Author: editor.udayarashmi@gmail.com

ವಿಜಯಪುರ: ನಮ್ಮ ಹಿರಿಯರು ಹಾಕಿಕೊಟ್ಟ ಆಚಾರ-ವಿಚಾರ, ನಡೆ-ನುಡಿ, ಸಂಪ್ರದಾಯ-ನಂಬಿಕೆಗಳು ಇಂದು ಅಸ್ತಿತ್ವ ಕಳೆದುಕೊಳ್ಳುತ್ತಿವೆ.ಜಾತ್ರೆ – ಉತ್ಸವಗಳು ನಮಗೆ ಸಂಸ್ಕಾರ ಕಲಿಸುವ ಪಾಠ ಶಾಲೆಗಳಾಗಬೇಕು. ಅಂದಾಗ ಮಾನವನ ಜೀವನ ಮೌಲ್ಯಗೊಂಡು ಸಾರ್ಥಕವಾಗುತ್ತದೆ ಎಂದು ಕರ್ನಾಟಕ ಸರ್ಕಾರದ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಶಾಸಕ ಸಿ ಎಸ್ ನಾಡಗೌಡ್ರ (ಅಪ್ಪಾಜಿ) ಹೇಳಿದರು.ಮುದ್ದೇಬಿಹಾಳ ತಾಲ್ಲೂಕಿನ ಅಯ್ಯನಗುಡಿಯಲ್ಲಿ ಗಂಗಾಧರೇಶ್ವರ ಜಾತ್ರೆ ಪ್ರಯುಕ್ತ ಹಮ್ಮಿಕೊಂಡ “ಅಯ್ಯನಗುಡಿ ಉತ್ಸವ ೨೦೨೪ ” ಉದ್ಘಾಟಿಸಿ ಮಾತನಾಡುತ್ತಾ, ಇಂದು ಯುವಕರು ಸ್ವಾತಂತ್ರ್ಯದ ಹೆಸರಿನಲ್ಲಿ ಸ್ವೇಚ್ಛಾಚಾರವೆಸಗುತ್ತಾ ನಮ್ಮ ಸನಾತನ ಸಂಪ್ರದಾಯ ದಿಕ್ಕರಿಸುತ್ತಿದ್ದಾರೆ. ಪಾಲಕರು ಮಕ್ಕಳ ನಡುವಳಿಕೆಯ ಮೇಲೆ ನಿಗಾ ಇರಿಸಿ, ಅವರ ಬದುಕು ಸುಂದರವಾಗಿಸಲು ಕಾರಣಿಭೂತರಾಗಲು ಕರೆ ನೀಡಿದರು.ಜಾತ್ರೆ – ಉತ್ಸವಗಳಲ್ಲಿ ಸಾಂಸ್ಕೃತಿಕ ಮೌಲ್ಯಗಳು ಕುರಿತು ಉಪನ್ಯಾಸ ನೀಡಿದ ಜನಪದ ಸಾಹಿತಿ ಶಂಕರ ಬೈಚಬಾಳ, ಪ್ರತಿಯೊಬ್ಬ ಮನುಷ್ಯ ಸಾಮಾಜಿಕ ಹೊಣೆಗಾರಿಕೆಯಿಂದ ಬದುಕಬೇಕು. ನನ್ನ ಪಾಲಿನ ಕರ್ತವ್ಯ ನಾನು ಮೌಲ್ಯಯುತವಾಗಿ ನಡೆಸಿಕೊಂಡು ಹೋಗಬೇಕು. ಹಿರಿಯರ ಅನುಭವದ ಕುಲುಮೆಯಲ್ಲಿ ಹುಟ್ಟಿಕೊಂಡ ಜಾತ್ರೆ, ಉತ್ಸವ, ಆಚರಣೆ, ಸಂಪ್ರದಾಯ,…

