ಬಸವನಬಾಗೇವಾಡಿ: ತಾಲೂಕಿನ ಮುತ್ತಗಿ ಗ್ರಾಮದಲ್ಲಿ ಕರ್ನಾಟಕ ಸಂಭ್ರಮ ೫೦ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಜ್ಯೋತಿ ರಥ ಯಾತ್ರೆಗೆ ಬುಧವಾರ ಸಂಜೆ ತಾಲೂಕಾಡಳಿತದಿಂದ ಅದ್ದೂರಿಯಾಗಿ ತಾಲೂಕಿಗೆ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಸ್ವಾಗತಿಸಿಕೊಂಡರು.
ಮುತ್ತಗಿ ಕ್ರಾಸ್‌ನಲ್ಲಿ ಜ್ಯೋತಿ ರಥಯಾತ್ರೆಗೆ ಸ್ವಾಗತಿಸಿಕೊಳ್ಳಲಾಯಿತು. ನಂತರ ಗ್ರಾಮದಲ್ಲಿ ಜರುಗಿದ ಮೆರವಣಿಗೆಯಲ್ಲಿ ಕುಂಭಮೇಳ, ಲೇಜಿಮ್, ಕೋಲಾಟ, ಕರಡಿ ಮಜಲು, ವಿವಿಧ ಮಕ್ಕಳ ಛದ್ಮವೇಷ ಗಮನ ಸೆಳೆದವು.
ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ, ತಾಪಂ ಅಧಿಕಾರಿ ಡಾ.ಯುವರಾಜ ಹನಗಂಡಿ, ಬಿಇಓ ವಸಂತ ರಾಠೋಡ ಮಾತನಾಡಿದರು.
ಮೆರವಣಿಗೆಯಲ್ಲಿ ಬಸ್ ಡಿಪೋ ವ್ಯವಸ್ಥಾಪಕ ಪಿ.ಕೆ.ಜಾಧವ, ಜಿಪಂ ಅಭಿಯಂತರ ವಿಲಾಸ ರಾಠೋಡ, ತಾಲೂಕು ಕಸಾಪ ಅಧ್ಯಕ್ಷ ಎಸ್.ಐ.ಡೋಣೂರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಿವಾನಂದ ಮಡಿಕೇಶ್ವರ, ಎಸ್.ಎಸ್.ಚಿಮ್ಮಲಗಿ, ಎಂ.ಬಿ.ತೋಟದ, ಬಿ.ವಿ.ಚಕ್ರಮನಿ, ಎಂ.ಎ.ಅಂಗಡಗೇರಿ, ಬಿ.ಎಫ್.ಮೇಟಿ, ಬಿ.ಬಿ.ಚಿಂಚೋಳಿ, ವೈ.ಕೆ.ಪತ್ತಾರ, ಸಿದ್ರಾಮ ಬಿರಾದಾರ, ಪ್ರೇಮಕುಮಾರ ಮ್ಯಾಗೇರಿ, ನಜೀರ ದಡ್ಡಿ, ಮಹೇಶ ಪೂಜಾರಿ, ಎಂ.ವಿ.ಗಬ್ಬೂರ,ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಾ ಪಾಟೀಲ, ಉಪಾಧ್ಯಕ್ಷೆ ಕವಿತಾ ಬಡಿಗೇರ, ಸದಸ್ಯರು, ಗ್ರಾಮದ ವಿವಿಧ ಶಾಲೆಯ ಸಿಬ್ಬಂದಿ ಸೇರಿದಂತೆ ಇತರರು ಭಾಗವಹಿಸಿದ್ದರು. ನಂತರ ಟಕ್ಕಳಕಿ ಗ್ರಾಮದಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚರಿಸಿ ಬಸವನಬಾಗೇವಾಡಿ ಪಟ್ಟಣಕ್ಕೆ ಆಗಮಿಸಿ ವಾಸ್ತವ್ಯ ಮಾಡಿತು.
Subscribe to Updates
Get the latest creative news from FooBar about art, design and business.
Related Posts
Add A Comment

