Author: editor.udayarashmi@gmail.com

ಬಸವನಬಾಗೇವಾಡಿ: ಅಖಂಡ ಕರ್ನಾಟಕ ರೈತ ಸಂಘ ಹಲವಾರು ಸಲ ಮನವಿ ಸಲ್ಲಿಸಿದ ಮೇರೆಗೆ ನೀರಾವರಿ ಸಲಹಾ ಸಮಿತಿಯು ಮುಂಗಾರು ಹಂಗಾಮಿನ ಬೆಳೆಗಳಿಗೆ ಹಾಗೂ ಕೆರೆಗಳ ಭರ್ತಿಗಾಗಿ ಕಾಲುವೆ ಮೂಲಕ ನೀರು ಹರಿಸಲು ತೀರ್ಮಾನದಂತೆ ಸಧ್ಯ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ತಾಲೂಕಿನ ಹೂವಿನಹಿಪ್ಪರಗಿ ಸಮೀಪದ ಸಂಕನಾಳ ಶಾಖಾ ಕಾಲುವೆಗೆ ನೀರು ಹರಿಸಲಾಗುತ್ತಿದ್ದರೂ ಈ ಭಾಗದ ಅಗಸಬಾಳ ಹಾಗೂ ಹೂವಿನಹಿಪ್ಪರಗಿ ಕೆರೆಗಳಿಗೆ ಇದುವರೆಗೂ ಒಂದು ಹನಿ ನೀರು ತಲುಪಿಲ್ಲ. ಇದರ ಬದಲು ಹಳ್ಳಕ್ಕೆ ನೀರು ಹರಿಸಲಾಗುತ್ತದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕೆರೆಗಳಿಗೆ ನೀರು ಬಾರದೇ ಇರುವುದರಿಂದಾಗಿ ಜಾನುವಾರುಗಳಿಗೆ, ಕುಡಿಯಲು ನೀರಿಗೆ ತತ್ವಾರ ಉಂಟಾಗುತ್ತದೆ. ಕೆಬಿಜೆಎನ್‌ಎಲ್ ಅಧಿಕಾರಿಗಳು ಈ ವಿಷಯದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಎರಡು ಕೆರೆಗಳಿಗೆ ನೀರು ತುಂಬಲು ಪೈಪ್‌ಲೈನ್ ಕಾಮಗಾರಿ ಆರಂಭಿಸಿದರೂ ಈ ಕಾಮಗಾರಿ ವಿಳಂಬವಾಗಿರುವ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ೨೫೦ ಮೀಟರ್‌ವರೆಗೆ ಹ್ಯಾಳ ನಿರ್ಮಿಸಿ ಕೆರೆಗಳಿಗೆ ನೀರು ತುಂಬಿಸಲು…