Read More

ಬ್ರಹ್ಮದೇವನಮಡು: ಸಾವ೯ಕಾಲಿಕ ಸತ್ಶ ಪ್ರತಿಪಾದಿಸಿದ ತ್ರಿಪದಿ ಬ್ರಹ್ಮ, ಶ್ರೇಷ್ಟ ಕವಿ ಸವ೯ಜ್ಞ ಎಂದು ಗ್ರಾಪಂ ಅಧ್ಶಕ್ಷ ಸಂಗನಗೌಡ ಬಿರಾದಾರ ಹೇಳಿದರು.ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸವ೯ಜ್ಞ ಅವರ ಜಯಂತಿ ಕಾಯ೯ಕ್ರಮದಲ್ಲಿ ಸವ೯ಜ್ಞ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.ಸಜ್ಜನರ ಸಂಗಮದ ಹೆಜ್ಜೇನ ಸವಿದಂತೆ ದುಜ೯ನರ ಸಂಗ ಬಚ್ಚಲ ಕೊಚ್ಚೆಯಂತಿಹದು ಸವ೯ಜ್ಞ ಸಾವಿರಾರು ತ್ರಿಪದಿಗಳ ಮೂಲಕ ಸಮಾಜಕ್ಕೆ ಮಾಗ೯ದಶ೯ನ ನೀಡಿದ್ದಾರೆ ಎಂದರು.ಈ ಸಂದಭ೯ದಲ್ಲಿ ತಾಲೂಕು ಸಾಮಾಜಿಕ ಲೆಕ್ಕ ಪರಿಶೋಧಕ ಶಂಕರ ಇಂಗಳಗಿ, ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ, ಕಾಯ೯ದಶಿ೯ ಚಾಂದಸಾಬ ಕೋರಬು, ಪತ್ರಕತ೯ ಮಲ್ಲು ಕೆಂಭಾವಿ, ಗ್ರಾಮ ಸಂಪನ್ಮೂಲ ವ್ಶಕ್ತಿ ಅಲ್ಪಾ ಪೂಜಾರಿ, ಭಾಗ್ಶಶ್ರೀ ಕನ್ನೂರ, ರೇಶ್ಮಾ ಪವಾರ, ಮರೇಪ್ಪ ಚಲುವಾದಿ, ಚಾಂದಾಬಾಷಾ ದಗಾ೯, ಸಿಪಾಯಿ ಮಲ್ಲಪ್ಪ ನಾಯ್ಕೋಡಿ, ಗ್ರಾಮ ಕಾಯಕ ಮಿತ್ರ ಭೀಮವ್ವ ಮಾದರ, ಸುರೇಶ ತಳವಾರ, ಉಮೇಶ ಯಲಗೋಡ ಸೇರಿದಂತೆ ಮತ್ತಿತರಿದ್ದರು.

Read More

ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಕಣ್ಣಗುಡ್ಡಿಹಾಳ ಗ್ರಾಮದ ಯುವ ಮುಖಂಡ ಬಾಪುಗೌಡ ಎಂ.ಪಾಟೀಲ ಅವರನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ವಿಜಯಪುರ ಜಿಲ್ಲಾ ಸಂಘಟನೆ ಕಾಯ೯ದಶಿ೯ಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜಾಧ್ಶಕ್ಷ ಪಿ.ಕೃಷ್ಣಗೌಡರ ತಿಳಿಸಿದ್ದಾರೆ.

Read More

ಆಲಮಟ್ಟಿ: ಜಿಲ್ಲೆಯ ೯೯ ಕೆರೆಗಳ ಭರ್ತಿಗಾಗಿ ಸೋಮವಾರದಿಂದ ಆಲಮಟ್ಟಿ ಎಡದಂಡೆ ಕಾಲುವೆಯ ಮೂಲಕ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಕಾಲುವೆಗೆ ಹಾಗೂ ಬಳೂತಿ ಜಾಕವೆಲ್ ಮೂಲಕ ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಗಳಿಗೆ ನೀರು ಹರಿಸಲು ಆರಂಭಿಸಲಾಯಿತು.ಆ ಕೆರೆಗಳ ಸಾಮರ್ಥ್ಯದ ಶೇ ೫೦ ರಷ್ಟು ಕೆರೆಗಳನ್ನು ಭರ್ತಿ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ.ಬಸವರಾಜ ತಿಳಿಸಿದರು.ಕಟ್ಟುನಿಟ್ಟಿನ ಕ್ರಮ:ಕಾಲುವೆಗೆ ಹರಿಸುತ್ತಿರುವ ನೀರನ್ನು ಕಟ್ಟುನಿಟ್ಟಾಗಿ ಕೆರೆಗಳ ಭರ್ತಿಗೆ ನಾನಾ ಇಲಾಖೆಯವರು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು, ನಿತ್ಯವೂ ಕೆರೆಗಳ ಭರ್ತಿಯ ಬಗ್ಗೆ ಚಿತ್ರ ಸಮೇತ ವರದಿ ಸಲ್ಲಿಸಬೇಕು, ನೀರು ಯಾವುದೇ ಕಾರಣಕ್ಕೂ ಪೋಲಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಬಿಸಲಿನ ಪ್ರಖರತೆ ಹೆಚ್ಚುತ್ತಿದ್ದು, ನೀರಿನ ಸಂಗ್ರಹ, ಬಳಕೆಯ ಬಗ್ಗೆ ಎಚ್ಚರದಿಂದ ಹೆಜ್ಜೆ ಇಡಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.೯೯ ಕೆರೆಗಳು:ಕೆಲ ತಾಂತ್ರಿಕ ತೊಂದರೆ ಹಾಗೂ ಕೆರೆಗಳಿಗೆ ಸಂಪರ್ಕಿಸುವ ಕಾಲುವೆಯ ಜಾಲ ಇಲ್ಲದ್ದರಿಂದ ಮುಳವಾಡ ಏತ ನೀರಾವರಿ ಯೋಜನೆಯಡಿ ಒಂದು, ಚಿಮ್ಮಲಗಿ ಯೋಜನೆಯಡಿ ಏಳು ಕೆರೆಗಳನ್ನು ಭರ್ತಿ…

