ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಪಟ್ಟಣದ ಸಮೀಪ ಇರುವ ಮಾಲಹಳ್ಳಿ ಗ್ರಾಮದ ರೈತ ಸಾಹೇಬಗೌಡ ಪೋಲೀಸ್ ಪಾಟೀಲ್ ಇವರ ಸುಪುತ್ರಿ ವಿದ್ಯಾಶ್ರೀ ಪಾಟೀಲ್ ವಿಜಯಪುರದ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8 ನೇ ತರಗತಿ ಓದುತ್ತಿದ್ದ, ಇತ್ತೀಚೆಗೆ ಉತ್ಕರ್ಷ ಯೋಗಾ ಸ್ಟಡಿ ರಿಸರ್ಚ್ ಸೆಂಟರ್ ವತಿಯಿಂದ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಯೋಗ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಹಿರೇಮಠದ ಪೀಠಾಧಿಪತಿ ಷ ಬ್ರ ಶ್ರೀ ಚನ್ನಬಸವ ಶಿವಾಚಾರ್ಯರು, ಉಪನ್ಯಾಸಕ ಡಾ ಯಂಕನಗೌಡ ಪಾಟೀಲ್, ಪತ್ರಕರ್ತ ಸಾಹಿತಿ ವೀರಣ್ಣ ಕಲಿಕೇರಿ, ಶಿಕ್ಷಕ ಸಾಹಿತಿ ಶರಣಯ್ಯ ಹಾಗೂ ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಿಕ್ಷಕರು ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತಪಡಿಸಿದ್ದಾರೆ.