Read More

ಬಸವನಬಾಗೇವಾಡಿ: ಕಳೆದ 50 ವರ್ಷದಿಂದ ಸಾಮಾಜಿಕ ಹಾಗೂ ಸಾಹಿತ್ಯ ಸೇವೆಯನ್ನು ಮಾಡುತ್ತಿರುವ 82 ವರ್ಷದ ವಯೋವೃದ್ಧರಾದ ಸಿಂದಗಿಯ ನಾಡಿನ ಖ್ಯಾತ ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರಿಗೆ ಈ ವರ್ಷ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಹಂಗರಗಿಯ ಚನ್ನಬಸವೇಶ್ವರ ಪ್ರತಿಷ್ಠಾನದ ಅಧ್ಯಕ್ಷ, ಸಾಹಿತಿ ವಿವೇಕಾನಂದ ಕಲ್ಯಾಣಶೆಟ್ಟಿ ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ಹಲವಾರು ವರ್ಷಗಳಿಂದ ಮಕ್ಕಳ ಧ್ವನಿಯಾಗಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಸಾಹಿತ್ಯದ ಮೂಲಕ ತಮ್ಮದೇ ಆದ ಸೇವೆಯನ್ನು ನೀಡುತ್ತಿರುವ ಪೂಜಾರ ಅವರು ಕನ್ನಡ ನಾಡಿನ ಆಸ್ತಿಯಾಗಿದ್ದಾರೆ. ಯಾವುದೇ ಅಪೇಕ್ಷೆಗಳಿಲ್ಲದೇ ತೆರೆಮರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರ ಸೇವೆಯನ್ನು ಸರ್ಕಾರ ಗುರುತಿಸಬೇಕು. ಅರ್ಜಿ ಹಾಕದೇ ಇರುವ ಸಾಧಕರಿಗೆ ಪ್ರಶಸ್ತಿಯನ್ನು ನೀಡಲಾಗುವುದೆಂದು ಸರಕಾರ ಹೇಳಿದೆ. ಈ ನಿಟ್ಟಿನಲ್ಲಿ ಕನ್ನಡ ನಾಡುಗಳಿಗೆ ಸೇವೆ ಸಲ್ಲಿಸಿ ಹಲವಾರು ಮಕ್ಕಳ ಪುಸ್ತಕಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಶಂ.ಗು. ಬಿರಾದಾರ ಅವರೊಂದಿಗೆ ಸಾಹಿತ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅವರು ಯಾವುದೇ ಅಪೇಕ್ಷೆ ಇಲ್ಲದೆ ಕಾರ್ಯನಿರ್ವಹಿಸಿದ್ದಾರೆ. ಈ…

Read More

ಕಿತ್ತೂರು ಚನ್ನಮ್ಮಾಜಿಯ ಜಯಂತೋತ್ಸವ ಉದ್ಘಾಟಿಸಿದ ಸಚಿವ ಶಿವಾನಂದ ಪಾಟೀಲ ಬಸವನಬಾಗೇವಾಡಿ: ದೇಶದಲ್ಲಿ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ ವೀರವನಿತೆ ಕಿತ್ತೂರು ರಾಣಿ ಚನ್ನಮ್ಮ ಒಂದೇ ಜಾತಿಗೆ ಸೀಮಿತವಾಗಿಲ್ಲ. ಅವಳು ರಾಷ್ಟ್ರದ ಮಹಿಳೆಯಾಗಿದ್ದಾಳೆ. ಅವಳ ಕೆಚ್ಚೆದೆ, ಧೀರತನ ಎಲ್ಲರಿಗೂ ಪ್ರೇರಣಾದಾಯಕವಾಗಿದೆ ಎಂದು ಕೈಮಗ್ಗ ಮತ್ತು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕು ಪಂಚಮಸಾಲಿ ಸಮಾಜದಿಂದ ಸೋಮವಾರ ಹಮ್ಮಿಕೊಂಡಿದ್ದ ವೀರರಾಣಿ ಕಿತ್ತೂರು ಚನ್ನಮ್ಮಾಜಿಯ ೨೪೫ ನೇ ಜಯಂತೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತಿಹಾಸದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ರಾಣಿ ಝಾಂನ್ಸಿ ಲಕ್ಷ್ಮೀಬಾಯಿ ಅವರು ಶಕ್ತಿಶಾಲಿ ವೀರವನಿತೆಯರು ಎಂಬುವದನ್ನು ಸಾಬೀತು ಪಡಿಸಿದ್ದಾರೆ. ರಾಣಿ ಚನ್ನಮ್ಮ ಆತ್ಮಾಭಿಮಾನದ ಪ್ರತೀಕವಾಗಿದ್ದಾಳೆ. ಇಂತಹ ವೀರವನಿತೆಯರು ಇಡೀ ಸಮಾಜಕ್ಕೆ ಮಾರ್ಗದರ್ಶಿಯಾಗುವ ಮೂಲಕ ಸಮಾಜದ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಮುಂದಿನ ಪೀಳಿಗೆಗೆ ವೀರರಾಣಿ ಕಿತ್ತೂರು ಚನ್ನಮ್ಮಳ ಸಂದೇಶವನ್ನು ಮುಟ್ಟಿಸುವ ನಿಟ್ಟಿನಲ್ಲಿ ಅವಳ ಮೂರ್ತಿಯನ್ನು ಬಸವನಬಾಗೇವಾಡಿ ಪಟ್ಟಣದಲ್ಲಿ ಪಂಚಮಸಾಲಿ ಸಮಾಜದಿಂದ ಪ್ರತಿಷ್ಠಾಪನೆ ಮಾಡುತ್ತಿರುವುದು…