Read More

ಮುದ್ದೇಬಿಹಾಳ: ಸಧ್ಯದ ಪರಿಸ್ಥಿಯಲ್ಲಿ ಮಹಾನ್ ವ್ಯಕ್ತಿಗಳ ಜಯಂತಿಗಳು ಒಂದು ಸಮಾಜಕ್ಕೆಮಾತ್ರ ಸೀಮಿತವಾಗುತ್ತಿವೆ. ಸರ್ಕಾರ ಕೂಡಲೇ ಮಹಾನ್ ವ್ಯಕ್ತಿಗಳನ್ನು ರಾಷ್ಟ್ರೀಯ ನಾಯಕರು ಅಂತಾ ಘೋಷಿಸಬೇಕು ಎಂದು ಹಿಂದೂ ಪರ ಸಂಘಟನೆಗಳ ಮುಖಂಡ ಉದಯ ರಾಯಚೂರ ಹೇಳಿದರು.ಪಟ್ಟಣದ ತಹಶೀಲ್ದಾರ ಕಚೇರಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.ಜಯಂತ್ಯೋತ್ಸವಗಳು ನೆಪಮಾತ್ರಕ್ಕೆ ಒಂದು ದಿನದ ಸಂಭ್ರಮಕ್ಕೆ ಸೀಮಿತಗೊಳಿಸದೇ ರಾಷ್ಟ್ರೀಯ ಪರಿಕಲ್ಪನೆಯನ್ನು ಕೊಟ್ಟಲ್ಲಿ ಜಯಂತಿಗಳ ಆಚರಣೆಗಳಿಗೆ ನಿಜವಾದ ಮೌಲ್ಯ ಬರುತ್ತದೆ ಎಂದರು.ಕ್ಷತ್ರೀಯ ಸಮಾಜದ ಮುಖಂಡ ನೇತಾಜಿ ನಲವಡೆ ಮಾತನಾಡಿ, ಕರ್ನಾಟಕದಲ್ಲಿ ನಮ್ಮ ಸಮಾಜದ ಒಳಪಂಗಡಗಳ ಬಾಂಧವರು ೬೦ ಲಕ್ಷದಷ್ಟು ಇದ್ದು, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ೧೩ನೇ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಸಮಾಜದಲ್ಲಿರದ ಒಗ್ಗಟ್ಟು. ನಮ್ಮಲ್ಲಿಯ ಅಸಮಾಧನಗಳನ್ನು ಹೊರತರದೇ ಎಲ್ಲ ಬಾಂಧವರೂ ಒಂದಾಗಿ ಸಂಘಟನೆಯನ್ನು ಮುಂದುವರೆಸುವಂತಾಗಬೇಕು ಎಂದರು.ಪ್ರೊ.ಪ್ರಕಾಶ ನರಗುಂದ ವಿಶೇಷ ಉಪನ್ಯಾಸ ನೀಡಿದರು.ಸಮಾಜದ ಮುಖಂಡ ರಾಜೇಂದ್ರ ನಲವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಶಿರಸ್ತೇದಾರರಾದ ಎಂ.ಎ.ಬಾಗೇವಾಡಿ, ಎಸ್.ಎಂ.ಸಜ್ಜನ, ಭರತ ಭೋಸಲೆ, ನಿಂಗರಾಜ ಮಹೇಂದ್ರಕರ, ರವಿ ಭೋಸಲೆ, ಅಜಯ…

