ಸಿಂದಗಿ: ಪುರಸಭೆ ವ್ಯಾಪ್ತಿಯಲ್ಲಿ ಬರುವ ಪದವಿ/ಸ್ನಾತಕೋತ್ತರ/ಡಿಪ್ಲೋಮಾ ಮುಗಿಸಿದ ವಿದ್ಯಾರ್ಥಿಗಳಿಗೆ ಡೆ-ನಲ್ಮ್ ಅಭಿಯಾನ ಮತ್ತು ಪಿ.ಎಮ್ ಸ್ವನಿಧಿ ಯೋಜನೆ ಅಡಿ ನಗರ ಕಲಿಕಾ ಪ್ರಾಯೋಗಿಕ ತರಬೇತಿ ಕಾರ್ಯಕ್ರಮವನ್ನು ೨೦೨೩-೨೪ ನೇ ಸಾಲಿಗೆ ಅನುಷ್ಠಾನಗೊಳಿಸಲು ಸಿಂದಗಿ ಪುರಸಭೆಗೆ ೦೪ ಗುರಿ ನಿಗದಿಪಡಿಸಿದ್ದು, ಡೇ- ನಲ್ಕ್ ಅಭಿಯಾನದ ಉಪಘಟಕಗಳು ಮತ್ತು ಪಿ.ಎಮ್ ಸ್ವನಿಧಿ ಯೋಜನೆ ಅಡಿ ಬೀದಿ ವ್ಯಾಪಾರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವುದು ಈ ತರಬೇತಿಯ ಪ್ರಮುಖ ಉದ್ದೇಶವಾಗಿದೆ. ಕಾರಣ ಪದವಿ/ಸ್ನಾತಕೋತ್ತರ/ಡಿಪ್ಲೋಮಾ ಮುಗಿಸಿದ ಆಸಕ್ತಿಯುಳ್ಳ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲಾತಿಗಳೊಂದಿಗೆ ಫೆ.೧೫ರಂದು ಸಾಯಂಕಾಲ ೦೫:೦೦ ಘಂಟೆಯೊಳಗಾಗಿ ಇಂಟರ್ನ್ಶಿಪ್ ತರಬೇತಿಗಾಗಿ ಅರ್ಜಿಯನ್ನು ಸಿಂದಗಿ ಪುರಸಭೆಯ ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಡೇ-ನಲ್ಮ್ ಶಾಖೆಯನ್ನು ಸಂಪರ್ಕಿಸಲು ಕೋರಲಾಗಿದೆ ಎಂದು ಪುರಸಭೆ ಮುಖ್ಯಧಿಕಾರ ಗುರುರಾಜ ಚೌಕಿಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