Read More

ಕೊಲ್ಹಾರ: ಪಟ್ಟಣದ ದೇಸಾಯಿ ಮನೆತನದವರಿಂದ ೯ ದಿನಗಳ ಕಾಲ ನವರಾತ್ರಿ ಉತ್ಸವ ಅತೀ ವಿಜ್ರಂಭಣೆಯಿಂದ ಜರುಗಿ ಮಂಗಳವಾರ ಮೈಸೂರು ಅರಸರ ಸಂಪ್ರದಾಯದಂತೆ ವಿಜಯನಗರ ಸಾಮ್ರಾಜ್ಯದ ಸಂಕಲ್ಪದಂತೆ ಬನ್ನಿ ಮಹಾಂಕಾಳಿ ಮರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಜರುಗಿತು.ದೇಸಾಯಿಯವರ ಎಲ್ಲ ಆಯುಧಗಳನ್ನು ಖಾಸಗಿ ಹಾಗೂ ಸರಕಾರಿ ಪ್ರತಿನಿಧಿಗಳ, ಊರಿನ ಪ್ರಮುಖರ ಮೂಲಕ ರಾಜ ಬೀದಿಯಲ್ಲಿ ಸಂಚರಿಸಿ ಎರಡು ಕಿ.ಮೀ ದೂರದ ಉದ್ದಕ್ಕೂ ಮುತೈದೆಯರ ಆರತಿಯೊಂದಿಗೆ ಬಾಜಾ ಭಜಂತ್ರಿಯ ವಾದ್ಯ ಮೇಳದೊಂದಿಗೆ ಮೆರವಣಿಗೆಯು ಹಣುಮಂತ ದೇವರ ಹತ್ತಿರ ನೂತನವಾಗಿ ಕಟ್ಟಿಸಿರುವ ಬನ್ನಿ ಮಂಟಪಕ್ಕೆ (ಬನ್ನಿ ಕಟ್ಟೆ) ತಲುಪಿ ಬನ್ನಿ ಮರಕ್ಕೆ ಹರಗುರು ಶ್ರೀಗಳ ಹಾಗೂ ರಾಜ ವಂಶಸ್ಥರಾದ ದೇಸಾಯಿಯವರ ಸಮ್ಮುಖದಲ್ಲಿ ಪೂಜಾ ವಿಧಿ ವಿಧಾನ ವೇದ ಮಂತ್ರಗಳೊಂದಿಗೆ ನೆರವೇರಿತು.ಪಟ್ಟಣದ ಸಕಲ ಸರ್ವ ಸಮಾಜದ ಗುರು ಹಿರಿಯರು ಮತ್ತು ನೂರಾರು ಜನರು ವಿಜ್ರಂಭಣೆಯ ಬನ್ನಿ ಪೂಜೆಯಲ್ಲಿ ಪಾಲ್ಗೊಂಡರು.ಈ ಸಂದರ್ಭದಲ್ಲಿ ವೇದ ಮೂರ್ತಿ ಮುರುಘೇಂಧ್ರ ಹಿರೇಮಠ, ಕಲ್ಲಿನಾಥ ದೇವರು ದಿಗಂಬರೇಶ್ವರ ಮಠ, ದೇಸಾಯಿ ಮನೆತನದವರಾದ ವಿನೀತಕುಮಾರ ದೇಸಾಯಿ, ವಿನಾಯಕ…