Read More

ಚಡಚಣ: ಇತ್ತೀಚೆಗೆ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಆಲಂಗಿಸಿದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚಂದ್ರಶೇಖರ (ಕಾಂತೂಗೌಡ) ಪಾಟೀಲ ಅವರು ಚಡಚಣ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಆದೇಶ ಹೊರಬೀಳುತ್ತಿದ್ದಂತೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಹಾರು ತುರಾಯಿ ಹಾಕಿ ನಗರದ ತುಂಬೆಲ್ಲ ಬೈಕ್‌ ರ್ಯಾಲಿ ಮಾಡಿ ಸಂಭ್ರಮಿಸಿದರು.ನೂತನ ಮಂಡಲ ಅಧ್ಯಕ್ಷ ಚಂದ್ರಶೇಖರ (ಕಾಂತೂಗೌಡ) ಪಾಟೀಲ ಮಾತನಾಡಿ, ಹಿಂದಿನ ಅಧ್ಯಕ್ಷರಿಗೆ ಸಹಕರಿಸಿದಂತೆ ಕಾರ್ಯಕರ್ತರು ಹಾಗೂ ಮುಕಂಡರು ನಮ್ಮನ್ನು ಸಹಕರಿಸಬೇಕು ಹಾಗೂ ತಮ್ಮಲ್ಲಿ ತಪ್ಪು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತಂದರೆ ನಾನು ತಿದ್ದಿಕೊಳ್ಳಲು ಸದಾ ಸಿದ್ದ ಎಂದ ಅವರು, ತಾಲೂಕಿನಲ್ಲಿ ಪಕ್ಷ ಸಂಘಟನೆ ಗಟ್ಟಿಗೊಳಿಸಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸೊಣ ಎಂದರು.ಬಿಜೆಪಿ ಮುಖಂಡ ಪ್ರಮೋದ ಮಠ ಮಾತನಾಡಿದರು.ಮಾಜಿ ಮಂಡಲ ಅಧ್ಯಕ್ಷ ರಾಮ ಅವಟಿ ಮಾತನಾಡಿ, ಪಕ್ಷ ಸಂಘಟನೆ ಹಾಗೂ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ತರುವುದೇ ನಮ್ಮ…

Read More

ಚಡಚಣ: ಪಟ್ಟಣದ ಹೊರವಲಯದಲ್ಲಿ ಎರಡು ಸರಕಾರಿ ಬಸ್‌ಗಳ ನಡುವೆ ಹಿಂಬದಿಯಿಂದ ಅಪಘಾತ ಸಂಭವಿಸಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್‌ ಪ್ರಾಣಾಪಾಯದಂದ ಪಾರಾದ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.ಈ ಘಟನೆ ಇಂಡಿಯಿಂದ ಹಲಸಂಗಿ ಬತಗುಣಕಿ ಮಾರ್ಗವಾಗಿ ಚಡಚಣಕ್ಕೆ ತೆರಳುತ್ತಿದ್ದ ಎರಡು ಕೆಎಸ್‌ಆರ್‌ಟಿಸಿ ಬಸ್‌ ಗಳ ಎದುರಿನಿಂದ ವೇಗವಾಗಿ ಬಂದಂತಹ ಶಾಲಾ ವಾಹನದ ಕಾರಣದಿಂದಾಗಿ ಸಂಭವಿಸಬಹುದಾದ ಅಪಘಾತ ತಪ್ಪಿಸುವುದಕ್ಕೋಸ್ಕರ ಸರಕಾರಿ ಬಸ್‌ ಚಾಲಕನೋರ್ವ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿದ್ದಾನೆ. ಆದರೆ ಇದರ ಹಿಂಬದಿಯಲ್ಲಿ ಇದೇ ರಸ್ತೆಯಲ್ಲಿ ಬರುತ್ತಿದ್ದಂತಹ ಇನ್ನೊಂದು ಸರಕಾರಿ ಬಸ್‌ ಚಾಲಕ ಸಹ ಬ್ರೇಕ್‌ ಹಾಕಲು ಯತ್ನಿಸಿದ್ದಾನಾದರೂ ಮುಂದಿನ ಬಸ್‌ಗೆ ಚಾಲಕನ ನಿಯಂತ್ರಣ ತಪ್ಪಿ ಮುಂಬದಿಯ ಬಸ್‌ಗೆ ಹಿಂಬದಿಯಿಂದ ಬಸ್‌ ಢಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ.ಕೆಎ-28 ಎಫ್-1727 ಮತ್ತು ಕೆಎ-28 ಎಫ್-1766 ಸಂಖ್ಯೆಯ ಸರಕಾರಿ ಬಸ್‌ʼಗಳ ಡಿಕ್ಕಿಯಾದ ಪರಿಣಾಮ ಬಸ್‌ ಮುಂಬದಿ ಹಾಗೂ ಹಿಂಬದಿ ಭಾಗ ಜಖಂಗೊಂಡಿದೆ. ಬಸ್‌ಗಳಲ್ಲಿ ಚಡಚಣ ಪಟ್ಟಣಕ್ಕೆ ಪರೀಕ್ಷೆಗೆ ಆಗಮಿಸುತ್ತಿದ್ದ ಕಾಲೇಜು…

