಗಿ ಒಪ್ಪಿದ್ದಾರೆ ಎಂದರು.
ಉಪಾಧ್ಯಕ್ಷ ಹುಸೇನ ಬೇಪಾರಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮೌಲಾನಾ ಝೀಯಾ ಉಲ್ ಹಕ್ ಉಮರಿ, ಬಾಗವಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸತ್ತಾರ ಬಾಗವಾನ, ಪುರಸಭೆ ಸದಸ್ಯ ಜಹಾಂಗೀರ ಸೌದಾಗರ, ಜಬ್ಬಾರ ಅಣ್ಣಾ ಅರಬ್, ಹುಸೇನ ಜಮಾದಾರ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಮಹಮ್ಮದ ಬಾಗವಾನ, ಅಬ್ದುಲ್ ರಹಮಾನ ಅಂತೋಲೆ, ಇಲಿಯಾಸ ಬೋರಾಮಣಿ,ಮುನ್ನಾ ಬಾಗವಾನ, ಯಾಕುಬ ಮಾಶ್ಯಾಳಕರ, ರೈಸ ಅಷ್ಟೇಕರ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
ಇಂಡಿ ಜಿಲ್ಲಾ ಕೂಗು: ಬೆಂಗಳೂರು-ದೆಹಲಿಗೆ ನಿಯೋಗಕ್ಕೆ ನಿರ್ಧಾರ
Related Posts
Add A Comment

