ಉದಯರಶ್ಮಿ ದಿನಪತ್ರಿಕೆ
ಬಾಗಲಕೋಟೆ (ಜಮಖಂಡಿ): ಮುಧೋಳದ ನಿರಾಣಿ ಶುಗರ್ಸ್ ಲಿಮಿಟೆಡ್ (ಯುನಿಟ್-1) ವತಿಯಿಂದ 2025-26ನೇ ಹಂಗಾಮಿನಲ್ಲಿ ಕಬ್ಬು ಪೂರೈಸಿದ ರೈತರಿಗೆ ಪ್ರತಿ ಕೆ.ಜಿ. ಸಕ್ಕರೆಗೆ ₹24 ದರ ನಿಗದಿಪಡಿಸಿ, ಪ್ರತಿ ಟನ್ ಕಬ್ಬಿಗೆ 500 ಗ್ರಾಂ ಸಕ್ಕರೆಯನ್ನು ವಿತರಿಸುವ ಯೋಜನೆಗೆ ಇಂದಿನಿಂದ ಚಾಲನೆ ನೀಡಲಾಗಿದೆ.
ಚಿಕ್ಕಪಡಸಲಗಿ ಸರ್ಕಲ್ ವ್ಯಾಪ್ತಿಯ ಎಲ್ಲ ರೈತರು ತಮ್ಮ ಕಬ್ಬು ಪೂರೈಕೆಯ ದಾಖಲೆಗಳೊಂದಿಗೆ ನಿಗದಿತ ಸಕ್ಕರೆ ವಿತರಣಾ ಕೇಂದ್ರಕ್ಕೆ ಆಗಮಿಸಿ ಸಕ್ಕರೆಯನ್ನು ಪಡೆದುಕೊಳ್ಳುವಂತೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಸಕ್ಕರೆ ವಿತರಣೆಯು ಆಗಸ್ಟ್ 5ರಿಂದ ಆಗಸ್ಟ್ 15, 2026ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಿಗ್ಗೆ 9.30ರಿಂದ ಸಂಜೆ 4.30ರವರೆಗೆ ವಿತರಣೆ ನಡೆಯಲಿದೆ.
ಪ್ರತಿ ಟನ್ ಕಬ್ಬು ಪೂರೈಕೆಗೆ ರೈತರು 500 ಗ್ರಾಂ ಸಕ್ಕರೆಯನ್ನು ₹24 ಪ್ರತಿ ಕೆ.ಜಿ. ದರದಲ್ಲಿ ಪಡೆಯಬಹುದಾಗಿದೆ. ಸಕ್ಕರೆ ವಿತರಣೆ ವೇಳೆ ರೈತರು ಕಬ್ಬು ಪೂರೈಕೆಯ ದಾಖಲೆಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಸಕ್ಕರೆ ಪಡೆಯದ ರೈತರಿಗೆ, ಉಳಿಕೆ ಸಕ್ಕರೆ ಲಭ್ಯವಿದ್ದಲ್ಲಿ ಸಂಸ್ಥೆಯ ಮುಂದಿನ ಸೂಚನೆಯಂತೆ ವಿತರಣೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಕುರಿತು ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆ ನೀಡಿ, ಅರ್ಹ ರೈತರು ನಿಗದಿತ ದಿನಾಂಕದೊಳಗೆ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದೆ.

