ಚಡಚಣ: ಪಟ್ಟಣದ ಹೊರವಲಯದಲ್ಲಿ ಎರಡು ಸರಕಾರಿ ಬಸ್‌ಗಳ ನಡುವೆ ಹಿಂಬದಿಯಿಂದ ಅಪಘಾತ ಸಂಭವಿಸಿ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಂದ ಪಾರಾದ ಘಟನೆ ಸೋಮವಾರ ಬೆಳಗಿನ ಜಾವ ಸಂಭವಿಸಿದೆ.
ಈ ಘಟನೆ ಇಂಡಿಯಿಂದ ಹಲಸಂಗಿ ಬತಗುಣಕಿ ಮಾರ್ಗವಾಗಿ ಚಡಚಣಕ್ಕೆ ತೆರಳುತ್ತಿದ್ದ ಎರಡು ಕೆಎಸ್‌ಆರ್‌ಟಿಸಿ ಬಸ್ ಗಳ ಎದುರಿನಿಂದ ವೇಗವಾಗಿ ಬಂದಂತಹ ಶಾಲಾ ವಾಹನದ ಕಾರಣದಿಂದಾಗಿ ಸಂಭವಿಸಬಹುದಾದ ಅಪಘಾತ ತಪ್ಪಿಸುವುದಕ್ಕೋಸ್ಕರ ಸರಕಾರಿ ಬಸ್ ಚಾಲಕನೋರ್ವ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದ್ದಾನೆ. ಆದರೆ ಇದರ ಹಿಂಬದಿಯಲ್ಲಿ ಇದೇ ರಸ್ತೆಯಲ್ಲಿ ಬರುತ್ತಿದ್ದಂತಹ ಇನ್ನೊಂದು ಸರಕಾರಿ ಬಸ್ ಚಾಲಕ ಸಹ ಬ್ರೇಕ್ ಹಾಕಲು ಯತ್ನಿಸಿದ್ದಾನಾದರೂ ಮುಂದಿನ ಬಸ್‌ಗೆ ಚಾಲಕನ ನಿಯಂತ್ರಣ ತಪ್ಪಿ ಮುಂಬದಿಯ ಬಸ್‌ಗೆ ಹಿಂಬದಿಯಿಂದ ಬಸ್ ಢಿಕ್ಕಿಯಾದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಕೆಎ-28 ಎಫ್-1727 ಮತ್ತು ಕೆಎ-28 ಎಫ್-1766 ಸಂಖ್ಯೆಯ ಸರಕಾರಿ ಬಸ್ʼಗಳ ಡಿಕ್ಕಿಯಾದ ಪರಿಣಾಮ ಬಸ್ ಮುಂಬದಿ ಹಾಗೂ ಹಿಂಬದಿ ಭಾಗ ಜಖಂಗೊಂಡಿದೆ. ಬಸ್‌ಗಳಲ್ಲಿ ಚಡಚಣ ಪಟ್ಟಣಕ್ಕೆ ಪರೀಕ್ಷೆಗೆ ಆಗಮಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ 40ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಇನ್ನು ಎಂಟರಿಂದ 10 ಜನ ಪ್ರಯಾಣಿಕರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಪ್ರಕರಣ ಚಡಚಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