Read More

ಮುದ್ದೇಬಿಹಾಳ ಪ್ರೀಮಿಯರ್ ಲೀಗ್-೬ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಉದ್ಘಾಟನೆ ಮುದ್ದೇಬಿಹಾಳ: ಮೊಬೈಲ್ ಹಾವಳಿಯಿಂದ ದೈಹಿಕ ಸಾಮರ್ಥ್ಯ ಹೆಚ್ಚಿಸುವ ಕ್ರೀಡೆಗಳಿಗೆ ಬೆಲೆ ಇಲ್ಲದಂತಾಗಿದೆ. ಕಣ್ಣುಗಳನ್ನು ಹಾಳು ಮಾಡಿಕೊಂಡು ಆಟವಾಡುವ ಬದಲು ದೈಹಿಕವಾಗಿ ಸಧೃಢರಾಗುವ ಆಟಗಳನ್ನು ಆಡಲು ಈಗಿನ ಯುವಕರು ಮುಂದಾಗಬೇಕು ಎಂದು ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಹೇಳಿದರು.ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿ ಆಯೋಜಿಸಲಾದ ಮುದ್ದೇಬಿಹಾಳ ಪ್ರೀಮಿಯರ್ ಲೀಗ್ ಸೀಸನ್-೬ ಹೊನಲು ಬೆಳಕಿನ ಕ್ರಿಕೇಟ್ ಪಂದ್ಯಾವಳಿಗಳನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಮೊಬೈಲ್ ಬಳಕೆಯಿಂದ ಅದೆಷ್ಟೋ ಯುವಕರು ಬೇರೆ ಹಾದಿ ಹಿಡಿಯುತ್ತಿದ್ದಾರೆ. ಜೂಜಾಟದಂತಹ ಆಟಗಳನ್ನಾಡಿ ತಮ್ಮ ಆಸ್ತಿ-ಅಂತಸ್ತನ್ನು ಹಾಳು ಮಾಡಿಕೊಳ್ಳುತ್ತಿರುವ ಉದಾಹರಣೆಗಳನ್ನು ದಿನಂಪ್ರತಿ ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಇವರ ಮಧ್ಯೆ ಪಟ್ಟಣದ ಯುವಕರ ತಂಡ ಕಳೆದ ೬ ವರ್ಷಗಳಿಂದ ಕ್ರಿಕೇಟ್ ಟೂರ್ನಾಮೆಂಟ್ ನ್ನು ಹಮ್ಮಿಕೊಳ್ಳುತ್ತ ಮಾದರಿಯಾಗಿದ್ದಾರೆ. ಮೇಲಿಂದ ಮೇಲೆ ಅಲ್ಲಲ್ಲಿ ಇಂತಹ ಟೂರ್ನಾಮೆಂಟಗಳು ನಡೆಯುತ್ತಿದ್ದರೆ ಯುವಕರು ದುಶ್ಚಟಗಳತ್ತ ಸಾಗುವದನ್ನು ತಪ್ಪಿಸಬಹುದು ಎಂದರು.ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ ಮಾತನಾಡಿದರು.ಕಾಂಗ್ರೇಸ್ ಮುಖಂಡ ಶಾಂತಗೌಡ…

