Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಚಡಚಣ: ದಿನಾಲು ಸಾವಿರಾರು ವಿದ್ಯಾರ್ಥಿಗಳು, ನೂರಾರು ಅಧಿಕಾರಿಗಳು, ಹಿರಿಯರು, ಸಾರ್ವಜನಿಕರು ಹಲವಾರು ಗ್ರಾಮಗಳಿಂದ ಬಂದು ಇಂಡಿ ಮತ್ತು ಚಡಚಣ ತಿರುಗಾಡುವದು ಇಲ್ಲಿನ ಅನಿವಾರ್ಯ, ಕಾರಣ ಇಂಡಿ ಮತ್ತು ಚಡಚಣ ತಾಲೂಕಾ ಕೇಂದ್ರಗಳಾಗಿದ್ದು ಹಲವಾರು ಕೆಲಸಕ್ಕೆ ರೈತರು, ಸಾರ್ವಜನಿಕರು ಬಸ್ಸಿಗಾಗಿ ಕಾದು, ಕಾದು ಬೇಸತ್ತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲೂಕು ಉಪಾಧ್ಯಕ್ಷರು ಪ್ರಕಾಶ ಬಿರಾದಾರ ಆಕ್ರೋಶ ಹೊರಹಾಕಿದ್ದಾರೆ.ಇಂಡಿ, ಚಡಚಣ ಮತ್ತು ವಿಜಯಪುರ, ಸೋಲಾಪುರ್ ಮಧ್ಯದಲ್ಲಿರುವ ಝಳಕಿ ಬಸ್ಸ ನಿಲ್ದಾಣಕ್ಕೆ, ಬಸ್ಸಿಗಾಗಿ ಜನರು ಪರಡುವ ಪರಿಸ್ಥಿತಿ ಎದುರಾಗಿದೆ ಎಂದು ಝಳಕಿ ವಲಯದ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ತಾಲೂಕಾ ಅಧ್ಯಕ್ಷ ಪ್ರಕಾಶ ಬಿರಾದಾರ್ ಹಾಗೂ ಝಳಕಿ ಅಧ್ಯಕ್ಷ ರವಿಕುಮಾರ್ ಹೂಗಾರ ನೇತೃತ್ವದಲ್ಲಿ ಇಂದು ಝಳಕಿ ಬಸ್ಸ ನಿಲ್ದಾಣದ ವಿಭಾಗೀಯ ಕಂಟ್ರೋಲರ್ ರುದ್ರು ಗಜಾಕೋಶ್ ಇವರ ಮೂಲಕ ತಾಲೂಕು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲದವರೆಗೆ ಬಸ್ಸಿಗಾಗಿ ಬಡವರು, ನೀರಿದ್ಯೋಗಿಗಳು ಇಂಡಿ ಮತ್ತು ಚಡಚಣಕ್ಕೆ ಬಸ್ಸಿನ ಮೇಲೆ ಅವಲಂಬಿತಾರಾಗಿದ್ದು,…
ಕೆಂಭಾವಿ ತಾಲೂಕಿನಲ್ಲಿ ಶೀತಗಾಳಿ-ಚಳಿಗೆ ಸುಸ್ತಾದ ಜನಜೀವನ | ರಕ್ತ ಸಂಚಾರಕ್ಕೆ ಸಂಚಕಾರ | ವೃದ್ಧರು, ಮಕ್ಕಳಲ್ಲಿ ನಡುಕ ಉದಯರಶ್ಮಿ ದಿನಪತ್ರಿಕೆ ವಿಶೇಷ ವರದಿ: ಡಾ.ಯಂಕನಗೌಡ ಪಾಟೀಲ ಕೆಂಭಾವಿ: ಚಳಿಗಾಲ ಎಂದರೆ ವರ್ಷದ ನಾಲ್ಕು ತಿಂಗಳು ಅತ್ಯಂತ ತಂಪಾದ ಋತು, ಇದು ಶರತ್ಕಾಲ ಮತ್ತು ವಸಂತ ಕಾಲದ ನಡುವೆ ಬರುತ್ತದೆ, ಭೂಮಿಯ ಅಕ್ಷದ ಓರೆಗೊಂಡು ಸೂರ್ಯನಿಂದ ದೂರವಿರುವಾಗ ಸಂಭವಿಸುತ್ತದೆ, ಈ ಸಮಯದಲ್ಲಿ ಹಗಲು ಕಡಿಮೆಯಾಗಿ ರಾತ್ರಿಗಳು ದೀರ್ಘವಾಗಿ ಇರುವುದು, ನಿಸರ್ಗದ ಬದಲಾವಣೆಯ ಜೊತೆಗೆ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ತರುವ ಋತುವಾಗಿರುವುದು ನಿಜ. ಆದರೆ ಈ ಬಾರಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ, ಶೀತಗಾಳಿ, ಮಾಗಿ ಚಳಿಯ ಥಂಡಿಗೆ ಥಂಡಾ ಹೊಡೆದ ಜನಜೀವನ.ಕಲ್ಯಾಣ ಕರ್ನಾಟಕ ಭಾಗದ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಕೆಂಭಾವಿ ವಲಯದಲ್ಲಿ ವಿಪರೀತ ಚಳಿಯೋ.. ಚಳಿ.. ದಿನ ಬೆಳಗಿನ ಜಾವ ಹಾಗೂ ಸಾಯಂಕಾಲ ಸಮಯ ಮೈನಡುಗಿಸುವ ಚಳಿ ಹೇಳ ತೀರದು. ತೀವ್ರವಾಗಿ ಬೀಸುವ ಶೀತ…
