ಉದಯರಶ್ಮಿ ದಿನಪತ್ರಿಕೆ
ಚಡಚಣ: ಸಮೀಪದ ಹಾವಿನಾಳ ಗ್ರಾಮದಲ್ಲಿನ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ 2025–26ನೇ ಸಾಲಿನ ಕಬ್ಬು ನುರಿಸುವ ಹಂಗಾಮವು ಮಾರ್ಚ್ 8. ರಂದು ಮುಕ್ತಾಯಗೊಳ್ಳಲಿದ್ದು, ಈ ಕುರಿತು ಕಾರ್ಖಾನೆ ಆಡಳಿತ ಮಂಡಳಿಯ ಆಡಳಿತಾಧಿಕಾರಿ ರವೀಂದ್ರ ಗಾಯಕವಾಡ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಖಾನೆಯ ಕಾರ್ಯಕ್ಷೇತ್ರದೊಳಗಿನ ಹಾಗೂ ಹೊರಗಿನ ಎಲ್ಲಾ ಕಬ್ಬು ಬೆಳೆಗಾರ ರೈತಬಾಂಧವರು ತಮ್ಮ ನೋಂದಣಿ ಮಾಡಿದ ಕಬ್ಬು ರಸ್ತೆ ತೊಂದರೆ, ಕೌಟುಂಬಿಕ ಅಥವಾ ಇತರೆ ಕಾನೂನು ಸಂಬಂಧಿತ ಕಾರಣಗಳಿಂದಾಗಿ ತಮ್ಮ ಹೊಲದಲ್ಲಿ ಉಳಿದಿದ್ದರೆ, ತಕ್ಷಣವೇ ಸಮೀಪದ ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಕಾರ್ಖಾನೆಯ ವಿಭಾಗೀಯ ಕಾರ್ಯಾಲಯವನ್ನು ಸಂಪರ್ಕಿಸಿ ಮತ್ತು ಕಬ್ಬು ಉಳಿದಿದ್ದರೆ ಸ್ವತಃ ತಾವೆ ಕಟಾವು ಮಾಡಿ ಕಾರ್ಖಾನೆಗೆ ಕಳುಹಿಸುವಂತೆ ಸೂಚಿಸಿದ್ದಾರೆ.
ಹಂಗಾಮ ಮುಕ್ತಾಯವಾದ ನಂತರವೂ ಅಂದರೆ ಮಾರ್ಚ 8 ರ ನಂತರ ಕಬ್ಬು ಹೊಲದಲ್ಲಿ ಉಳಿದಿದ್ದರೆ, ಅದರ ನಷ್ಟಕ್ಕೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲಿ ಜವಾಬ್ದಾರರಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಕೃಷಿ ಸಂಪರ್ಕ ಅಧಿಕಾರಿಯ ಮೋಬೈಲ್ ಸಂಖ್ಯೆಯನ್ನು 9112215012, 7972682075, 9112215054 ಹಾಗೂ 9112215046 ಕೂಡಲೆ ಸಂಪರ್ಕಿಸಲು ರೈತರಿಗೆ ಆಡಳಿತಾಧಿಕಾರಿ ರವೀಂದ್ರ ಗಾಯಕವಾಡ ಅವರು ಮನವಿಯನ್ನು ಮಾಡಿದ್ದಾರೆ.