Read More

ಮುದ್ದೇಬಿಹಾಳ : ಪಟ್ಟಣದ ವಿಬಿಸಿ ಹೈಸ್ಕೂಲ್ ಮೈದಾನದಲ್ಲಿರುವ ಬನ್ನಿಮಂಟಪದಲ್ಲಿ ಎಲ್ಲ ಬಾಂಧವರು ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ದಸರಾ ಹಬ್ಬವನ್ನು ಆಚರಿಸಲಾಯಿತು. ಆಯುಧಪೂಜೆಯ ಅಂಗವಾಗಿ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಚಂಡು ಹೂವು ಸೇರಿಂದತೆ ಮತ್ತೀತರ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು.ಮಂಗಳವಾರ ಬನ್ನಿ ವಿನಿಮಯ ಕಾರ್ಯಕ್ರಮ ನಡೆಯಿತು. ಉತ್ಸಾಹ ಭರಿತರಾಗಿ ಹೊಸ ಹೊಸ ಬಟ್ಟೆಗಳನ್ನು ತೊಟ್ಟು ಜಾತಿ. ಮತ. ಪಂಥ ಎನ್ನದೇ ಪಟ್ಟಣದ ಕಿಲ್ಲಾಗಲ್ಲಿಯಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಎಲ್ಲ ಸಮಾಜಗಳ ಮುಖಂಡರು ಕೂಡಿ ಚಾಮುಂಡಿ ತಾಯಿಯ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಸರಾಫ್ ಬಜಾರ, ಮುಖ್ಯ ಬಜಾರ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಮಾರ್ಗವಾಗಿ ವಿಬಿಸಿ ಹೌಸ್ಕೂಲ್ ಮೈದಾನದಲ್ಲಿರುವ ಬನ್ನಿ ಮಂಟಪಕ್ಕೆ ಬಂದು ಊರಿನ ಗೌಡರಾದ ರಾಯನಗೌಡ್ರು ಮತ್ತು ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳ ಸಮ್ಮುಖದಲ್ಲಿ ಬನ್ನಿ ಮುಡಿಯುವಿಕೆಯನ್ನು ನೆರವೇರಿಸಿ, ಬನ್ನಿ ಮಹಾಂಕಾಳಿಗೆ ವಿಶೇಶ ಪೂಜೆ ಸಲ್ಲಿಸಿದರು. ನಾವು ನೀವು ಬಂಗಾರದಂಗ ಇರೋಣ ಎನ್ನುತ್ತ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು…

Read More

ಮುದ್ದೇಬಿಹಾಳ: ಪಟ್ಟಣದ ಬಸವ ನಗರದ ಮಕ್ಕಳು ದಸರಾ ಹಬ್ಬದ ಪ್ರಯುಕ್ತ ದೇವಿಯರ ವಿಶೇಷ ಉಡುಪುಗಳನ್ನು ತೊಟ್ಟು ಇಲ್ಲಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬನ್ನಿ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ಈ ವೇಳೆ ಬೇನಿ ಇರಕಲ್, ಕಾವ್ಯ ಹೂಲಗೇರಿ, ಸಂಗೀತಾ ರಾಠೋಡ, ಲಕ್ಷ್ಮೀ ಬಡಿಗೇರ, ಜ್ಯೋತಿ ದುದಾನಿ, ಶಕುಂತಲಾ ಹಿರೇಮಠ ಸೇರಿದಂತೆ ಮತ್ತೀತರರು ಇದ್ದರು.

Read More

ವಿಜಯಪುರ: ನಗರ ಶಾಸಕ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಕಚೇರಿ ಕಾರ್ಯ ನಿಮಿತ್ತ ಅನಿವಾರ್ಯ ಕಾರಣಗಳಿಂದ ಬೆಂಗಳೂರಿಗೆ ಹೋಗಬೇಕಾಗಿರುವುದರಿಂದ, ಅ.25 ರ ಬುಧವಾರದಂದು, ಸಿಂದಗಿ ರಸ್ತೆಯ ಅವರ ನಿವಾಸದಲ್ಲಿ ಬನ್ನಿ ವಿನಿಮಯ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಿಲ್ಲ.ಕಾರಣ ರೈತರು, ಅಭಿಮಾನಿಗಳು, ಕಾರ್ಯಕರ್ತರು, ಹಿತೈಷಿಗಳು ಸಹಕರಿಸಬೇಕು. ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು ಹಾಗೂ ಶ್ರೀ ಶಿವಯೋಗಿ ಸಿದ್ದರಾಮೇಶ್ವರರು ತಮಗೂ ತಮ್ಮ ಕುಟುಂಬಕ್ಕೂ ಆರೋಗ್ಯ, ಸುಖ, ಶಾಂತಿ, ಸಮೃದ್ದಿ, ಅಷ್ಟ ಐಶ್ವರ್ಯ ಭಾಗ್ಯ ದಯಪಾಲಿಸಲಿ ಎಂದು ಹಾರೈಸಿದ್ದಾರೆ.

