ಸಿಂದಗಿ: ರಾಜ್ಯ ಸರಕಾರ ಹೊರಡಿಸಿದ ಸಂವಿಧಾನ ಜಾಗೃತಿ ರಥವನ್ನು ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರು ಅದ್ದೂರಿಯಾಗಿ ಸ್ವಾಗತಿಸಿಕೊಂಡು ಸಂವಿಧಾನದ ಅರಿವು ಮೂಡಿಸುವಂತ ಕಾರ್ಯಕ್ರಮಗಳು ಅನಾವರಣಗೊಳ್ಳಬೇಕು ಎಂದು ವಿಜಯಪುರ ಆಹಾರ ವಿಬಾಗದ ಜಿಲ್ಲಾಧಿಕಾರಿ ವಿನಯ ಪಾಟೀಲ ಹೇಳಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಂಡ ಸಂವಿಧಾನ ಜಾಗೃತಿ ಜಾಥಾದ ಪೂರ್ವಬಾವಿ ಸಭೆಯ ಅದ್ಯಕ್ಷತೆ ವಹಿಸಿ ಮಾತನಾಡಿ, ಸಂವಿಧಾನದ ಮೂಲಭೂತ ಹಕ್ಕುಗಳ ಬಗ್ಗೆ ತಿಳೀದುಕೊಂಡು ಮತ್ತೊಬ್ಬರಿಗೆ ಅರಿವು ಮೂಡಿಸುವದು ಮತ್ತು ಸರಕಾರದಿಂದ ಹಮ್ಮಿಕೊಂಡ ೫ ಗ್ಯಾರೆಂಟಿಗಳ ಬಗ್ಗೆ ಮಾಹಿತಿ ನೀಡುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದ್ದು ಈ ತಾಲೂಕಿನಲ್ಲಿ ೧೬ ಗ್ರಾಂ ಪ ಹಾಗೂ ೧ ಪುರಸಭೆಯಲ್ಲಿ ೪ ದಿನಗಳ ಕಾಲ ಈ ರಥ ಸಂಚರಿಸುತ್ತದೆ ಕಾರಣ ಯಾವುದೇ ಜಾತಿಗೆ ಸಿಮೀತವಾಗದೇ ಎಲ್ಲರು ಸ್ವ ಇಚ್ಚೇಯಿಂದ ಡಾ. ಅಂಬೇಡ್ಕರರು ಬರೆದ ಸಂವಿಧಾನದ ಮೂಲ ಪಿಠೀಕೆಯನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಮಾತನಾಡಿ, ಫೇ ೧೧ ರಂದು ಯರಗಲ್ ಬಿ.ಕೆ ಗ್ರಾಮಕ್ಕೆ ಸಂವಿಧಾನ ರಥ ಆಗಮಿಸಲಿದ್ದು ನಂತರ ನಾಗಾವಿ ಬಿ.ಕೆ, ಸುಂಗಠಾಣ, ಯಂಕಂಚಿಗೆ ವಾಸ್ತವ್ಯವಾಗಲಿದೆ. ೧೨ ರಂದು ಗೋಲಗೇರಿ, ಹೊನ್ನಳ್ಳಿ, ಹಂದಿಗನೂರ, ಗುಬ್ಬೇವಾಡ ಗ್ರಾಮ ಪಂಚಾಯತಗಳ ಸಂಚರಿಸಿ ಬ್ಯಾಕೋಡ ಗ್ರಾಪಂಯಲ್ಲಿ ವಾಸ್ತವ್ಯವಾಗಲಿದೆ. ೧೩ ರಂದು ರಾಂಪೂರ ಪಿಎ, ಚಾಂದಕವಠೆ, ಚಟ್ಟರಕಿ ಯಿಂದ ಹಿಕ್ಕನಗುತ್ತಿಯಲ್ಲಿ ವಾಸ್ತವ್ಯ, ೧೪ ರಂದು ಬಂದಾಳ, ಕನ್ನೋಳ್ಳಿ, ಕೊಕಟನೂರ ನಂತರ ಸಿಂದಗಿಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಬೇರೆ ತಾಲೂಕಿಗೆ ಬಿಳ್ಕೊಡಲಾಗುವುದು ಎಲ್ಲ ಗ್ರಾಮ ಪಂಚಾಯತಿಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಅಲ್ಲದೆ ವಾಸ್ತವವಾದ ಗ್ರಾಂಪಯಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಂಡು ಸಂವಿಧಾನದ ಮೂಲ ಪೀಠಿಕೆಯ ಸಾರಾಂಶದ ಬಗ್ಗೆ ತಿಳುವಳಿಕೆ ನೀಡುವುದಲ್ಲದೆ ಅನುಭವಿಗಳಿಂದ ಉಪನ್ಯಾಸವಿದ್ದು ಇದು ಸಾರ್ವಜನಿಕ ಕಾರ್ಯಕ್ರಮವಾಗಬೇಕು ಎಂದು ಎಲ್ಲ ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಮಾಜಿ ಅದ್ಯಕ್ಷ ರಾಜಶೇಖರ ಕೂಚಬಾಳ, ದಸಂಸ ಜಿಲ್ಲಾ ಸಂ.ಸಂಚಾಲಕ ವೈ.ಸಿ.ಮಯೂರ, ರಾಜಶೇಖರ ಚೌರ ವಕೀಲರು, ಅಶೋಕ ಸುಲ್ಪಿ ಸಲಹೆ-ಸೂಚನೆ ನೀಡಿದರು.
ದಸಂಸ ಜಿಲ್ಲಾ ಸಂಚಾಲಕ ಚಂದ್ರಕಾಂತ ಸಿಂಗೆ, ಪರಸುರಾಮ ಕಾಂಬಳೆ, ರಣಧೀರ ಪಡೆ ರಾಜ್ಯ ಸಂಚಾಲಕ ಸಂತೋಷ ಮಣೀಗೆರಿ ಸೇರಿದಂತೆ ಕಹಲವು ಸಂಘಟನೆಗಳು ಸಹಮತ ಸೂಚಿಸಿದರು.
ಲಿಂಬೆ ಅಂಬಿವೃದ್ಧಿ ಮಂಡಳಿ ಮಾಜಿ ಅದ್ಯಕ್ಷ ಅಶೋಕ ಅಲ್ಲಾಪೂರ ಮಾತನಾಡಿ, ರಾಜ್ಯದಲ್ಲಿ ನಡೆಯುತ್ತಿರುವ ಜಯಂತಿಗಳು ಆಯಾ ಜಾತಿಗಳಿಗೆ ಸಿಮಿತವಾಗಿದ್ದು ವಿಷದನೀಯ ಸಂಗತಿ ಎಂದರು.
ತಾಪಂ ನೋಡಲ್ ಅಧಿಕಾರಿ ನಿತ್ಯಾನಂದ ಯಲಗೋಡ ಇದ್ದರು.
ಶಿರಸ್ತೆದಾರ ಜಿ.ಎಸ್.ರೋಡಗಿ ಸ್ವಾಗತಿಸಿ, ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