ವಿಜಯಪುರ ಸಂಸದ ರಮೇಶ ಜಿಗಜಿಣಗಿ ಯಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ರಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಗೋಲಗುಂಬಜ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಬೈಪಾಸ್ ಹಾಗೂ ಗದಗ ಬೈಪಾಸ್ ಎರಡು ಮಾರ್ಗದಲ್ಲಿ ಸಂಚರಿಸಲು ಆದೇಶಿಸುವಂತೆ ಒತ್ತಾಯಿಸಿ ಸಂಸದ ರಮೇಶ ಜಿಗಜಿಣಗಿ ಅವರು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಲಿಖಿತ ಮನವಿ ಸಲ್ಲಿಸಿದರು. ಇದಕ್ಕೆ ಕೇಂದ್ರ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲಿಯೇ ಈ ರೈಲು ಸಂಚಾರ ಆರಂಭಗೊಳ್ಳಲಿದ್ದು, ಪ್ರಯಾಣಿಕರಿಗೆ ಸಮಯ ಉಳಿತಾಯವಾಗಿ ಅನುಕೂಲವಾಗಲಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅನೇಕ ವರ್ಷಗಳಿಂದ ಈ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿಕೊಂಡು ಪತ್ರ ಬರೆಯಲಾಗಿತ್ತು, ಈಗ ಈ ಮಹತ್ವದ ಬೇಡಿಕೆಗೆ ಕೇಂದ್ರ ಸಚಿವರು ಸ್ಪಂದಿಸಿದ್ದು ಪ್ರಯಾಣಿಕರಿಗೆ ಅನುಕೂಲವಾಗಲಿದೆ, ಪ್ರಮುಖವಾಗಿ ಗೋಲಗುಂಬ್ ಎಕ್ಸಪ್ರೆಸ್ ರೈಲನ್ನು ಹುಬ್ಬಳ್ಳಿ ಬೈ-ಪಾಸ್ ಮತ್ತು ಗದಗ ಬೈ-ಪಾಸ್‌ನಲ್ಲಿ ಹೀಗೆ ಎರಡೂ ಬೈ-ಪಾಸ್ ಮಾರ್ಗಗಳಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರದ ಶೇಗುಣಸಿಯಲ್ಲಿರುವ ಶಿವಶರಣ ಹರಳಯ್ಯನವರ ಗುಂಡದಲ್ಲಿ ಶಿವಶರಣ ಹರಳಯ್ಯನವರ ಕಲ್ಯಾಣಮ್ಮನವರ ಮೂರ್ತಿ ಅನಾವರಣ ಸಮಾರಂಭ ಇದೇ ದಿನಾಂಕ ೨೭ ರಂದು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎಂದು ಶ್ರೀ ಶಿವಶರಣ ಹರಳಯ್ಯನವರ ಗುಂಡ ಅಭಿವೃದ್ಧಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರೆಪ್ಪ ಅರ್ಧಾವೂರ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಾದಿ ಶರಣರಾಗಿರುವ ಹರಳಯ್ಯನವರು ಶ್ರೇಷ್ಠ ಚೇತನ, ಅವರ ಸ್ಮರಣೆಯ ಯಾವೊಂದು ವಸ್ತುವು ಹರಳಯ್ಯನಗುಂಡದಲ್ಲಿ ಇರಲಿಲ್ಲ, ಹೀಗಾಗಿ ಅಲ್ಲಿ ಅವರ ಮೂರ್ತಿ ಸ್ಥಾಪನೆಯಾಗಬೇಕು ಎಂಬ ಸಮಾಜ ಬಾಂಧವರ ಆಶಯದಂತೆ ಅಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ ಎಂದರು.