ಮಮದಾಪುರದಲ್ಲಿ ಗ್ರಾಪಂ ಕಾರ್ಯಾಲಯ, ಗೋದಾಮು ಕಟ್ಟಡ, ಅಗಸಿ ಬಾಗಿಲು ಹಾಗೂ ಬಸ್ ತಂಗುದಾಣ ಲೋಕಾರ್ಪಣೆ ಮಾಡಿದ ಸಚಿವ ಎಂ.ಬಿ.ಪಾಟೀಲ ಹೇಳಿಕೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಗ್ರಾಮ ಪಂಚಾಯಿತಿಗಳಲ್ಲಿ ಮೂಲಸೌಲಭ್ಯಗಳನ್ನು ಒದಗಿಸುವ ಮೂಲಕ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಸೋಮವಾರ ಬಬಲೇಶ್ವರ ತಾಲೂಕಿನ ಮಮದಾಪುರದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ, ಗೋದಾಮು ಕಟ್ಟಡ, ಅಗಸಿ ಬಾಗಿಲು ಹಾಗೂ ಬಸ್ ತಂಗುದಾಣ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮಮದಾಪುರದಲ್ಲಿ ಸಿಎಸ್ಆರ್ ಅನುದಾನದಡಿ ಶಾಲೆಗಳು, ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಗ್ರಾಮ ಆಡಳಿತವನ್ನು ಮತ್ತಷ್ಟು ಬಲಪಡಿಸಿ, ಸಾರ್ವಜನಿಕರಿಗೆ ಸುಲಭ ಮತ್ತು ಸಮರ್ಥ ಸೇವೆ ದೊರಕುವಂತೆ ಮಾಡಲಾಗುತ್ತಿದೆ. ಗ್ರಾಮಾಭಿವೃದ್ಧಿಯ ದಿಸೆಯಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಮಮದಾಪುರ ಗ್ರಾಮ ವಿದ್ಯಾಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ರೈತರು ಮತ್ತು ರೈತ ಮಹಿಳೆಯರು ಕೃಷಿಯ ಜೊತೆಗೆ ಆರೋಗ್ಯದ ಕಡೆಗೂ ಗಮನ ನೀಡಬೇಕು. ಸುಂದರ ಪರಿಸರದಲ್ಲಿ ವಾಯುವಿಹಾರ ಮಾಡಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಮದಾಪುರ ವಿರಕ್ತಮಠದ ಶ್ರೀ ಮುರುಘೇಂದ್ರ ಮಹಾಸ್ವಾಮಿಗಳು, ಮುಖಂಡರಾದ ಬಸವರಾಜ ದೇಸಾಯಿ, ಕುಮಾರ ದೇಸಾಯಿ, ಈರಣ್ಣ ಕೊಪ್ಪದ, ಎಚ್. ಬಿ. ಹರನಟ್ಟಿ ಕೊಡಬಾಗಿ, ಬಿ. ಡಿ. ಪಾಟೀಲ ಹೊಸೂರ, ಮಧುರಾಜ ಕುಲಕರ್ಣಿ, ಕಿಟ್ಟು ಕುಲಕರ್ಣಿ, ರಫೀಕ್ ಅಹ್ಮದ್ ಕಾಣಿ, ಚಾಂದಸಾಬ ರ. ಟಕ್ಕಳಕಿ, ಕೌಸರ್ ನಿಯಾಜ ಅತ್ತಾರ, ಮಲ್ಲಿಕಾರ್ಜುನ ಗಂಗೂರ, ಹುಸೇನ್ ಕೀಜಿ ಶಬ್ಬೀರ್ ಕೀಜಿ ಮಲ್ಲು ಗಡ್ಡದಮಠ, ಉಪ್ಪಲದಿನ್ನಿ, ಹಂಚಿನಾಳ ಪಿ. ಎಂ. ಹಂಗರಗಿ, ಜೈನಾಪುರ ಮಂಗಳೂರು, ತಾಜಪುರ ಪಿ. ಎಂ., ಲಿಂಗದಳ್ಳಿ, ದೇವರ ಗೇಣ್ಣೂರ, ದೇವಾಪುರ ಜಂಬಗಿ ಎಚ್. ಕಣಬೂರ ಸುತಗುಂಡಿ ಸೇರಿದಂತೆ ನಾನಾ ಗ್ರಾಮದ ಮುಖಂಡರು, ಮಹಿಳೆಯರು, ಯುವಕರು ಉಪಸ್ಥಿತರಿದ್ದರು.

