ಚಡಚಣ: ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಆಲಂಗಿಸಿದ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಚಂದ್ರಶೇಖರ (ಕಾಂತೂಗೌಡ) ಪಾಟೀಲ ಅವರು ಚಡಚಣ ಮಂಡಲ ಅಧ್ಯಕ್ಷರಾಗಿ ಆಯ್ಕೆಯಾದ ಆದೇಶ ಹೊರಬೀಳುತ್ತಿದ್ದಂತೆ ತಾಲೂಕಿನ ಬಿಜೆಪಿ ಕಾರ್ಯಕರ್ತರು ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಹಾರು ತುರಾಯಿ ಹಾಕಿ ನಗರದ ತುಂಬೆಲ್ಲ ಬೈಕ್ ರ್ಯಾಲಿ ಮಾಡಿ ಸಂಭ್ರಮಿಸಿದರು.
ನೂತನ ಮಂಡಲ ಅಧ್ಯಕ್ಷ ಚಂದ್ರಶೇಖರ (ಕಾಂತೂಗೌಡ) ಪಾಟೀಲ ಮಾತನಾಡಿ, ಹಿಂದಿನ ಅಧ್ಯಕ್ಷರಿಗೆ ಸಹಕರಿಸಿದಂತೆ ಕಾರ್ಯಕರ್ತರು ಹಾಗೂ ಮುಕಂಡರು ನಮ್ಮನ್ನು ಸಹಕರಿಸಬೇಕು ಹಾಗೂ ತಮ್ಮಲ್ಲಿ ತಪ್ಪು ಕಂಡುಬಂದಲ್ಲಿ ನಮ್ಮ ಗಮನಕ್ಕೆ ತಂದರೆ ನಾನು ತಿದ್ದಿಕೊಳ್ಳಲು ಸದಾ ಸಿದ್ದ ಎಂದ ಅವರು, ತಾಲೂಕಿನಲ್ಲಿ ಪಕ್ಷ ಸಂಘಟನೆ ಗಟ್ಟಿಗೊಳಿಸಿ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಸರಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸೊಣ ಎಂದರು.
ಬಿಜೆಪಿ ಮುಖಂಡ ಪ್ರಮೋದ ಮಠ ಮಾತನಾಡಿದರು.
ಮಾಜಿ ಮಂಡಲ ಅಧ್ಯಕ್ಷ ರಾಮ ಅವಟಿ ಮಾತನಾಡಿ, ಪಕ್ಷ ಸಂಘಟನೆ ಹಾಗೂ ಕೇಂದ್ರದಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ತರುವುದೇ ನಮ್ಮ ಮುಂದಿನ ದ್ಯೇಯ ಎಂದರು.
ಸಂಭ್ರಮಾಚರಣೆಯಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ರಾಜೂ ಕೋಳಿ, ಶ್ರೀಕಾಂತ ಗಂಟಗಲ್ಲಿ, ಧರ್ಮಣ್ಣ ಬನಸೋಡೆ, ಅಶೋಕ ಗಂಟಗಲ್ಲಿ, ಟರವಿಂದ ಗಡ್ಡದೇವರ ಮಠ, ಬಾಲಾಜಿ ಗಾಡಿವಡ್ಡರ, ಮಲ್ಲು ದೋತ್ರೆ, ಕಾರ್ಯಕರ್ತರಾದ ಮಹಾದೇವ ಯಂಕಂಚಿ , ನಾಗರಾಜ ನಿರಾಳೆ, ಎಮ್ ಆರ್ ಹಿಟ್ನಳ್ಳಿ,ಸಚಿನ ಭಮಶೆಟ್ಟಿ, ಬಾಬುಗೌಡ ಬಿರಾದಾರ, ಅಂಬಣ್ಣ ಹುಗಾರ, ಚೇತನ ಮಠ, ಅನೀಲ ಪಾಟೀಲ, ಕಾಶಿನಾಥ ಹೊಸಮನಿ, ಪ್ರವೀಣ ಜೂಜಗಾರ, ಮಹೇಶ ಚೌಧರಿ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