ಬಬಲೇಶ್ವರ ಬೃಹನ್ಮಠದ ಶ್ರೀ ಡಾ.ಮಹಾದೇವ ಶಿವಾಚಾರ್ಯರ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಲವಾರು ಮಠಾಧೀಶರು ಭಾಗವಹಿಸಲಿದ್ದು, ಸಚಿವ ಡಾ.ಎಂ.ಬಿ. ಪಾಟೀಲ ಸಮಾರಂಭ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ರಮೇಶ ಜಿಗಜಿಣಗಿ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಲಿದ್ದು, ವಿಜಯಪುರ ನಗರ ಶಾಸಕ ಬಸನಗವಡ ಪಾಟೀಲ ಯತ್ನಾಳ ದಾನಿಗಳ ಫಲಕವನ್ನು ಅನಾವರಣಗೊಳಿಸಲಿದ್ದಾರೆ.ಸಂಘದ ಗೌರವಾಧ್ಯಕ್ಷ ಬಾಪುಗೌಡ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಭಾರತ ರತ್ನ, ಮಾಜಿ ಪ್ರಧಾನಮಂತ್ರಿ, ಮಹಾನ್ ರಾಷ್ಟ್ರನಾಯಕ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಸುಶಾಸನ ದಿನವನ್ನಾಗಿ ಅತ್ಯಂತ ಶ್ರದ್ಧೆ ಹಾಗೂ ಗೌರವದಿಂದ ಆಚರಿಸಲಾಯಿತು.ದಿ.ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಸಲ್ಲಿಸಿದರು.ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದಿ.ಅಟಲ್ ಬಿಹಾರಿ ವಾಜಪೇಯಿ ಸಮೃದ್ಧ ಭಾರತ ನಿರ್ಮಾಣದ ದಿವ್ಯ ಕನಸು ಹೊಂದಿದ್ದ ಶ್ರೇಷ್ಠ ನಾಯಕ, ಭವ್ಯ ಭಾರತ ಕಟ್ಟುವ ಅದಮ್ಯ ಉದ್ದೇಶ ಹೊಂದಿದ್ದ ಅವರು ತಮ್ಮ ಅವಧಿಯಲ್ಲಿ ಅನೇಕ ಮಹೋನ್ನತ ಯೋಜನೆಗಳನ್ನು ರೂಪಿಸಿದರು, ಸರ್ವ ಶಿಕ್ಷಣ ಅಭಿಯಾನದಂತಹ ಶ್ರೇಷ್ಠ ಕಾರ್ಯಕ್ರಮಗಳನ್ನು ರೂಪಿಸಿದರು, ಅವರ ಆಡಳಿತ ಅವಧಿಯು ಒಂದು ಸುವರ್ಣ ಯುಗ, ಅವರೊಬ್ಬ ಶ್ರೇಷ್ಠ ಮಾನವೀಯ ಅಂತ:ಕರಣಿ, ಸ್ವತ: ಕವಿಯಾಗಿದ್ದ ಅವರು ಸಾಹಿತ್ಯಕ್ಕೂ ಶ್ರೇಷ್ಠ ಕೊಡುಗೆ ನೀಡಿದ್ದಾರೆ ಎಂದರು.ದೇಶದ ಭದ್ರತೆ, ಆರ್ಥಿಕ ಸ್ಥಿರತೆ, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿದೇಶಾಂಗ ನೀತಿಯಲ್ಲಿ…
