ಕೊಲ್ಹಾರ: ನಾಡು -ನುಡಿ, ನೆಲ-ಜಲ, ಸಂಸ್ಕೃತಿ-ಪರಂಪರೆ ಪರಿಚಯಿಸುವ ಕಾರ್ಯವನ್ನು ತಾಯಿ ಭುವನೇಶ್ವರಿಯನ್ನು ಹೊತ್ತ ಕನ್ನಡದ ರಥವು ರಾಜ್ಯಾದ್ಯಂತ ಕನ್ನಡದ ಕಂಪು ಬೀರುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ತಾಲೂಕಿನ ಮಸೂತಿ ಗ್ರಾಮದಲ್ಲಿ ಕನ್ನಡ ರಥವನ್ನು ಸಾವಿರಾರು ವಿದ್ಯಾರ್ಥಿಗಳು ಸಾರ್ವಜನಿಕರು. ಸಾಹಿತಿಗಳು ಶಿಕ್ಷಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಕಾರ್ಯಕ್ರಮ ಆಯೋಜಿಸಿದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ, ಕನ್ನಡ ನಮ್ಮ ಅನ್ನದ ಭಾಷೆ, ಆಡಳಿತ ಭಾಷೆ, ಮಾತೃ ಭಾಷೆಯಾಗಿದ್ದರಿಂದ ಕನ್ನಡವನ್ನು ಬೆಳೆಸೋಣ ಎಂದರು.
ಕೊಲ್ಹಾರ ತಹಸೀಲ್ದಾರ ಎಸ್ ಎಸ ನಾಯಕಲಮಠ ಮಾತನಾಡಿ, ಮೈಸೂರು ರಾಜ್ಯ ಬದಲಾಯಿಸಿ ಕರ್ನಾಟಕವೆಂದು ಹೊಸ ಹೆಸರನ್ನು ನಾಮಕರಣ ಮಾಡಿ ಐವತ್ತು ವರ್ಷ ಗತಿಸಿದರಿಂದ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ನಾಡಿನಾದ್ಯಾಂತ ಭುವನೇಶ್ವರಿ ಹೊತ್ತ ಕನ್ನಡ ರಥ ಜಾಥಾ ಮಸೂತಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ್ದು ಅತ್ಯಂತ ಸಂತಸ ಉಂಟಾಗಿದೆ ಎಂದರು.
ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಜಗದೀಶ ಸಾಲಳ್ಳಿ ಮಾತನಾಡಿ, ಕನ್ನಡ ಸಾಹಿತ್ಯ ಇತರ ಸಾಹಿತ್ಯಗಳಿಗಿಂತ ಶ್ರೇಷ್ಠವಾಗಿದ್ದು, ಅತಿ ಹೆಚ್ಚಿನ ಜ್ಞಾನಪೀಠ ಪ್ರಶಸ್ತಿ ಪುರಸೃತರನ್ನು ಹೊಂದಿ ನಾಡಿಗೆ ಗೌರವ ಬಂದಿದೆ ಎಂದರು.
ಕಸಾಪ ತಾಲೂಕ ಅಧ್ಯಕ್ಷ ಅಶೋಕ ಆಸಂಗಿ, ದಯಾನಂದ ಹಿರೇಮಠ. ಎಸ್ ಎಸ್ ಗೌರಿ, ಸಂತೋಷ ಗಣಾಚಾರಿ, ರಾಜೇಸಾಬ ಶಿವನಗುತ್ತಿ ಮಾತನಾಡಿದರು. ಬಸವರಾಜ ಪಾಟೀಲ, ಎಸ ಎಸ್ ಬರಗಿ, ವಾಯ್ ಕೆ ಹೂಗಾರ, ಸಿ ಪಿ ಪಾಟೀಲ, ಶಿವಪ್ಪಾ ಹಂಗರಗಿ, ಕೃಷ್ಣ ವಾರೇಸ್, ರಮೇಶ ಕಾಗಲ, ಮೋಹನಗೌಡ ಪಾಟೀಲ, ಸವಿತಾ ಮಾದರ, ಆಯ್ ಜಿ ಹೊಸಮನಿ, ಎಚ್ ಆರ್ ರಾಠೋಡ, ಶರಣಗೌಡ ಬಿರಾದಾರ, ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