Read More

ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟದಿಂದ 25 ಜನ ನಿವೃತ್ತ ಚಿತ್ರಕಲಾ ಶಿಕ್ಷಕರಿಗೆ ಸನ್ಮಾನ ವಿಜಯಪುರ: ನಮ್ಮ ದೇಶಿಯ ಭವ್ಯ ಪರಂಪರೆ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಚಿತ್ರಕಲೆ ಅಭೂತಮಯ ಸಾಧನವಾಗಿದೆ. ಮಕ್ಕಳಲ್ಲಿ ನವಿರೋತ್ಸವದ ರಸದೌತಣ ನೀಡಿ ಕಲಿಕೋತ್ಸವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಹೇಳಿದರು.ನಗರದ ಬಾಲಕರ ಸರಕಾರಿ ಪದವಿಪೂರ್ವ ಕಾಲೇಜು ಆರ್ಟ ಗ್ಯಾಲರಿ ಸಭಾಭವನದಲ್ಲಿ ಕನಾ೯ಟಕ ರಾಜ್ಯ ಪ್ರೌಢಶಾಲಾ ಚಿತ್ರಕಲಾ ಶಿಕ್ಷಣ ಶಿಕ್ಷಕರ ಒಕ್ಕೂಟ ಕೇಂದ್ರ ಕಚೇರಿ ವಿಜಯಪುರ ಆಶ್ರಯದಲ್ಲಿ ನಡೆದ ಜಿಲ್ಲೆಯ ನಿವೃತ್ತ 25 ಚಿತ್ರಕಲಾ ಶಿಕ್ಷಕರ ಹಾಗೂ ಮೂವರು ವಿಶೇಷ ಸಾಧಕರ ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದ ಅವರು, ಚಿತ್ರಕಲಾ ಶಿಕ್ಷಣ ಮಗುವಿನ ಸವ೯ತೋಮುಖ ಬೆಳವಣಿಗೆಯಲ್ಲಿ ಬಹಳಷ್ಟು ಅದಮ್ಯ ಪಾತ್ರ ವಹಿಸುತ್ತದೆ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಇಲಕಲ್ ವಿಜಯ ಮಹಾಂತೇಶ ಚಿತ್ರಕಲಾ ಮಹಾವಿದ್ಯಾಲಯದ ಸಂಸ್ಥಾಪಕ, ಪ್ರಾಂಶುಪಾಲ ಡಾ,ಬಸವರಾಜ್ ಗವಿಮಠ, ಇಂದಿನ ಕಲಾ ಶಿಕ್ಷಣ ಕ್ಷೇತ್ರದ ಡಿಜಿಟಲ್ ಯುಗದಲ್ಲಿ ವಿಪುಲ…

Read More

ವಿಜಯಪುರ: ದಸರಾ ಹಿನ್ನೆಲೆಯಲ್ಲಿ ಬೃಹತ್ ಮತ್ತು ಮಾದ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ‌ ಅವರು ಇಂದು ಮಂಗಳವಾರ ಸಂಜೆ ತಮ್ಮ ತಾಯಿಯವರಾದ ಕಮಲಾಬಾಯಿ ಅವರನ್ನು ಭೇಟಿ ಮಾಡಿದರು.ದಸರಾ ಹಿನ್ನೆಲೆಯಲ್ಲಿ ತಾಯಿಗೆ ಬನ್ನಿ ನೀಡಿದ ಸಚಿವರು ಅಶೀರ್ವಾದ ಪಡೆದರು.

Read More