ಸಂಗಮನಾಥ ಸಕ್ಕರೆ ಕಾರ್ಖಾನೆ ತೂಕದಲ್ಲಿ ೫೬೦ ಕೆ.ಜಿ ಮೋಸ | ಅಧಿಕಾರಿಗಳಿಂದ ತಪಾಸಣೆ | ಮೋಸ ಸಾಬೀತು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಿಂದಗಿ ತಾಲೂಕಿನ ಮನ್ನಾಪುರದ ಸಂಗಮನಾಥ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಒಬ್ಬ ರೈತ ಸಂಶಯದಿಂದ ಹೊರಗಡೆ ತೂಕ ಮಾಡಿಕೊಂಡು ಬಂದಾಗ ಕಬ್ಬಿನ ತೂಕದಲ್ಲಿ ೧೦೦೦ ಕೆ,ಜಿ ಮೋಸ ಆಗಿರುವುದು ಕಂಡು ಬಂದಿರುವ ಹಿನ್ನಲೆಯಲ್ಲಿ ಕಾರ್ಖಾನೆ ಸಿಬ್ಬಂದಿಯವರಿಗೂ ಹಾಗೂ ರೈತರ ನಡುವೆ ವಾಗ್ವಾದ ಉಂಟಾಯಿತು.ಈ ವೇಳೆ ಸ್ಥಳಕ್ಕೆ ಸಿಂದಗಿ ತಹಶಿಲ್ದಾರರು ಹಾಗೂ ಅಳತೆ ಮತ್ತು ತೂಕದ ಅಧಿಕಾರಿಗಳು ಬಂದಾಗ ಸರಿಯಾದ ತೂಕ ತೊರಿಸಿ ರೈತರಿಗೆ ಮೊಸ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ, ಅಧಿಕಾರಿಗಳು ಕೂಡಾ ಬಂದಾಗ ೫೬೦ ಕೆ.ಜಿ ವ್ಯಾತ್ಯಾಸ ಬಂದಿದೆ ಇದನ್ನು ತಪಾಸಣೆ ಮಾಡಬೇಕು ಎಂದರು.ಈ ವಿಷಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರಿಂದ ಬುಧವಾರ ಸಂಜೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಗುರುವಾರ ಇಂಡಿ ಉಪವಿಭಾಗಾಧಿಕಾರಿಗಳು, ಸಿಂದಗಿ ತಹಶಿಲ್ದಾರರು, ಆಹಾರ ಇಲಾಖೆ ನಿರ್ದೇಶಕರು ಹಾಗೂ ಅಳತೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಮೇಲೆ ಎಲ್ಲ ಸದಸ್ಯರು ನಂಬಿಕೆಯಿಟ್ಟು ಏಕಪಕ್ಷೀಯವಾಗಿ ಗೆಲುವಿನ ಉಡುಗೊರೆ ನೀಡಿದ್ದು, ಅವರ ನಂಬಿಕೆ ಹುಸಿಗೊಳಿಸದ ರೀತಿಯಲ್ಲಿ ಕಾರ್ಯ ನಿರ್ವಹಿಸುವಂತೆ ನಗರದ ಹಿರಿಯ ಪತ್ರಕರ್ತ ಶ್ರೀಕಾಂತ ಕುಬಸದ ಅವರು ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಹಾಗೂ ಹಿರಿಯ ಪತ್ರಕರ್ತರನ್ನು ಗುರುವಾರ ತಮ್ಮ ಮನೆಗೆ ಆಹ್ವಾನಿಸಿ, ಆತ್ಮೀಯವಾಗಿ ಸನ್ಮಾನಿಸಿ ಅವರು ಮಾತನಾಡಿದರು.ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಸಂಘದ ಎಲ್ಲ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದುಶೇಖರ ಮಣೂರ ಮಾತನಾಡಿ, ಎಲ್ಲರೊಂದಿಗೆ ಆತ್ಮೀಯವಾಗಿ ಅಜಾತಶತೃವಿನಂತಿರುವ ಶ್ರೀಕಾಂತ ಕುಬಸದ ಅವರು, ನಮ್ಮನ್ನೆಲ್ಲ ಸನ್ಮಾನಿಸಿ ನಮ್ಮ ಜವಾಬ್ದಾರಿ ಹೆಚ್ಚಿಸಿದ್ದಾರೆ. ಅವರ ಆಶಯವನ್ನು ಗೌರವಿಸಿ, ಜಿಲ್ಲೆಯ ಪತ್ರಕರ್ತರ ಆಶೋತ್ತರಗಳಿಗೆ ಸ್ಪಂದಿಸುವುದಾಗಿ ತಿಳಿಸಿದರು.ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಪ್ರಕಾಶ ಬೆಣ್ಣೂರ, ಜಿಲ್ಲಾ…
