ಯಡ್ರಾಮಿ: ಸಿಂದಗಿ ತಾಲ್ಲೂಕಿನ ಸರ್ವಧರ್ಮ ಪ್ರತಿಷ್ಠಾನದ ವತಿಯಿಂದ ಶಿಕ್ಷಕ ಸೈಯದ್ ಪಟೇಲ್ ಮಳ್ಳಿ ಅವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸೈಯದ್ ಪಟೇಲ್ ಅವರ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಪ್ರಾಮಾಣಿಕತೆ ಮತ್ತು ಗುಣಾತ್ಮಕ ಶಿಕ್ಷಣ ಬೋಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಜಿಲಾನಿ ಮುಲ್ಲಾ ಅವರು ತಿಳಿಸಿದರು.
ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಭಾಜನರಾದ ಸೈಯದ್ ಪಟೇಲ್ ಅವರಿಗೆ ಗ್ರಾಮದ ವೀರಭದ್ರ ಪತ್ತಾರ, ಗೊಲ್ಲಾಳಪ್ಪ ನವಲಗುಂದ, ಅರವಿಂದ ಪೊಲೀಸ್ ಪಾಟೀಲ, ದಸ್ತಗೀರ ಖಾಜಿ, ಮುರ್ತುಜಾ ಅವಟಿ, ಭಗವಂತರಾಯ ಬೆಣ್ಣೂರ, ಇತರರು ಹರ್ಷ ವ್ಯಕ್ತಪಡಿಸಿ, ಅಭಿನಂದನೆ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

