ವಿಜಯಪುರದ ಬಂಜಾರಾ ಪಿಯು ಕಾಲೇಜು ವತಿಯಿಂದ ಕುಷ್ಟ ರೋಗಿಗಳಿಗೆ ಅನ್ನಸಂತರ್ಪಣೆ
ವಿಜಯಪುರ: ಬಂಜಾರಾ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದಿಂದ ವಿದ್ಯಾರ್ಥಿಗಳೊಂದಿಗೆ ಉಪನ್ಯಾಸಕರು ವಿಜಯಪುರದ ಶಿವಗಿರಿಯ ಪಕ್ಕದಲ್ಲಿರುವ “ಕುಷ್ಟರೋಗಿಗಳ ಕಾಲೋನಿಗೆ ಹೋಗಿ ಕುಷ್ಟರೋಗಿಗಳಿಗೆ ಅನ್ನಸಂತರ್ಪಣೆ ಮಾಡಿಸಿ ಮಾನವೀಯತೆ ಮೆರೆದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಎಂ.ಎಸ್.ನಿಂಬರಗಿ ಮಾತನಾಡಿ, ಕುಷ್ಟರೋಗಿಗಳ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು, ಕುಷ್ಟ ರೋಗಿಗಳ ಕಾರ್ಯ ಚಟುವಟಿಕೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆಯಬೇಕು. ಕುಷ್ಟರೋಗಕ್ಕೆ ಅಂಟಿಕೊಂಡಿರುವ ಕಳಂಕ, ತಾರತಮ್ಯ ಹೋಗಲಾಡಿಸಲು ಅಧಿಕಾರಿಗಳು ಶ್ರಮಿಸಬೇಕು. ಸಮಾಜದ ಮುಖ್ಯ ವಾಹಿನಿಯಲ್ಲಿ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಈ ವೇಳೆಯಲ್ಲಿ ಎಸ್.ಎಸ್.ತೆನಿಹಳ್ಳಿ ಮಾತನಾಡಿದರು.
ಈ ಕಾರ್ಯಕ್ಕೆ ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಿ.ಎಲ್.ಚವ್ಹಾಣ್, ಕಾರ್ಯಾಧ್ಯಕ್ಷ ಕೆ.ಜಿ.ರಾಠೋಡ, ಕಾರ್ಯದರ್ಶಿ ಆರ್.ಡಿ.ಚವ್ಹಾಣ್, ಪ್ರಾಚಾರ್ಯ ಎಸ್.ಬಿ.ಪವಾರ, ಉಪನ್ಯಾಸಕ ಶಿವಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