ಲೇಖನ- ಡಾ ಶಶಿಕಾಂತ ರುದ್ರಪ್ಪ ಪಟ್ಟಣರಾಮದುರ್ಗ – ಪುಣೆ ಉದಯರಶ್ಮಿ ದಿನಪತ್ರಿಕೆ ಒಬ್ಬ ಹಳ್ಳಿಯ ಸಾಧಾರಣ ಲಿಂಗಾಯತ ವ್ಯಾಪಾರಸ್ಥ ಮನೆತನದಲ್ಲಿ ಹುಟ್ಟಿ ಭಾರತದ ಪರಮೋಚ್ಚ ಅಧ್ಯಕ್ಷ ಸ್ಥಾನಕ್ಕೆ ಹೋದ ಅಪ್ರತಿಮ ರಾಜಕೀಯ ಮುತ್ಸದ್ಧಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಸಪ್ಪ ದಾನಪ್ಪ ಜತ್ತಿ ಅವರ ಬದುಕು ಒಂದು ಸಂಘರ್ಷವೇ ಆಗಿದೆ.ಒಂದು ಅವಿಸ್ಮರಣೀಯ ಪ್ರಸಂಗಸಾವಳಗಿ ಇವತ್ತಿನ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಒಂದು ಪುಟ್ಟ ಗ್ರಾಮ. ಆ ಊರಿನಲ್ಲಿ ದಾನಪ್ಪ ಎಂಬ ವ್ಯಾಪಾರಿ ಮನೆತನದ ಮಧ್ಯಮ ವರ್ಗದ ವ್ಯಕ್ತಿ ಅಥಣಿಯ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಶಿಷ್ಯರಾಗಿದ್ದರು. ಒಂದು ದಿನ ದಾನಪ್ಪನವರು ತಮ್ಮ ಕಿಡಿಗೇಡಿ ಬಾಲಕ ಬಸಪ್ಪನನ್ನು ಕರೆದು ಕೊಂಡು ಅಥಣಿಯ ಶ್ರೀ ಗಚ್ಚಿನ ಮಠಕ್ಕೆ ಪರಮ ಪೂಜ್ಯರ ದರ್ಶನಕ್ಕೆ ಹೋದರು.ಪರಮ ಪೂಜ್ಯ ಶ್ರೀ ಅಥಣಿಯ ಮುರುಗೇಂದ್ರ ಶಿವಯೋಗಿಗಳು ಲಿಂಗ ಪೂಜೆ ಮುಗಿಸಿ ಮಠದ ಆವರಣದಲ್ಲಿ ಭಕ್ತರ ದರ್ಶನ ನೀಡಲು ಬಂದು ಕುಳಿತು ಕೊಳ್ಳುತ್ತಾರೆ. ಆಗ ಮಠದಲ್ಲಿ ಆಡುತ್ತಿದ್ದ ಬಾಲಕ ಓಡಿ ಹೋಗಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಪ್ರಾಜೆಕ್ಟ್ ಫೆಲೋ ತಾತ್ಕಾಲಿಕ ಹುದ್ದೆಗೆ ಇದೇ ದಿ.೨೯ ರಂದು ಬೆಳಿಗ್ಗೆ ೧೦.೩೦ ಕ್ಕೆ ಪ್ರಾದೇಶಿಕ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರ ಕಾರ್ಯಾಲಯದಲ್ಲಿ ಸಂದರ್ಶನ ನಡೆಯಲಿದೆ.ಸ್ಕೌಟಿಂಗ್ ಆ್ಯಂಡ್ ಡ್ಯಾಕ್ಯೂಮೆಂಟೇಷನ್ ಆಫ್ ಗ್ರಾಸ್ ರೂಟ್ಸ್ ಇನ್ನೋವೇಷನ್ ಆ್ಯಂಡ್ ಔಟ್‌ಸ್ಟ್ಯಾಂಡಿಂಗ್ ಟ್ರೆಡಿಷನಲ್ ನಾಲೇಜ್ ಆ್ಯಂಡ್ ಪ್ರಾಕ್ಟೀಸ್ ಆಫ್ ಅಗ್ರಿಕಲ್ಚರ್ ಇನ್ ಕರ್ನಾಟಕ ಸ್ಟೇಟ್ ಯೋಜನೆಯಡಿಯಲ್ಲಿ ಈ ಹುದ್ದೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಒಂದು ವರ್ಷದ ಅವಧಿ ಅಥವಾ ಈ ಯೋಜನೆ ಪೂರ್ಣಗೊಳ್ಳುವವರೆಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಕೃಷಿಯಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದೆ. ಅಗತ್ಯ ಮೂಲ ದಾಖಲಾತಿ, ಧೃಡೀಕೃತ ಪ್ರತಿ, ಭಾವಚಿತ್ರಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ ಎಂದು ಸಹ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.