Read More

ಕೆಂಭಾವಿ: ಲಾರಿಗೆ ಬೈಕ್ ಡಿಕ್ಕಿಯಾಗಿ ಸ್ಥಳದಲ್ಲೇ ಈರ್ವರು ಸಾವನ್ನಪ್ಪಿದ ದುರ್ಘಟನೆ ಕೆಂಭಾವಿ ಹೊರವಲಯದಲ್ಲಿ ನಡೆದಿದೆ.ಬೈಕ್ ಸವಾರರಾದ ಶಿವನಗೌಡ ಹೊಸಮನಿ ( 25) ಹಾಗೂ ಲಕ್ಷ್ಮಣ (24) ಸ್ಥಳದಲ್ಲೇ ಸಾವನ್ನಪ್ಪಿದ ದುರ್ದೈವಿಗಳು.ಮೃತರು ಬೊಮ್ಮನಹಳ್ಳಿ ಗ್ರಾಮದ ನಿವಾಸಿಗಳಾಗಿದ್ದು, ಕೆಂಭಾವಿಯಿಂದ ಬೊಮ್ಮನಹಳ್ಳಿ ಗ್ರಾಮಕ್ಕೆ ಬೈಕ್ ಮೇಲೆ ತೆರಳುವಾಗ ಹತ್ತಿ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರೂ ಯುವಕರು ದುರ್ಮರಣ ಹೊಂದಿದ್ದಾರೆನ್ನಲಾಗಿದೆ.ಸ್ಥಳಕ್ಕೆ ಕೆಂಭಾವಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Read More

ಯಡ್ರಾಮಿ: ಸಿಂದಗಿ ತಾಲ್ಲೂಕಿನ ಸರ್ವಧರ್ಮ ಪ್ರತಿಷ್ಠಾನದ ವತಿಯಿಂದ ಶಿಕ್ಷಕ ಸೈಯದ್ ಪಟೇಲ್ ಮಳ್ಳಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸೈಯದ್ ಪಟೇಲ್ ಅವರ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಪ್ರಾಮಾಣಿಕತೆ ಮತ್ತು ಗುಣಾತ್ಮಕ ಶಿಕ್ಷಣ ಬೋಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿಲಾನಿ ಮುಲ್ಲಾ ಅವರು ತಿಳಿಸಿದರು.ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಭಾಜನರಾದ ಸೈಯದ್ ಪಟೇಲ್ ಅವರಿಗೆ ಗ್ರಾಮದ ವೀರಭದ್ರ ಪತ್ತಾರ, ಗೊಲ್ಲಾಳಪ್ಪ ನವಲಗುಂದ, ಅರವಿಂದ ಪೊಲೀಸ್ ಪಾಟೀಲ, ದಸ್ತಗೀರ ಖಾಜಿ, ಮುರ್ತುಜಾ ಅವಟಿ, ಭಗವಂತರಾಯ ಬೆಣ್ಣೂರ, ಇತರರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.

Read More