ಲೇಖನ- ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ತನ್ನ ಹೊಲವನ್ನು ಚೆನ್ನಾಗಿ ಹದ ಮಾಡಿ ಬೀಜ ಬಿತ್ತಿ ಅವುಗಳು ಮೊಳಕೆಯೊಡೆದು ಸಸಿಯಾಗಿ ಹುಲುಸಾಗಿ ದವಸ ಧಾನ್ಯಗಳನ್ನು ಬೆಳೆದು ಮತ್ತೆ ರಾಶಿ ಮಾಡುವ ಮುನ್ನ ವಿಶೇಷ ಅಡುಗೆಗಳನ್ನು ತಯಾರಿಸಿ ಬಂಧು ಬಾಂಧವರೊಡಗೂಡಿ ಭೂಮಿ ತಾಯಿಯ ಪೂಜೆಯನ್ನು ಮಾಡುತ್ತಾನೆ. ಬಂಗಾರದ ಬೆಳೆಯನ್ನು ನೀಡುವ ಭೂಮಿ ತಾಯಿಗೆ ಪೂಜೆಯ ಮೂಲಕ ಆತ ಕೃತಜ್ಞತೆಯನ್ನು ತೋರುತ್ತಾನೆ. ತನ್ನ ಬದುಕಿಗೆ ಆಧಾರವನ್ನು ಮೂಲಭೂತ ಸೌಕರ್ಯವಾದ ಆಹಾರವನ್ನು ನೀಡುವ ಭೂಮಿತಾಯಿಗೆ ಪೂಜೆಯನ್ನು ಮಾಡುವ ಮೂಲಕ ಆತ ಸಂಭ್ರಮ ಪಡುತ್ತಾನೆ. ನಮ್ಮ ಹುಟ್ಟಿಗೆ ಕಾರಣರಾಗಿರುವ ನಮ್ಮ ತಂದೆ ತಾಯಿಗಳು ನಮ್ಮನ್ನು ಲಾಲಿಸಿ ಪಾಲಿಸಿ ಬೆಳೆಸುತ್ತಾರೆ. ನಮ್ಮೆಲ್ಲ ಬೇಕು ಬೇಡಗಳಿಗೆ ಸ್ಪಂದಿಸುವ ನಮ್ಮ ತಂದೆ ತಾಯಿ ತಮ್ಮೆಲ್ಲ ತೊಂದರೆಗಳನ್ನು ಮೀರಿಯೂ ಕೂಡ ನಾವು ಬದುಕಿನಲ್ಲಿ ಮುನ್ನಡೆಯಲು ಸಹಾಯ ಹಸ್ತವನ್ನು ಎಸಗುತ್ತಾರೆ. ಮುಂದೆ ನಾವು ಬದುಕಿನಲ್ಲಿ ಮುಂದೆ ಬಂದು ಉನ್ನತ ಸ್ಥಾನವನ್ನು ಗಳಿಸಿದಾಗ ಹೆಮ್ಮೆಯಿಂದ ಬೀಗುತ್ತಾರೆ. ಅಂತಹ ತಂದೆ ತಾಯಿಗಳಿಗೆ ನಾವು ಕೃತಜ್ಞರಾಗಿರಬೇಕು.ಇದನ್ನು…
